ಬ್ರೇಕಿಂಗ್ ನ್ಯೂಸ್
05-06-22 05:09 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 5 : ಸುಪ್ರೀಂ ಕೋರ್ಟ್ ಆದೇಶದನ್ವಯ ಧ್ವನಿವರ್ಧಕ ಬಳಕೆ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವ ಆಗ್ರಹದ ನಡುವಲ್ಲೇ ಧ್ವನಿವರ್ಧಕ ಬಳಕೆಗೆ ಪರವಾನಗಿ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದು ದಿನದ ಅವಧಿಗೆ 75 ರೂ., 1 ರಿಂದ 31 ದಿನಗಳ ಅವಧಿಗೆ 15 ರೂ. ಹಾಗೂ ಒಂದು ತಿಂಗಳ ಅವಧಿಗಿಂತ ಹೆಚ್ಚಿನ ದಿನಕ್ಕೆ ಪರವಾನಗಿ ಬೇಕಿದ್ದಲ್ಲಿ ಅದರ ಶುಲ್ಕವನ್ನು 450 ರೂ. ಎಂದು ನಿಗದಿಪಡಿಸಲಾಗಿದೆ. ಇದಲ್ಲದೆ, ಸುಪ್ರೀಂ ಕೋರ್ಟ್ ನೀಡಿರುವ ಧ್ವನಿವರ್ಧಕದ ಶಬ್ದದ ಮಿತಿಯನ್ನು ನಿಗದಿಯಂತೆ ಮಿತಿಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
2018ರ ಈ ಕುರಿತ ಆದೇಶದಲ್ಲಿ ಒಂದು ತಿಂಗಳಿಗೆ ಮಾತ್ರ ಧ್ವನಿವರ್ಧಕ ಪರವಾನಗಿ ಶುಲ್ಕದ ಬಗ್ಗೆ ತಿಳಿಸಲಾಗಿತ್ತು. ಅದರಿಂದ ಮೇಲ್ಪಟ್ಟ ಅವಧಿಗೆ ಶುಲ್ಕ ನಿಗದಿ ಮಾಡಿರಲಿಲ್ಲ. ಇದೀಗ ಜೂನ್ 3ರ 2022 ರಂದು ಹೊರಡಿಸಿದ ಆದೇಶದಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಕಾಲಾವಧಿಗೆ ನೀಡಲಾಗುವ ಧ್ವನಿವರ್ಧಕ ಅನುಮತಿಗಳಿಗೆ ಒಟ್ಟಾರೆ ಶುಲ್ಕವನ್ನು 450 ಎಂದು ನಿಗದಿಪಡಿಸಲಾಗಿದೆ. ಅಲ್ಲದೆ, ಆಯಾ ಪ್ರಾಧಿಕಾರವು ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕ ಪರವಾನಗಿ ನೀಡಬಹುದೆಂದೂ ಆದೇಶದಲ್ಲಿ ತಿಳಿಸಿದೆ.
ಮಸೀದಿಗಳ ಧ್ವನಿವರ್ಧಕದ ಬಗ್ಗೆ ಹಿಂದು ಸಂಘಟನೆಗಳ ಆಕ್ಷೇಪ ಇದ್ದರೂ, ಎಷ್ಟು ಅವಧಿಗೆ ಪರವಾನಗಿ ನೀಡಬೇಕು ಮತ್ತು ಅದರ ಶುಲ್ಕ ಎಷ್ಟು ಎನ್ನುವ ಬಗ್ಗೆ ಸರಕಾರದಿಂದ ಸೂಕ್ತ ಆದೇಶ ಇರಲಿಲ್ಲ. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಸೀದಿಗಳು ಮೈಕ್ ಅನುಮತಿಯನ್ನು ನವೀಕರಿಸುವ ಜೊತೆಗೆ ಅದರ ಶಬ್ದದ ಮಿತಿಯನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಗದಿಗೊಳಿಸಬೇಕಾಗಿದೆ.
The Karnataka Government on Tuesday issued new guidelines for using a loudspeaker in the state, with a rider for a ‘designated authority’ authorization. The move comes amid an ongoing row over the use of the loudspeakers for Azaan, the Islamic call for prayers versus Hanuman Chalisa.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm