ರಾಜ್ಯಸಭೆ ಕಣದಲ್ಲಿ ಪೈಪೋಟಿ ; ಪಟ್ಟು ಸಡಿಲಿಸದ ಸಿದ್ದರಾಮಯ್ಯ- ಎಚ್ಡಿಕೆ, ಇಬ್ಬರ ಜಗಳದಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿಗೆ ಲಾಭ !

10-06-22 03:11 pm       Bengalore Correspondent   ಕರ್ನಾಟಕ

ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗಲಿರುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಾಲ್ಕನೇ ಅಭ್ಯರ್ಥಿಯಾಗಿ ಗೆಲ್ಲುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಕುತೂಹಲ ವ್ಯಕ್ತವಾಗಿದೆ.

ಬೆಂಗಳೂರು, ಜೂನ್ 10: ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗಲಿರುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಾಲ್ಕನೇ ಅಭ್ಯರ್ಥಿಯಾಗಿ ಗೆಲ್ಲುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಹಾಗೂ ಕಾಂಗ್ರೆಸಿನ ಜೈರಾಮ್ ರಮೇಶ್ ಗೆಲ್ಲುವುದು ಖಾತ್ರಿಯಾಗಿದೆ. ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳು ಪೈಪೋಟಿ ನಡೆಸುತ್ತಿದ್ದು, ಸಿದ್ದರಾಮಯ್ಯ, ಕುಮಾರಸ್ವಾಮಿ ಜಗಳದಿಂದಾಗಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವ ಕುದುರೆಯಾಗಿ ಮಾರ್ಪಟ್ಟಿದ್ದಾರೆ.

ಮಧ್ಯಾಹ್ನದ ವರೆಗಿನ ಮಾಹಿತಿ ಪ್ರಕಾರ, ನಿರ್ಮಲಾ ಸೀತಾರಾಮನ್ ಪರವಾಗಿ 46 ಮತಗಳು ಬಿದ್ದಿವೆ. ಜಗ್ಗೇಶ್ ಪರವಾಗಿ 44 ಮತಗಳು ಬಿದ್ದಿದ್ದು ದ್ವಿತೀಯ ಪ್ರಾಶಸ್ತ್ಯದಲ್ಲಿ 19 ಮತಗಳು ಹೆಚ್ಚುವರಿಯಾಗಿ ಮತ ಹಾಕಲಾಗಿದೆ ಅನ್ನುವ ಮಾಹಿತಿಗಳಿವೆ. ಇದೇ ವೇಳೆ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಪರವಾಗಿ ಮೊದಲ ಪ್ರಾಶಸ್ತ್ಯದ 32 ಮತಗಳು ಬಿದ್ದಿವೆ.

Nirmala Sitharaman - Wikipedia

ಬಿಜೆಪಿ 120, ಕಾಂಗ್ರೆಸ್ 69, ಜೆಡಿಎಸ್ 32 ಮತಗಳನ್ನು ಹೊಂದಿವೆ. ಕಾಂಗ್ರೆಸ್ ಕಡೆಯಿಂದ ಜೈರಾಮ್ ರಮೇಶ್ 46 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಕುಪೇಂದ್ರ ರೆಡ್ಡಿ ಕಣದಲ್ಲಿರುವುದರಿಂದ ಕುತೂಹಲ ಉಳಿಸಿಕೊಂಡಿದ್ದಾರೆ. ಜೆಡಿಎಸ್ ಪರವಾಗಿ ಪೂರ್ತಿ 32 ಮತಗಳು ಬಿದ್ದರೆ ಮಾತ್ರ ಇಲ್ಲಿ ಗೆಲುವಿಗೆ ಪೈಪೋಟಿ ಇರುತ್ತದೆ. ಜೆಡಿಎಸ್ ಶಾಸಕ ಗುಬ್ಬಿ ಕ್ಷೇತ್ರದ ಶ್ರೀನಿವಾಸ ಗೌಡ ಯಾವುದೇ ಪಕ್ಷಕ್ಕೂ ಮತ ಹಾಕಿಲ್ಲ ಅನ್ನುವ ಮಾಹಿತಿಗಳಿದ್ದು, ಜೆಡಿಎಸ್ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಪರವಾಗಿದ್ದಾರೆ ಎನ್ನಲಾಗಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ತಾನು ಜೆಡಿಎಸ್ ಪರವಾಗಿಯೇ ಮತ ಹಾಕಿದ್ದೇನೆ ಎಂದಿದ್ದಾರೆ.

News9 on Twitter: "#BIGNEWS: People of state are talking that Governor's  office is puppet of the BJP: #MLA #ShivalingeGowda https://t.co/DqEHjM8EaI"  / Twitter

