ಶ್ರೀರಂಗಪಟ್ಟಣ ಚಲೋಗೆ ಅವಕಾಶ ಇಲ್ಲ ; 144 ಸೆಕ್ಷನ್ ಜಾರಿ, ಆದೇಶದಲ್ಲಿ ಮಸೀದಿ ಕಟ್ಟಡ ಆಂಜನೇಯ ಸ್ವಾಮಿ ಎಂದೇ ಉಲ್ಲೇಖ !

02-06-22 09:11 pm       HK News Desk   ಕರ್ನಾಟಕ

ಟಿಪ್ಪು ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿತ್ತು ಎನ್ನಲಾದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇಗುಲ ಆಗಿತ್ತು ಎನ್ನುವುದು ಹಿಂದು ಸಂಘಟನೆಗಳ ವಾದ.

ಮಂಡ್ಯ, ಜೂನ್ 2: ಟಿಪ್ಪು ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿತ್ತು ಎನ್ನಲಾದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇಗುಲ ಆಗಿತ್ತು ಎನ್ನುವುದು ಹಿಂದು ಸಂಘಟನೆಗಳ ವಾದ. ಅದೇ ಕಾರಣಕ್ಕಾಗಿ ಅಲ್ಲಿ ಪೂಜೆ ಮಾಡಲು ಅವಕಾಶ ಕೊಡಬೇಕೆಂದು ಹೇಳಿ ಜೂನ್ 4ರಂದು ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿವೆ. ಆದರೆ, ಹಿಂದು ಸಂಘಟನೆಗಳ ಚಲೋ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿದೆ.

ವಿಶೇಷ ಅಂದ್ರೆ, ಸೆಕ್ಷನ್ ಜಾರಿಗೊಳಿಸಿ ತಹಸೀಲ್ದಾರ್ ಹೊರಡಿಸಿರವ ಆದೇಶದಲ್ಲಿ ಜಾಮಿಯಾ ಮಸೀದಿ ಎಂದು ಬರೆದು ಬ್ರಾಕೆಟ್ ನಲ್ಲಿ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇಗುಲ ಎಂದೇ ನಮೂದಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತದ ದಾಖಲೆಗಳಲ್ಲಿಯೂ ಪ್ರಾಚ್ಯವಸ್ತು ಇಲಾಖೆಗೆ ಸೇರಿರುವ ಈ ಕಟ್ಟಡದ ಬಗ್ಗೆ ಆಂಜನೇಯ ಸ್ವಾಮಿ ದೇಗುಲ ಎಂದೇ ದಾಖಲಾಗಿದೆಯಾ ಅನ್ನುವ ಜಿಜ್ಞಾಸೆ ಮೂಡಿದೆ. ಈ ಬಗ್ಗೆ ಅಲ್ಲಿನ ಹಿಂದು ಸಂಘಟನೆಗಳ ನಾಯಕರು, ಕಾರ್ಯಕರ್ತರು ಕೂಡ ಚರ್ಚಿಸುವಂತಾಗಿದೆ.

ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಹೊರಡಿಸಿರುವ ಆದೇಶ ಪತ್ರದಲ್ಲಿ ಇದೇ ರೀತಿ ಉಲ್ಲೇಖ ಆಗಿದೆ. ಕುವೆಂಪು ವೃತ್ತದಿಂದ ಹಾಲಿ ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಶ್ರೀರಂಗಪಟ್ಟಣ ಪುರಸಭೆ ವೃತ್ತದ ಬಳಿ ಇರುವ ಜಾಮಿಯಾ ಮಸೀದಿ ವರೆಗೆ (ಶ್ರೀ ಮೂಡಲಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರಕ್ಕೆ) ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮವನ್ನು ಹಿಂದು ಸಂಘಟನೆಗಳು ಹಮ್ಮಿಕೊಂಡಿರುವುದರಿಂದ ಯಾವುದೇ ಪ್ರತಿಭಟನೆ, ಜಾಥಾ, ಮೆರವಣಿಗೆ ನಡೆಸದಂತೆ ಜೂನ್ 3ರ ಸಂಜೆ 6ರಿಂದ ಜೂನ್ 5ರ ಬೆಳಗ್ಗೆ 6ರ ವರೆಗೆ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಆದೇಶ ಪತ್ರ ಹೊರಡಿಸಿದ್ದಾರೆ.

ಅಧಿಕಾರಿಗಳ ಆದೇಶ ಪ್ರತಿಯಲ್ಲಿ ಜಾಮಿಯಾ ಮಸೀದಿಯೇ ಮೂಡಲಬಾಗಿಲು ಆಂಜನೇಯಸ್ವಾಮಿ ಮೂಲ ಮಂದಿರ ಎಂಬ ಬಗ್ಗೆ ಉಲ್ಲೇಖ ಆಗಿರುವುದು ಕುತೂಹಲ ಮೂಡಿಸಿದ್ದು, ಹಿಂದು ಸಂಘಟನೆಗಳ ಕಾರ್ಯಕರ್ತರು ಈ ಆದೇಶ ಪತ್ರವನ್ನು ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಜಾಮಿಯಾ ಮಸೀದಿಯು ಪುರಾತತ್ವ ಇಲಾಖೆಯ ಅಧೀನದಲ್ಲಿದ್ದರೂ, ಅಲ್ಲಿ ಮದ್ರಸ ನಡೆಸಲಾಗುತ್ತಿದೆ. ಅಲ್ಲಿರುವ ದೇವಸ್ಥಾನದ ವಿಗ್ರಹಗಳನ್ನು ಭಗ್ನಗೊಳಿಸುವ ಕೆಲಸ ಆಗುತ್ತಿದೆ. ಹೀಗಾಗಿ ಅಲ್ಲಿನ ಮದ್ರಸ ನಡೆಸಲು ಅವಕಾಶ ನೀಡಬಾರದು. ಮದ್ರಸಕ್ಕೆ ಅವಕಾಶ ಕೊಟ್ಟರೆ, ಹಿಂದುಗಳಿಗೆ ಪೂಜೆ ನಡೆಸುವುದಕ್ಕೂ ಅವಕಾಶ ಕೊಡಬೇಕು ಎಂದು ಹಿಂದು ಸಂಘಟನೆಗಳು ಶ್ರೀರಂಗಪಟ್ಟಣ ಚಲೋಗೆ ಕರೆ ಕೊಟ್ಟಿದ್ದವು. ಟಿಪ್ಪು ಕಾಲದಲ್ಲಿ ಆಂಜನೇಯ ಸ್ವಾಮಿ ದೇಗುಲವನ್ನು ವಶಕ್ಕೆ ಪಡೆದು ಅಲ್ಲಿ ಜಾಮಿಯಾ ಮಸೀದಿ ಸ್ಥಾಪಿಸಿದ್ದ ಬಗ್ಗೆ ಸರಕಾರದ ದಾಖಲೆಗಳಲ್ಲಿ ಇರುವುದಾಗಿ ಹಿಂದು ಸಂಘಟನೆಗಳು ಹೇಳಿದ್ದವು.

Mandya Police on Thursday decided to impose Section 144 ahead of "Srirangapatna Chalo" organised by Vishwa Hindu Parishad against the disputed Jamia Masjid in Mandya district on June 4. The restrictions under Section 144 of the CRPC will be effective from 3 pm on June 3 to 12 noon on June 5. Reacting to the restrictions, the VHP flayed the state government for imposing Section 144 on the march instead of clearing the madrasas being run inside the masjid complex which it claims was a Hanuman temple that was demolished by erstwhile Mysuru ruler Tipu Sultan.