ಬ್ರೇಕಿಂಗ್ ನ್ಯೂಸ್
07-06-22 12:47 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 6: ಜಮ್ಮು ಕಾಶ್ಮೀರ ಮೂಲದ ಉಗ್ರನೊಬ್ಬ ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಅಡಗಿಕೊಂಡಿದ್ದ ಅನ್ನುವ ಮಾಹಿತಿ ಲಭಿಸುತ್ತಿದ್ದಂತೆ ಕರ್ನಾಟಕದಲ್ಲಿ ಪೊಲೀಸರನ್ನು ಅಲರ್ಟ್ ಮಾಡಲಾಗಿದೆ.
ಜಮ್ಮು ಕಾಶ್ಮೀರ ಪೊಲೀಸರು ವಾರದ ಹಿಂದೆ ಸದ್ದಿಲ್ಲದೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ, ಉಗ್ರವಾದಿ ಸಂಘಟನೆಗೆ ಸೇರಿದ ತಾಲಿಬ್ ಹುಸೇನ್ (38) ಎಂಬಾತನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು. ತಾಲಿಬ್ ಹುಸೇನ್ ಹಿಜ್ಬುಲ್ ಮುಜಾಹಿದೀನ್ ಉಗ್ರವಾದಿ ಸಂಘಟನೆಗೆ ಸೇರಿದ ಉಗ್ರನಾಗಿದ್ದು, ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ ಬಾಗ್ ಸಿಂಗ್ ದೃಢಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಕಿಶ್ತ್ ವಾರ್ ಜಿಲ್ಲೆಯ ನಾಗಸೇನಿ ಕಣಿವೆ ಪ್ರದೇಶದ ನಿವಾಸಿಯಾಗಿದ್ದು ಇಬ್ಬರು ಪತ್ನಿಯರು ಮತ್ತು ಐವರು ಮಕ್ಕಳನ್ನು ಹೊಂದಿದ್ದಾನೆ. 2016ರಲ್ಲಿ ಉಗ್ರವಾದಿ ಸಂಘಟನೆಗೆ ಸೇರಿದ್ದು ಬಾಂಬ್ ಸ್ಫೋಟ ಸೇರಿದಂತೆ ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ಧ ಕಿಶ್ತ್ ವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಸ್ಲಿಂ ಯುವಕರನ್ನು ಬ್ರೇನ್ ವಾಶ್ ಮಾಡಿ, ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ಹಿಂದುಗಳ ವಿರುದ್ಧ ಕಾರ್ಯಾಚರಿಸಲು ಪ್ರೇರೇಪಣೆ ನೀಡುತ್ತಿದ್ದ. ಭದ್ರತಾ ಪಡೆಗಳು ಹುಸೇನ್ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅಲ್ಲಿಂದ ಪಲಾಯನಗೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದ.
ಉಗ್ರ ಬೆಂಗಳೂರಿನಲ್ಲಿ ನೆಲೆಸಿರುವುದನ್ನು ತಿಳಿದು ಇತ್ತೀಚೆಗೆ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ ಪಿಎಫ್ ಪಡೆಯ ಸಿಬಂದಿ ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಸ್ಥಳೀಯ ಪೊಲೀಸರ ನೆರವು ಕೋರಿದ್ದರು. ಅದರಂತೆ, ಶ್ರೀರಾಮ ಪುರ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ತಾಲಿಬ್ ಹುಸೇನ್ ಬಗ್ಗೆ ನಿಗಾ ವಹಿಸಲಾಗಿತ್ತು. ಬೆಂಗಳೂರಿನಲ್ಲಿ ತನ್ನ ಹೆಸರನ್ನು ತಾಲಿಕ್ ಎಂದು ಬದಲಿಸಿ ಓಡಾಡುತ್ತಿದ್ದ. ಆಟೋ ಜೊತೆಗೆ ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಕೆಲಸವನ್ನೂ ಮಾಡಿಕೊಂಡಿದ್ದ. ಒಬ್ಬ ಪತ್ನಿ ಮತ್ತು ಆಕೆಯ ಮೂರು ಮಕ್ಕಳನ್ನು ಬೆಂಗಳೂರಿಗೆ ಕರೆತಂದು ಸಹಜವಾಗಿಯೇ ಜೀವನ ಮಾಡಿಕೊಂಡಿದ್ದ. ಜೂನ್ 3ರಂದು ಆತನನ್ನು ಸುತ್ತುವರಿದು ಭದ್ರತಾ ಪಡೆ ವಶಕ್ಕೆ ಪಡೆಯುತ್ತಿದ್ದಂತೆ ತಾಲಿಕ್ ಉಗ್ರನಾಗಿದ್ದ ಅನ್ನುವ ವಿಷಯ ತಿಳಿದು ಸ್ಥಳೀಯರು ಅಚ್ಚರಿಗೆ ಒಳಗಾಗಿದ್ದರು.
ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷಾ ಎಂಬವರು ತಾಲಿಬ್ ಹುಸೇನ್ ಗೆ ಆಶ್ರಯ ಕೊಟ್ಟಿದ್ದು, ಅಲ್ಲಿಯೇ ಬಾಡಿಗೆ ಮನೆಯಲ್ಲಿ ಇರಿಸಿಕೊಂಡಿದ್ದರು. ಮಸೀದಿಯ ಮದ್ರಸದಲ್ಲಿ ಪಾಠ, ಪ್ರವಚನದಲ್ಲಿ ತೊಡಗಿಸಿಕೊಂಡಿದ್ದನೇ ಅನ್ನುವ ಬಗ್ಗೆ ಶ್ರೀರಾಮ ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದು ಜಮ್ಮು ಕಾಶ್ಮೀರಕ್ಕೆ ಕೊಂಡೊಯ್ದ ಬಳಿಕವೇ ತಾಲಿಬ್ ಹುಸೇನ್ ಅರೆಸ್ಟ್ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ.
A Hizbul Mujahideen terrorist named Talib Hussain has been arrested in Bengaluru in connection with the targeted killing of Hindus in the Valley. He was arrested by the Jammu and Kashmir Police. Reacting to the arrest of the terrorist in Bengaluru, Chief Minister Basavaraj Bommai said, "It's an ongoing process. Police will keep an eye on the movement of people. Our police have extended help. The arrest had happened earlier in Bhatkal also. Now the Jammu and Kashmir police have made arrests in Bangalore.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am