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯ ವಿಚಾರ ತಿಳಿದಿರುವ ಬಿಜೆಪಿ ಅದಕ್ಕೆ ತಕ್ಕುದಾದ ಪಟ್ಟುಗಳನ್ನು ಹಾಕಿದ್ದು ಮೂರನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದಲ್ಲೇ 32 ಮತಗಳು ಸಿಗುವಂತೆ ನೋಡಿಕೊಂಡಿದೆ. ಇದೇ ವೇಳೆ, ಜಗ್ಗೇಶ್ ಪರವಾಗಿ 44 ಮೊದಲ ಪ್ರಾಶಸ್ತ್ಯದ ಮತಗಳ ಜೊತೆಗೆ ಎರಡನೇ ಪ್ರಾಶಸ್ತ್ಯದ ಮತಗಳನ್ನೂ ಬೀಳುವಂತೆ ಮಾಡಲಾಗಿದೆ. ನಿಯಮದ ಪ್ರಕಾರ, ಒಟ್ಟು ಚಲಾವಣೆಯಾದ ಮತಗಳ ಆಧಾರದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳು ಯಾರಿಗೆ ಹೆಚ್ಚು ಸಿಗುತ್ತೋ ಆ ನಾಲ್ವರನ್ನು ಗೆದ್ದವರು ಎಂದು ಘೋಷಿಸಲಾಗುತ್ತದೆ. ಜೆಡಿಎಸ್ ಪರವಾಗಿ 32 ಮತಗಳು ಮಾತ್ರ ಇರುವುದರಿಂದ ಅದರಲ್ಲಿ ಒಂದು ಅಥವಾ ಎರಡು ಮೈನಸ್ ಆದಲ್ಲಿ ಬಿಜೆಪಿಗೆ ಲಾಭವಾಗುತ್ತದೆ.

With Rs 815 crore wealth, JD(S) candidate D Kupendra Reddy richest in  Karnataka Rajya Sabha poll fray | Cities News,The Indian Express

ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಕಣದಲ್ಲಿದ್ದು, ಅವರಿಗೆ ಎಷ್ಟು ಚಲಾವಣೆಯಾಗುತ್ತದೆ ಮತ್ತು ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಗಳು ಬೀಳುತ್ತದೋ ಅನ್ನುವ ಲೆಕ್ಕಾಚಾರಗಳಿವೆ. ಕಾಂಗ್ರೆಸ್ ಕಡೆಯಿಂದ ಒಂದೆರಡು ಮತಗಳು ಜೆಡಿಎಸ್ ಅಭ್ಯರ್ಥಿಗೆ ಬಿದ್ದರೂ, ಕುಪೇಂದ್ರ ರೆಡ್ಡಿ ಗೆಲ್ಲಲಿದ್ದಾರೆ. ಆದರೆ ಸಿದ್ದರಾಮಯ್ಯ ಪಟ್ಟಿನಿಂದಾಗಿ ಆ ಸಾಧ್ಯತೆ ಕಡಿಮೆ. ನಾನು ಮೇಲೋ, ನೀನು ಮೇಲೋ ಎಂಬ ಸಿದ್ದರಾಮಯ್ಯ ಮತ್ತು ಎಚ್ಡಿಕೆ ವರ್ತನೆಯಿಂದಾಗಿ ಬಿಜೆಪಿಯನ್ನು ಸೋಲಿಸಬೇಕೆಂಬ ಇರಾದೆ ಬರಿ ಬಾಯಿ ಮಾತಿನಲ್ಲಿ ಉಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು.

Chaddi Row: Why RSS Chief Post Never Held By Dalit, Asks Congress Leader  Siddaramaiah. BJP Replies

ಇದೇ ಸಂದರ್ಭದಲ್ಲಿ ಕಾಂಗ್ರೆಸಿನ 14 ಶಾಸಕರನ್ನು ಇಟ್ಟುಕೊಂಡು ಸಿದ್ದರಾಮಯ್ಯ ಕಾದು ನೋಡುವ ತಂತ್ರದಲ್ಲಿದ್ದಾರೆ. ಜಾತ್ಯತೀತ ಮತಗಳನ್ನು ಒಡೆಯಲು ಬಿಡಬಾರದು, ಬಿಜೆಪಿ ಇನ್ನೊಂದು ಸ್ಥಾನ ಗೆಲ್ಲಲು ಬಿಡಬಾರದು ಎಂದು ವಾಗ್ದಾಳಿ ನಡೆಸುತ್ತಾ ಜೆಡೆಸ್ ಕಡೆಯ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎನ್ನುತ್ತಿದ್ದ ಸಿದ್ದರಾಮಯ್ಯ ಕೊನೆಕ್ಷಣದಲ್ಲಿ ಯಾವ ಪಟ್ಟು ಹಾಕುತ್ತಾರೋ ಅನ್ನುವ ಕುತೂಹಲ ಇದೆ. ಆದರೆ, ಎಚ್.ಡಿ ಕುಮಾರಸ್ವಾಮಿ ಕಡೆ ಕ್ಷಣದ ವರೆಗೂ ಸಿದ್ದರಾಮಯ್ಯ ಬಗ್ಗೆಯೇ ಟೀಕಾಸ್ತ್ರದಲ್ಲಿ ತೊಡಗಿದ್ದಾರೆ. ಇಲ್ಲಿ ಬಿಜೆಪಿ ಮತ್ತೊಂದು ಸ್ಥಾನ ಗೆದ್ದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಇನ್ನು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳಬಾರದು. ಜಾತ್ಯತೀತ ಸೋಗಿನಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಅವರೇ ಕಾರಣ ಆಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

With the number of candidates exceeding the number of seats, the four states- Haryana, Rajasthan, Maharashtra and Karnataka- are all set to hold the Rajya Sabha elections for 16 seats today. Out of 57 total Rajya Sabha seats, 41 candidates in Uttar Pradesh, Tamil Nadu, Bihar, Andhra Pradesh, Madhya Pradesh, Odisha, Chhattisgarh, Punjab, Telangana, Jharkhand and Uttarakhand have already been elected unopposed last Friday.