ನೂಪುರ್ ಶರ್ಮ ವಿವಾದಾತ್ಮಕ ಹೇಳಿಕೆ ; ಮಸೀದಿ ಸಮೀಪ ನಿಗಾ, ರಾಜ್ಯಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರಿಕೆ ವಹಿಸುವಂತೆ ಎಡಿಜಿಪಿ ಆರ್ಡರ್ ! 

11-06-22 07:38 pm       Bengalore Correspondent   ಕರ್ನಾಟಕ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರಿಕೆಯನ್ನು ವಹಿಸುವಂತೆ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

ಬೆಂಗಳೂರು, ಜೂ. 11: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರಿಕೆಯನ್ನು ವಹಿಸುವಂತೆ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಪಟ್ಟಿ ಮಾಡಿಕೊಂಡು ಪೆಟ್ರೋಲಿಂಗ್ ಮಾಡಲು ಸೂಚನೆಯನ್ನು ನೀಡುವ ಜೊತೆಗೆ ಕಾನೂನು ಸುವ್ಯವಸ್ಥೆ ಹಾಳಾಗದಂತೆ ತಡೆಗಟ್ಟುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಬಿಜೆಪಿ ವಕ್ತಾರೆ ನೂಪರ್ ಶರ್ಮಾ ಮಹಮದ್ ಪೈಗಂಬರ್ ವಿರುದ್ದ ನೀಡಿದ್ದ ಹೇಳಿಕೆೆಯನ್ನು ಖಂಡಿಸಿ ರಾಜ್ಯವೂ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜ್ಯದಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಈ ಬಗ್ಗ ಎಚ್ಚೆತ್ತಾ ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಚ್ಚರಿಕೆ ವಹಿಸುವಂತೆ ಸಂದೇಶವನ್ನು ರವಾಸಿತ್ತು.

Union home minister Amit Shah to visit UP on Nov 12, 13, will discuss  election strategy - India News

ಕೇಂದ್ರ ಗೃಹಇಲಾಖೆಯ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಜೂನ್ 10ರಂದೇ ಪೊಲೀಸ್ ಹಿರಿಯ ಅಧಿಕಾರಿಗಳು ಮತ್ತು ಗೃಹ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮತ್ತು ಕಾನೂನು ಸುವ್ಯವಸ್ಥೆ ಹಾಳಾಗದಂತೆ ಸೂಕ್ತ ಕ್ರಮವನ್ನು ಸೂಚನೆಯನ್ನು ನೀಡಲಾಯಿತು.

ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಗಸ್ತು;

Karnataka CM Basavaraj Bommai finally allocates cabinet portfolios - The  Economic Times

ಸಿಎಂ ಬಸವರಾಜ ಬೊಮ್ಮಾಯಿ ಸಭೆಯ ಬಳಿಕ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆಯನ್ನು ನೀಡಿದ್ದಾರೆ. ಎಸ್ಪಿ ರ್ಯಾಂಗಿಂಗ್ ಅಧಿಕಾರಿಗಳು ಸೇರಿಂದಂತೆ ಜಿಲ್ಲೆಯ ಪೊಲೀಸ್ ನಗರಗಳ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲಿಂಗ್ ಅನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ಬೆಳಗ್ಗೆ ಮತ್ತು ರಾತ್ರಿ ಏರಿಯಾಗಳಲ್ಲಿ ರೌಂಡ್‌ಗಳನ್ನು ಹೆಚ್ಚಿಸಲು ಸಲು ಸೂಚಿಸಲಾಗಿದೆ.

ಮಸ್ಜೀದ್ ಸಮೀಪದಲ್ಲಿ ನಿಗಾ ಇಡುವಂತೆ ಸೂಚನೆ;

ಸರ್ವೇ ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ನಮಾಜ್ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಂಪನ್ನು ಸೇರುತ್ತಾರೆ. ನಮಾಜ್ ಮಾಡಲು ಯಾವುದೇ ಅಡ್ಡಿ ಆತಂಕವಿಲ್ಲ. ಆದರೆ ನಮಾಜ್ ಸಂದರ್ಭ ಮತ್ತು ನಂತರದಲ್ಲಿ ಮುಸ್ಲಿಂ ಸಮುದಾಯ ಒಟ್ಟೋಟ್ಟಿಗೆ ಹೊರಬರುವ ಹಿನ್ನೆಲೆಯಲ್ಲಿ ಮಸ್ಜೀದ್ ಸಮೀಪದಲ್ಲಿ ನಿಗಾ ಇಡುವಂತೆ ಸೂಚನೆಯನ್ನು ನೀಡಲಾಗಿದೆ. ಆ ಮೂಲಕ ಸಾಮೂಹಿಕವಾಗಿ ಹೊರಬಂದವರು ಯಾವುದೇ ಗಲಭೆಗಳಲ್ಲಿ ಪಾಲ್ಗೊಳ್ಳದಿರಲು ಸೂಚನೆಯನ್ನು ನೀಡಲಾಗಿದೆ.

ఖాళీ బాటిళ్లలో పెట్రోలు నింపారో..బంకులపై పోలీస్ నజర్ | Do not fill petrol  in empty bottles dcp prakash reddy to pump owners | TV9 Telugu

ಬಾಟಲ್ಗಳಲ್ಲಿ ಪೆಟ್ರೋಲ್ ತೆಗೆದುಕೊಂಡು ಹೋಗುವಂತಿಲ್ಲ ;

ಸಂಜೆ ಮತ್ತು ರಾತ್ರಿಯ ವೇಳೆಯಲ್ಲಿ ಪೊಲೀಸರು ಪೆಟ್ರೋಲಿಂಗ್ ಮಾಡುವ ಜೊತೆಗೆ ವಾಹನ ತಪಾಸಣೆಯನ್ನು ಮಾಡಲು ಸೂಚನೆಯನ್ನು ನೀಡಲಾಗಿದೆ. ವಾಹನಗಳಲ್ಲಿ ಯಾವುದಾದರೂ ಆಕ್ಷೇಪಾರ್ಹ ವಸ್ತುಗಳೋ ಮಾರಕಾಸ್ತ್ರಗಳೋ ಸಿಕ್ಕರೇ ತಕ್ಷಣವೇ ವ್ಯಕ್ತಿಗಳನ್ನು ಬಂಧಿಸುವಂತೆ ಸೂಚನೆಯನ್ನು ನೀಡಲಾಗಿದೆ. ಇನ್ನು ವಾಹನಗಳಲ್ಲಿ ಪೆಟ್ರೋಲ್‌ಗಳನ್ನು ಬಾಟಲ್‌ಗಳಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಪೆಟ್ರೋಲ್ ಬಂಕ್‌ಗಳ ಮಾಲೀಕರಿಗೂ ಪೆಟ್ರೋಲ್ ಅನ್ನು ಬಾಟಲ್‌ಗೆ ಹಾಕುವಂತಿಲ್ಲ ಎಂದು ನಿರ್ದೇಶನವನ್ನು ನೀಡಲಾಗಿದೆ.

Nupur Sharma prophet row, ADGP Alok Kumar orders for strict surveillance in Karnataka. Strict patrolling near to Mosque has been ordered. No refulling petrol in bottles too.