ಮೈಸೂರು ಅರಮನೆಯಲ್ಲಿ ಮೋದಿಗೆ ರಾಜಾತಿಥ್ಯ ; ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ಮೈಸೂರು ಪಾಕ್ ಉಪಾಹಾರ 

21-06-22 11:51 am       HK News Desk   ಕರ್ನಾಟಕ

ಅರಮನೆ ಆವರಣದ ಮೈದಾನದಲ್ಲಿ ಯೋಗಾಭ್ಯಾಸ ನಿರ್ವಹಿಸಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೈಸೂರು ಅರಮನೆ ಒಳಗೆ ಯದುವಂಶಸ್ಥರು ರಾಜಾಥಿತ್ಯ ನೀಡಿದ್ದಾರೆ. 

ಮೈಸೂರು, ಜೂನ್ 21: ಅರಮನೆ ಆವರಣದ ಮೈದಾನದಲ್ಲಿ ಯೋಗಾಭ್ಯಾಸ ನಿರ್ವಹಿಸಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೈಸೂರು ಅರಮನೆ ಒಳಗೆ ಯದುವಂಶಸ್ಥರು ರಾಜಾಥಿತ್ಯ ನೀಡಿದ್ದಾರೆ. 

ಅರಮನೆಯ ರಾಜ ವಂಶಸ್ಥರ ಜೊತೆಗೇ ಮೋದಿ ಉಪಾಹಾರ ಸೇವಿಸಿದ್ದಾರೆ. ಮೈಸೂರಿಗೆ ಬಂದ ವೇಳೆ ಅರಮನೆಗೆ ಬರುವಂತೆ ರಾಣಿ ಪ್ರಮೋದಾ ದೇವಿ ಒಡೆಯರ್ ಆಹ್ವಾನ ನೀಡಿದ್ದರು. 

PM Offers special pooja in Chamundeshwari Temple | Udayavani – ಉದಯವಾಣಿ

ವಿಶಾಲವಾದ ಡೈನಿಂಗ್ ಟೇಬಲ್ ನಲ್ಲಿ ಬೆಳ್ಳಿ ತಟ್ಟೆಯಲ್ಲಿ ನರೇಂದ್ರ ಮೋದಿ ಅವರಿಗೆ ಉಪಹಾರ ನೀಡಲಾಯಿತು. ‌ಉಪ್ಪಿಟ್ಟು, ಅವಲಕ್ಕಿ, ಇಡ್ಲಿ ಸಾಂಬಾರ್, ಚಟ್ನಿ, ಮಿಕ್ಸ್ ಫ್ರೂಟ್, ಬ್ರೆಡ್ ಬಟರ್, ಮೈಸೂರು ಪಾಕ್ ಸೇರಿದಂತೆ ದಕ್ಷಿಣ ಭಾರತದ ತಿಂಡಿ ತಿನಿಸುಗಳನ್ನು ಮೈಸೂರು ರಾಜವಂಶಸ್ಥರ ಪರವಾಗಿ ಸಿದ್ಧಪಡಿಸಲಾಗಿತ್ತು.‌

Mysore pak, masala dosa part of breakfast menu for PM Modi at royal palace  | Cities News,The Indian Express

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಾಹಾರದಲ್ಲಿ ಸಾಥ್ ನೀಡಿದ್ದಾರೆ. ಆನಂತರ ಮೈಸೂರು ಅರಮನೆಗೆ ಒಂದು ಸುತ್ತು ಹಾಕಿ ಒಳಾಂಗಣವನ್ನು ವೀಕ್ಷಣೆ ಮಾಡಿದ ನರೇಂದ್ರ ಮೋದಿ, ಅರಮನೆ ಸೌಂದರ್ಯಕ್ಕೆ ಮಾರುಹೋಗಿ ಭೇಷ್ ಎಂದಿದ್ದು ವಿಶೇಷವಾಗಿತ್ತು.

Prime Minister Narendra Modi on Tuesday had breakfast with the erstwhile royal family of Mysuru at the royal palace, where the famous ‘Mysore pak’ and ‘Mysore masala dosa’ were part of the menu.