ಬ್ರೇಕಿಂಗ್ ನ್ಯೂಸ್
19-06-22 01:56 pm HK News Desk ಕರ್ನಾಟಕ
ಕಲಬುರಗಿ, ಜೂನ್ 19: ಮೋದಿಯವರ ಮಾಸ್ಟರ್ ಸ್ಟ್ರೋಕ್‌ಗಳನ್ನ ಪ್ರತಿಯೊಬ್ರು ಗಂಭೀರವಾಗಿ ಪರಿಗಣಿಸಬೇಕು. ಇದುವರೆಗೆ ಅವರ ಮಾಸ್ಟರ್ ಸ್ಟ್ರೋಕ್‌ಗಳು ಒಂದೂ ಗುರಿ ಮುಟ್ಟಿಲ್ಲ. ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದನ್ನು ಅಧಿಕಾರಿಗಳು ಹಗಲಲ್ಲಿ ನನಸು ಮಾಡ್ತಿದಾರೆ. ಅಗ್ನಿಫಥ್ ಎಂಬ ಹೊಸ ಕನಸ್ಸನ್ನ ಮೋದಿ ಕಂಡಿದ್ದಾರೆ. ಕಳೆದೆರಡು ದಿನಗಳಿಂದ ಅಗ್ನಿಪಥ್ ಯೋಜನೆ ಸಮರ್ಥಿಸಲು ಬಿಜೆಪಿ ಶಾಸಕರು, ಸಂಸದರು ಹರಸಾಹಸ ಪಡುತ್ತಿದ್ದಾರೆ. ಅವರ ಸ್ಥಿತಿ ನೋಡಿದ್ರೆ ಅಯ್ಯೋ ಎನಿಸತ್ತೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ಸೈನಿಕರನ್ನ ನಾಲ್ಕು ವರ್ಷ ಟ್ರೈನಿಂಗ್ ನೀಡ್ತಾರಂತೆ. ಇಂಥ ಯೋಜನೆ ತರುವುದಕ್ಕಿಂತ ಮುಂಚೆ ಸ್ವಲ್ಪವು ಕಾಮನ್‌ಸೆನ್ಸ್ ಇದೆಯಾ ಅಂತಾ ಎಕ್ಸ್ ಮಿಲಿಟರಿಯವರು ಕೇಳಿದ್ದಾರೆ. ಆರು ತಿಂಗಳು ತರಬೇತಿ ಕೊಟ್ಟರೆ ದೇಶದ ಗಡಿ ಕಾಯಲು ಹೇಗೆ ಸಾಧ್ಯ? ನೆರೆಯ ಶತ್ರು ರಾಷ್ಟ್ರಗಳ ಜೊತೆ ಸೆಣಸಾಡಲು ಸಾಧ್ಯವೇ ? ಸೇನೆಗೆ ಸೇರಿ ವೆಪನ್ಸ್‌ಗಳನ್ನ ಬಳಸುವುದು, ಕೆಲಸ ಮಾಡುವ ಗಡಿಯ ಸೂಕ್ಷ್ಮತೆ ಹೇಗೆ ತಿಳಿದುಕೊಳ್ಳಲು ಸಾಧ್ಯ? ಓರ್ವ ಸೈನಿಕನಿಗೆ ನಾಲ್ಕೈದು ವರ್ಷದ ತರಬೇತಿ, ಸೇವೆಯ ಬಳಿಕ ದೇಶಕ್ಕಾಗಿ ಹೋರಾಡುವ ಛಲ ಬರುತ್ತೆ. ಆದರೆ ಇವರು ಆ ಹೊತ್ತಿಗೆ ಮನೆಗೆ ಕಳಿಸುತ್ತಾರಂತೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರವನ್ನು ಛೇಡಿಸಿದರು. ಈಗಾಗಲೇ ನೆರೆಯ ಚೀನಾ ದೇಶ ನಾಲ್ಕೈದು ಕಿಲೋ ಮಿಟರ್ ಜಮೀನು ಅತಿಕ್ರಮಣ ಮಾಡಿಕೊಂಡಿದೆ. ಛಪ್ಪನ್ ಇಂಚ್ ಕಾ ಅಂತಾರೆ ಅಲ್ವಾ.. ಚೀನಾ ಜಮೀನು ವಶಪಡಿಸಿಕೊಂಡ್ರು ಮೋದಿ ಕಣ್ಮುಚ್ಚಿ ಕುಳಿತ್ತಿದ್ದಾರೆ.
