ಉದ್ದನೆಯ ದಂತದ "ಕಬಿನಿ ರಾಜ" ಭೋಗೇಶ್ವರ ಆನೆ ಸಾವು 

12-06-22 06:07 pm       HK News Desk   ಕರ್ನಾಟಕ

ಸಾಮಾನ್ಯವಾಗಿ ಕಬಿನಿ ಜಲಾಶಯದ ಹಿನ್ನೀರು ನೋಡಲು ಹೋದ ಪ್ರವಾಸಿಗರು ಎಲ್ಲಾದರೂ ದೈತ್ಯಾಕಾರದ ಉದ್ದನೆಯ ದಂತದ ಕಬಿನಿ ರಾಜ ಎಂದೇ ಕರೆಯಲ್ಪಡುತ್ತಿದ್ದ ಭೋಗೇಶ್ವರ ಎಂಬ ಹಿರಿಯ ಗಜವನ್ನು ಕಣ್ಣಾರೆ ನೋಡಲು ಕಾಯುತ್ತಿದ್ದರು.

ಮೈಸೂರು, ಜೂ 12: ಸಾಮಾನ್ಯವಾಗಿ ಕಬಿನಿ ಜಲಾಶಯದ ಹಿನ್ನೀರು ನೋಡಲು ಹೋದ ಪ್ರವಾಸಿಗರು ಎಲ್ಲಾದರೂ ದೈತ್ಯಾಕಾರದ ಉದ್ದನೆಯ ದಂತದ ಕಬಿನಿ ರಾಜ ಎಂದೇ ಕರೆಯಲ್ಪಡುತ್ತಿದ್ದ ಭೋಗೇಶ್ವರ ಎಂಬ ಹಿರಿಯ ಗಜವನ್ನು ಕಣ್ಣಾರೆ ನೋಡಲು ಕಾಯುತ್ತಿದ್ದರು. ಆದರೆ ಇನ್ಮುಂದೆ ಆ ದೈತ್ಯಗಜ ಕಾಣುವುದಿಲ್ಲ. ಎರಡು ದಿನಗಳ ಹಿಂದೆ ಅದು ಕೊನೆಯುಸಿರೆಳೆದಿದ್ದು, ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಇದರ ಕಳೆಬರ ಪತ್ತೆಯಾಗಿದೆ. ಹೀಗಾಗಿ ಇನ್ನು ಮುಂದೆ ಭೋಗೇಶ್ವರ ಬರೀ ನೆನಪು ಮಾತ್ರ

ಎಚ್. ಡಿ. ಕೋಟೆ ಎಂದ ತಕ್ಷಣವೇ ಹತ್ತಾರು ಮದಗಜಗಳು ನಮ್ಮ ಕಣ್ಣಮುಂದೆ ಹಾದು ಹೋಗುತ್ತವೆ. ಮೈಸೂರು ದಸರಾಕ್ಕೆ ಮೆರಗು ಹೆಚ್ಚಿಸುವಲ್ಲಿ ಇಲ್ಲಿನ ನೂರಾರು ಆನೆಗಳು ಸಾಥ್‍ ನೀಡಿವೆ. ಜತೆಗೆ ಇಲ್ಲಿನ ಕಾಕನಕೋಟೆಯ ಆನೆಗಳ ಖೆಡ್ಡಾ ಇವತ್ತಿಗೂ ನಮ್ಮೆಲ್ಲರ ಮನದಲ್ಲಿ ಅಚ್ಚೊತ್ತಿದಂತೆ ಉಳಿದಿದೆ.

ಭೋಗೇಶ್ವರ ಕಳೆದ ಮೂರು ದಶಕಗಳಿಂದಲೂ ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ಸೆಲೆಬ್ರೆಟಿ ಆನೆಯಾಗಿ ಹೆಸರುಗಳಿಸಿದ್ದ. ಫೋಟೋಗ್ರಾಫರ್‌ಗಳಿಂದ ಅತಿ ಹೆಚ್ಚು ಫೋಟೋ ಕ್ಲಿಕ್ಕಿಸಿಕೊಂಡ ಆನೆ ಎಂಬ ಕೀರ್ತಿಯೂ ಕೂಡ ಭೋಗೇಶ್ವರನಿಗೆ ಸಲ್ಲುತ್ತದೆ.

Viscera samples of Bhogeshwara elephant sent for test at Regional Forensic  Science Laboratory, Mysuru : Welcome to Mysooru News

ದಟ್ಟವಾದ ಅರಣ್ಯ ಅದರಾಚೆಗೆ ಹಿಂಡು ಹಿಂಡಾಗಿ ಓಡಾಡುವ ಕಾಡಾನೆಗಳು, ಹೇರಳ ಅರಣ್ಯ ಸಂಪತ್ತು, ನಿಸರ್ಗ ಸೌಂದರ್ಯದಿಂದ ಕಂಗೊಳಿಸುವ ಬೆಟ್ಟಗುಡ್ಡಗಳು, ಅದರೊಳಗೆ ಬದುಕು ಕಟ್ಟಿಕೊಂಡಿರುವ ಕಾಡಿನ ಮಕ್ಕಳು, ನಾಲ್ಕು ಜಲಾಶಯಗಳು, ಅದರಾಚೆಗಿನ ಹಿನ್ನೀರು ಹೀಗೆ ಹತ್ತಾರು ವಿಶೇಷಗಳೊಂದಿಗೆ ಹೆಚ್. ಡಿ. ಕೋಟೆ ಗಮನಸೆಳೆಯುತ್ತದೆ. ಇದರ ನಡುವೆಯೂ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಭೋಗೇಶ್ವರ ಆನೆ ಪ್ರವಾಸಿಗರ ಗಮನಸೆಳೆಯುತ್ತಿತ್ತು ಅಂದರೆ ಅದು ಇತರೆ ಆನೆಗಳಿಗಿಂತ ವಿಶಿಷ್ಟವಾಗಿತ್ತು ಅನ್ನೋದಂತು ಸತ್ಯ.

Mysuru: Elephant shot dead

ಹಾಗೆನೋಡಿದರೆ ಎಚ್. ಡಿ. ಕೋಟೆಯ ಅರಣ್ಯ ಪ್ರದೇಶಗಳತ್ತ ಹೆಜ್ಜೆ ಹಾಕುವ ಪ್ರಾಣಿ ಪ್ರಿಯರು ಎರಡು ಪ್ರಾಣಿಗಳನ್ನು ನೋಡಲು ತವಕಿಸುತ್ತಿದ್ದರು. ಅದು ಯಾವುದೆಂದರೆ ಒಂದು ದೈತ್ಯಗಜ ಭೋಗೇಶ್ವರ ಮತ್ತೊಂದು ಕರಿಚಿರತೆ ಕಬೀರ. ನಾವು ದೈತ್ಯಗಜ ಬೋಗೇಶ್ವರನ ಬಗ್ಗೆ ತಿಳಿಯುತ್ತಾ ಹೋದರೆ ಅದು ತನ್ನ ಪಾಡಿಗೆ ತಾನು ಎಂಬಂತೆ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ಅಡ್ಡಾಡುತ್ತಾ ಜೀವಿಸುತ್ತಿದ್ದ ನಿರುಪದ್ರವಿ ಜೀವಿಯಾಗಿತ್ತು.

Two elephants found dead in Nagarahole forest reserve – Mysuru Today

ದೈತ್ಯಾಕಾರ, ಉದ್ದನೆಯ ದಂತ ವಿಶೇಷತೆ;

ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳ ದಂಡುಗಳು ಕಂಡು ಬರುತ್ತವೆ. ಇವು ಎಲ್ಲ ದಿನಗಳಲ್ಲಿ ಕಾಣಲು ಅಸಾಧ್ಯ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಮಾತ್ರ ಕಂಡು ಬರುತ್ತದೆ. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವುದರಿಂದ ಪ್ರತಿದಿನವೂ ಇಲ್ಲಿಗೆ ಬಾರದೆ ಯಾವತ್ತಾದರೊಮ್ಮೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸುತ್ತಿವೆ. ಸಾಮಾನ್ಯವಾಗಿ ನೀರು ಕುಡಿಯಲು ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತವೆ. ಆದರೆ ಭಾರೀ ಗಾತ್ರದ, ಉದ್ದದ ಕೋರೆಯ ಕಾಡಾನೆಯೊಂದು ಅಪರೂಪಕ್ಕೆ ಕಾಣಿಸಿಕೊಂಡು ಗಮನಸೆಳೆಯುತ್ತಿತ್ತು. ಅದೇ ಭೋಗೇಶ್ವರ.

Mysuru elephant Bhogeswara also know as King of Kabini found dead in Gundre forest.