ಪರಿಷತ್ ಚುನಾವಣೆ ; ಬಿಜೆಪಿ, ಜೆಡಿಎಸ್ ಗೆ ಕಾಂಗ್ರೆಸ್ ಶಾಕ್ ! 2-2 ಸಮಬಲದ ಸಾಧನೆ, ಮೈಸೂರನ್ನು ಕಳಕೊಂಡ ಜೆಡಿಎಸ್, ಡಿಕೆಶಿ -  ಸಿದ್ದರಾಮಯ್ಯ ಜೋಡಿಗೆ ಮೇಲುಗೈ ! 

16-06-22 11:25 am       Bengalore Correspondent   ಕರ್ನಾಟಕ

ನಾಲ್ಕು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಸಾಧನೆ ಮಾಡಿದೆ. ಮೈಸೂರಿನ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿಗೆ ಶಾಕ್ ನೀಡಿದೆ.  

ಬೆಂಗಳೂರು, ಜೂನ್ 16: ನಾಲ್ಕು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಸಾಧನೆ ಮಾಡಿದೆ. ಮೈಸೂರಿನ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿಗೆ ಶಾಕ್ ನೀಡಿದೆ.  

ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಜಯ ಗಳಿಸಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ ಎಂಟನೇ ಬಾರಿಗೆ ಬಸವರಾಜ ಹೊರಟ್ಟಿ ನಿರೀಕ್ಷೆಯಂತೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ,‌ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ. 

Madhu G Madegowda (@MadhuGMadegowda) / Twitter

ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಆರು ಸಾವಿರ ಮತಗಳಿಂದ ಗೆಲುವು ಕಂಡಿದ್ದಾರೆ. 

ಹೊರಟ್ಟಿ ಮತ್ತು ಹಣಮಂತ ನಿರಾಣಿ ಗೆಲುವು ಬಹುತೇಕ ಪಕ್ಕಾ ಆಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಕೂಡ ಪ್ರಭಾವಿಯಾಗಿದ್ದರಿಂದ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಮೈಸೂರು ಭಾಗದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಹಿಂದೆ ಜೆಡಿಎಸ್ ಈ ಸ್ಥಾನವನ್ನು ಹೊಂದಿದ್ದರಿಂದ ಆಡಳಿತಾರೂಢ ಬಿಜೆಪಿ ಆಕ್ರಮಿಸುತ್ತಾ ಕಾಂಗ್ರೆಸ್ ಲಾಟರಿ ಹೊಡೆಯುತ್ತಾ ಅನ್ನುವ ನಿರೀಕ್ಷೆಯಿತ್ತು. ಆದರೆ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಸರಕಾರಕ್ಕೆ ಶಾಕ್ ನೀಡಿದೆ. ಆಮೂಲಕ ಸಿದ್ದರಾಮಯ್ಯ, ಡಿಕೆಶಿ ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರಿನಲ್ಲಿ ಪಾರಮ್ಯ ಮೆರೆದಿರುವುದು ಸ್ಪಷ್ಟವಾಗಿದೆ.

Rajya Sabha polls, JDS loose Mysurh, Congress bags victory, BJP in shock.