ನಾಲ್ಕು ವರ್ಷದ ನಂತರ ಯುವಕರು ಏನು ಮಾಡಬೇಕು ಮೋದಿಯವರೇ? ಪೆನ್ಷನ್ ಕೊಡೋದು ದುಬಾರಿ ಆಗ್ತಿರೋದ್ರಿಂದ ಅಗ್ನಿಪಥ್ ಸ್ಕೀಮ್ ಜಾರಿಗೆ ತಂದಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದವರಿಗೆ ಪೆನ್ಷನ್ ಕೊಡೋಕೆ ಮೋದಿ ಸರ್ಕಾರದಿಂದ ಸಾಧ್ಯವಾಗ್ತಿಲ್ಲ. ಕಳೆದ ಎರಡು ವರ್ಷ ಯಾವುದೇ ರೀತಿಯ ಸೈನಿಕ ನೇಮಕಾತಿಗಳು ನಡೆದಿಲ್ಲ. ಇದೇನಾ ನಿಮಗೆ ದೇಶ ಮತ್ತು ಯುವಕರ ಮೇಲಿರುವ ಕಾಳಜಿ. ಕೊರೊನಾ ನೆಪವೊಡ್ಡಿ ಕೇಂದ್ರ ಸರ್ಕಾರ ಯಾವುದೇ ನೇಮಕಾತಿ ಮಾಡಿಕೊಂಡಿಲ್ಲ. ಸೇನೆಯಲ್ಲಿ 2.50 ಲಕ್ಷ ಖಾಯಂ ಸೈನಿಕ ಹುದ್ದೆಗಳಿವೆ. ಇದನ್ನು ಫಿಲ್ ಮಾಡೋದು ಬಿಟ್ಟು ಹೊಸ ಯೋಜನ ತಂದಿದ್ದಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದಿದ್ರು. ಇದೀಗ ವರ್ಷಕ್ಕೆ ಹತ್ತು ಲಕ್ಷ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತಿದ್ದಾರೆ. ಇದೇನಾ ಮೋದಿಯವರ ಅಚ್ಚೇ ದಿನ್? ಇದುವರೆಗೆ 14 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಮೋದಿ ಸರ್ಕಾರದಲ್ಲಿ ಅತೀ ಜನ ಹೆಚ್ಚು ಉದ್ಯೋಗ ಕಳೆದುಕೊಂಡಿದ್ದಾರೆ. ಇದೇನಾ ಮೋದಿಯವರ ಮಾಸ್ಟರ್ ಸ್ಟ್ರೋಕ್? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ನ್ಯಾಷನಲ್ ಸೆಕ್ಯುರಿಟಿ ಬಗ್ಗೆ ಮೋದಿ ಸರ್ಕಾರಕ್ಕೆ ಇಷ್ಟೇನಾ ಕಾಳಜಿ ಇರೋದು? ಕಿಸಾನ್ ಪರವಾಗಿಯೂ ಇಲ್ಲ, ಜವಾನ್ ಪರವಾಗಿಯೂ ಇಲ್ಲ ಅಂತಾ ಮೋದಿ ಸರ್ಕಾರ ತೋರಿಸಿಕೊಟ್ಟಿದೆ. ನಾಲ್ಕು ರಫೇಲ್ ವಿಮಾನ ತಂದಿದ್ದನ್ನೆ ದೊಡ್ಡ ಸಾಧನೆ ಅಂತಾ ಬಿಂಬಿಸಿದ್ದರು ಎಂದು ವ್ಯಂಗ್ಯವಾಡಿದ ಖರ್ಗೆ, ದಯವಿಟ್ಟು ಅಗ್ನಿಪಥ್ ಯೋಜನೆ ವಾಪಾಸ್ ಪಡೆಯಿರಿ ಎಂದು ಕೇಂದ್ರವನ್ನು ಒತ್ತಾಯಿಸಿದರು. ಮೋದಿಯವರ ಒಂದೊಂದು ಯೋಜನೆಗಳು ದೇಶದಲ್ಲಿ ಒಂದೊಂದು ವಿವಾದ ಸೃಷ್ಟಿಸುತ್ತಿವೆ. ಡಿಫೆನ್ಸ್ ಎಕ್ಸ್‌ಪರ್ಟ್‌ಗಳ ಜೊತೆ ಚರ್ಚಿಸಿ ಅಗ್ನಿಪಥ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಿ. ಯುವಕರ ದಾರಿಗೆ ದೀಪ ಆಗೋದು ಬಿಟ್ಟು ಮೋದಿಯವರು ಬೆಂಕಿ ಇಡ್ತಿದಾರೆ. ನಾಳೆ ಬೆಂಗಳೂರಿಗೆ ಮೋದಿ ಬರ್ತಿದಾರೆ. ದಮ್ ಇದ್ರೆ ಒಂದು ಸುದ್ದಿಗೋಷ್ಟಿ ಮಾಡಲಿ ಎಂದು ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.
ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಸುದ್ದಿಗೋಷ್ಟಿ ಮೋದಿ ಮಾಡಿಲ್ಲ. ಸುದ್ದಿಗೋಷ್ಟಿ ಎದುರಿಸಿ ದೇಶದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಹೇಳಿದರು.
MLA Priyank Kharge says training for just 6 months is master stroke idea of Modi. The scheme aims to enroll youths, who will be called 'Agniveers', for a service duration of four years. After the completion of their tenure, 25% of Agniveeers will be retained or re-enlisted in the regular cadre while the remaining 75% will be demobilised with an exit package.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm