ಪಠ್ಯಪುಸ್ತಕ ವಿವಾದ ; ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬರ್ಖಾಸ್ತು ! ಕುವೆಂಪು ನಾಡಗೀತೆ ವಿರೂಪದ ಬಗ್ಗೆ ಸೈಬರ್ ತನಿಖೆಗೆ ಆದೇಶ 

04-06-22 11:45 am       Bengalore Correspondent   ಕರ್ನಾಟಕ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ಅಂತ್ಯ ಹಾಡಲು ರಾಜ್ಯ ಸರಕಾರ ಮುಂದಾಗಿದ್ದು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ವಿಸರ್ಜಿಸಿ ಆದೇಶ ಹೊರಡಿಸಿದೆ

ಬೆಂಗಳೂರು, ಜೂನ್ 4: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ಅಂತ್ಯ ಹಾಡಲು ರಾಜ್ಯ ಸರಕಾರ ಮುಂದಾಗಿದ್ದು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ವಿಸರ್ಜಿಸಿ ಆದೇಶ ಹೊರಡಿಸಿದೆ. ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾತುಕತೆ ಬಳಿಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜಿಸಲು ನಿರ್ಧಾರ ಕೈಗೊಂಡಿದ್ದಾರೆ. 

ಇದಲ್ಲದೆ, ಪಂಡಿತಾರಾಧ್ಯ ಸ್ವಾಮಿಗಳು ಮತ್ತು ಬಾಲಗಂಗಾಧರನಾಥ ಸ್ವಾಮಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಬಸವಣ್ಣ ಮತ್ತು ಕುವೆಂಪು ಕುರಿತ ಆಕ್ಷೇಪಾರ್ಹ ವಿಚಾರಗಳನ್ನು ಕೈಬಿಟ್ಟು ಸರಿಪಡಿಸಲು ನಿರ್ಧಾರಕ್ಕೆ ಬರಲಾಗಿದೆ. ಸದ್ಯಕ್ಕೆ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಕೆಲಸ ಮುಗಿದಿರುವುದರಿಂದ ಸಮಿತಿಯನ್ನು ವಿಸರ್ಜನೆ ಮಾಡಲಾಗುವುದು‌.‌ ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಅಗತ್ಯ ಇದ್ದರೆ ಅದನ್ನು ಮಾಡಲು ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

textbook Controversy Rohith Chakrathirtha committee disbanded by Government

ಬಸವಣ್ಣನ ಕುರಿತ ಪಠ್ಯವನ್ನು ಪರಿಷ್ಕರಿಸಲಾಗುವುದು. ಕುವೆಂಪು ರಚಿಸಿದ ನಾಡಗೀತೆಯನ್ನು ವಿಕೃತಗೊಳಿಸಿ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ವಹಿಸಲಾಗಿದೆ. ವಿರೂಪಗೊಳಿಸಿದ ಆರೋಪಿಗಳನ್ನು ಪತ್ತೆಮಾಡಿ ಕ್ರಮ ಜರುಗಿಸಲಾಗುವುದು. ಕುವೆಂಪು ಅವರ ಗದ್ಯ ಮತ್ತು ಪದ್ಯ ಕುರಿತ ಪಾಠವನ್ನು ಹೆಚ್ಚಿಸಲಾಗಿದ್ದು ಈ ಹಿಂದೆ ಏಳು ಇದ್ದುದನ್ನು ಈಗ 10ಕ್ಕೆ ಏರಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಕುರಿತು ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯವನ್ನೂ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ‌

Basavaraj Bommai to hold meeting on COVID restrictions | India News – India  TV

Karnataka School Summer Holiday Extend, what BC Nagesh said

ಈ ಬಗ್ಗೆ ಸಿಎಂ ಭೇಟಿ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ರಾಜ್ಯದಲ್ಲಿ ಅನೇಕ ಬಾರಿ ಪಠ್ಯ ಪರಿಷ್ಕರಣೆ ಆಗಿದೆ. ಆಗೆಲ್ಲ ವಿರೋಧವೂ ವ್ಯಕ್ತವಾಗಿದೆ. ಬರಗೂರು ಸಮಿತಿ ಬಗ್ಗೆ ಆಕ್ಷೇಪ ಬಂದಾಗ ಹೊಸ ಸಮಿತಿ ರಚನೆ ಮಾಡಲಾಗಿತ್ತು. ಈಗಾಗಲೇ ಹೊಸ ಸಮಿತಿ ರಚಿಸಿದ ಪಠ್ಯಪುಸ್ತಕ ಪ್ರಿಂಟ್ ಮಾಡಿ ಹಲವು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಹಿಂದಿನ ಸರ್ಕಾರದ ಬರಗೂರು ರಾಮಚಂದ್ರ ಸಮಿತಿಯಲ್ಲಿ ಬಸವಣ್ಣ ಪಾಠ ಪರಿಷ್ಕರಣೆಯಾಗಿತ್ತು. ಈಗಿನ ಸಮಿತಿ ಕೂಡ ಅದನ್ನು ಮುಂದುವರೆಸಿತ್ತು, ಆದರೆ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳ ಬಸವಣ್ಣನ ಪಠ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

In a major development, the Karnataka government has disbanded the Textbook Revision Committee headed by writer Rohith Chakrathirtha. The development comes after the committee faced flak, with allegations of saffronisation of school syllabus and insulting great personalities of Karnataka.