ಬಿಎಂಟಿಸಿ ಹಳೆ ಬಸ್ ಮಾರಾಟಕ್ಕಿದೆ ; ಬರೀ ಒಂದು ಲಕ್ಷ ರೂ.ಗೆ ಹರಾಜಿಗಿಟ್ಟ ಸಂಸ್ಥೆ ! 

22-06-22 03:16 pm       Bengalore Correspondent   ಕರ್ನಾಟಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಮಾರಾಟಕ್ಕಿವೆ. ಒಂದು ಲಕ್ಷ ರೂಪಾಯಿಗೆ ಒಂದು ಬಸ್‌ ಎಂದು ದರ ನಿಗದಿಮಾಡಿದೆ. ಹೌದು, 7 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹಳತಾದ ಬಸ್‌ ಗಳನ್ನು ಬಿಎಂಟಿಸಿ ಮಾರಾಟ ಮಾಡಲು ಮುಂದಾಗಿದೆ. 

ಬೆಂಗಳೂರು, ಜೂನ್ 22 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಮಾರಾಟಕ್ಕಿವೆ. ಒಂದು ಲಕ್ಷ ರೂಪಾಯಿಗೆ ಒಂದು ಬಸ್‌ ಎಂದು ದರ ನಿಗದಿಮಾಡಿದೆ. ಹೌದು, 7 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹಳತಾದ ಬಸ್‌ ಗಳನ್ನು ಬಿಎಂಟಿಸಿ ಮಾರಾಟ ಮಾಡಲು ಮುಂದಾಗಿದೆ. 

ಒಂದು ಬಸ್ಸಿಗೆ ಲಕ್ಷ ರೂ. ನಿಗದಿಪಡಿಸಿದ್ದು ಈ “ಆಫ‌ರ್‌’ ತನ್ನದೇ ಸಹೋದರ ಸಂಸ್ಥೆಯಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ ಡಬ್ಲ್ಯುಕೆಆರ್‌ಟಿಸಿ) ಕ್ಕೆ ಮಾತ್ರ ಅನ್ವಯ ಎನ್ನುವ ಶರತ್ತನ್ನು ವಿಧಿಸಿದೆ. 

ತನ್ನಲ್ಲಿರುವ ಹೆಚ್ಚುವರಿ ಬಸ್‌ಗಳನ್ನು ಬಿಎಂಟಿಸಿ ವಾಯುವ್ಯ ಸಾರಿಗೆ ಸಂಸ್ಥೆಗೆ ನೀಡಲು ನಿರ್ಧರಿಸಿದ್ದು, ಈ ಸಂಬಂಧ ನಿಗಮಕ್ಕೆ ಪ್ರಸ್ತಾವನೆ ಮುಂದಿಟ್ಟಿದೆ. ಈ ರೀತಿ ನೀಡಲಾಗುವ ಹೆಚ್ಚುವರಿ ಬಸ್‌ಗಳಿಗೆ ಕನಿಷ್ಠ ಬೆಲೆ ಅಂದರೆ ಬಸ್‌ ಒಂದಕ್ಕೆ ಲಕ್ಷ ರೂ. ಎಂದು ನಿಗದಿಪಡಿಸಿದೆ.

ಆದರೆ, ಇದು ಕೇವಲ ಎನ್‌ಡಬ್ಲ್ಯುಕೆಆರ್‌ ಟಿಸಿಗೆ ಸೀಮಿತವಾಗಿರಲಿದೆ. ಯಾಕೆಂದರೆ, ನಮ್ಮಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಹಳೆಯ ಬಸ್‌ಗಳನ್ನು ನಮ್ಮದೇ ಸಹೋದರ ಸಂಸ್ಥೆಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಆದರೆ, ಎನ್‌ಡಬ್ಲ್ಯುಕೆಆರ್‌ ಟಿಸಿಯಿಂದ ಇದಕ್ಕೆ ಈವರೆಗೆ ಪೂರಕ ಸ್ಪಂದನೆ ದೊರೆತಿಲ್ಲ. ಉಳಿದ ಸಾರಿಗೆ ಸಂಸ್ಥೆಗಳನ್ನು ಈ ಬಗ್ಗೆ ಕೇಳಿಲ್ಲ ಎಂದೂ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

BMTC buses for sale just One lakh rupees per bus.