ಮಂಗಳೂರಿನಲ್ಲಿ ಹೈಡ್ರೋಜನ್ - ಅಮೋನಿಯ, ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ; ಆಕ್ಮೆ ಜೊತೆಗೆ ಕರ್ನಾಟಕ ಸರಕಾರ ಒಪ್ಪಂದ 

06-06-22 08:58 pm       Bengalore Correspondent   ಕರ್ನಾಟಕ

ಆಕ್ಮೆ ಕ್ಲೀನ್ ಟೆಕ್ ಸೊಲ್ಯುಷನ್ಸ್ ಕಂಪೆನಿಯು ಮಂಗಳೂರಿನಲ್ಲಿ ಹೈಡ್ರೊಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಸೋಲಾರ್ ಘಟಕ ಸ್ಥಾಪನೆಗಾಗಿ 52 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.  

ಬೆಂಗಳೂರು, ಜೂನ್ 6 :  ಆಕ್ಮೆ ಕ್ಲೀನ್ ಟೆಕ್ ಸೊಲ್ಯುಷನ್ಸ್ ಕಂಪೆನಿಯು ಮಂಗಳೂರಿನಲ್ಲಿ ಹೈಡ್ರೊಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಸೋಲಾರ್ ಘಟಕ ಸ್ಥಾಪನೆಗಾಗಿ 52 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.  

ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಆಕ್ಮೆ ಗ್ರೂಪ್ ಕಂಪೆನಿಯ ಸಿಓಓ ಸಂದೀಪ್ ಕಶ್ಯಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನವೀಕರಿಸಬಲ್ಲ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ, ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ ಅಗತ್ಯ ಬೆಂಬಲ ನೀಡಲಿದೆ. ನೀವು ಸಹ ಸಕಾಲದಲ್ಲಿ ಯೋಜನೆ ಜಾರಿಗೊಳಿಸಿ ಎಂದು ಮುಖ್ಯಮಂತ್ರಿಗಳು ಕಂಪನಿಗೆ ಸಲಹೆ ನೀಡಿದರು.  

Karnataka CM Basavaraj Bommai finally allocates cabinet portfolios - The  Economic Times

ಆಕ್ಮೆ ಗ್ರೂಪ್ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್ –ಅಮೋನಿಯಂ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕಾನೇರ್ ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ - ಅಮೋನಿಯಂ ಮತ್ತು ಸೋಲಾರ್ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ಆಕ್ಮೆ ಗ್ರೂಪ್ ನ ಉಪಾಧ್ಯಕ್ಷ ಶಶಿ ಶೇಖರ್ ತಿಳಿಸಿದ್ದಾರೆ. 

ACME Solar plant Solar power Jawaharlal Nehru National Solar Mission  Company, energy, text, trademark png | PNGEgg

ಇತ್ತೀಚೆಗೆ ಸ್ವಿಟ್ಸರ್ಲೆಂಡಿನ ದಾವೊಸ್ ನಲ್ಲಿ ರೆನ್ಯೂ ಪವರ್ ಕಂಪೆನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು.‌ ಆಕ್ಮೆ ಜೊತೆಗಿನ ಒಪ್ಪಂದ ಏರ್ಪಟ್ಟ ವೇಳೆ, ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್ ಅಧಿಕಾರಿಗಳಾದ ಎಂ.ವಿ.ವಿ.ಎಸ್ ರೆಡ್ಡಿ, ಅರುಣ್ ಚೋಪ್ರಾ ಮತ್ತಿತರರು ಉಪಸ್ಥಿತರಿದ್ದರು.  ‌

Gurugram-based renewable energy company ACME Cleantech Solutions on Monday signed up with Karnataka proposing to invest about Rs 52,000 crore in a 1.2 million tonnes per annum (MTPA) green hydrogen and ammonia plant, along with an associated solar power unit in Mangaluru.