ಬ್ರೇಕಿಂಗ್ ನ್ಯೂಸ್
23-06-22 05:09 pm HK News Desk ಕರ್ನಾಟಕ
ಹಾಸನ, ಜೂನ್ 23: ಹಾಸನ, ಕೊಡಗು ಭಾಗದಲ್ಲಿ ಗುರುವಾರ ನಸುಕಿನ ಜಾವ ಭೂಕಂಪನ ಸಂಭವಿಸಿದೆ. ಜನರು ಮಲಗಿದ್ದ ಸಂದರ್ಭದಲ್ಲಿಯೇ ಭೂಮಿ ನಡುಗಿದ ಅನುಭವ ಆಗಿದ್ದು, ಬೆಚ್ಚಿಬಿದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಎರಡು-ಮೂರು ಸೆಕೆಂಡ್ ಕಾಲ ಕಂಪಿಸಿದ ಅನುಭವ ಆಗಿತ್ತು.
ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ಇತ್ತು ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದ ಕೇಂದ್ರ ಬಿಂದು ಹೊಳೆನರಸೀಪುರ ತಾಲೂಕಿನ ಮಾಲುಗೇನಹಳ್ಳಿಯಲ್ಲಿ ಕಂಪನದ ಕೇಂದ್ರ ಬಿಂದು ಇತ್ತು. ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಹಲವೆಡೆ ಜನರಿಗೆ ಕಂಪನದ ಅನುಭವ ಆಗಿದ್ದು ಜನ ಗಾಬರಿಗೊಂಡಿದ್ದಾರೆ. ಅರಕಲಗೂಡು ಪಟ್ಟಣ, ಮುದ್ದೇನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲೂಕಿನ ಚಟ್ನಳ್ಳಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಜನರಿಗೆ ಕಂಪನ ಸ್ಪಷ್ಟವಾಗಿ ಅರಿವಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು, ಈ ರೀತಿಯ ಕಂಪನದಿಂದ ಯಾವುದೇ ಹಾನಿ ಆಗುವುದಿಲ್ಲ. ಕಂಪನದ ಕೇಂದ್ರ ಬಿಂದು ಸೀಸ್ಮಿಕ್ ವಲಯ-1ರಲ್ಲಿ ಬರುತ್ತಿದ್ದು, ಭೂಕಂಪನದ ಸಾಧ್ಯತೆ ಕಡಿಮೆ ಇರುತ್ತದೆ. ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಕಂಪನಕ್ಕೂ ಮೊದಲು ಅರಕಲಗೂಡು ಪ್ರದೇಶದ ಜನರಿಗೆ ದೊಡ್ಡ ಸದ್ದು ಕೇಳಿಬಂದಿದ್ದು, ಅದರ ಬೆನ್ನಲ್ಲೇ ಕಂಪನ ಆಗಿದ್ದು ಗಾಬರಿಗೆ ಕಾರಣವಾಗಿತ್ತು.
ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ ಪ್ರದೇಶದಲ್ಲೂ ಬೆಳಗಿನ ಜಾವ 4.30ರ ಸುಮಾರಿಗೆ ಕಂಪನದ ಅನುಭವ ಆಗಿದೆ. ಸೋಮವಾರ ಪೇಟೆ ಪಟ್ಟಣದ ರೇಂಜರ್ ಬ್ಲಾಕ್, ನೇಗಳ್ಳೆ ವ್ಯಾಪ್ತಿಯ ಜನರಿಗೆ ಕಂಪನ ಅರಿವಿಗೆ ಬಂದಿದೆ. ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಅನುಭವ ಆಗಿತ್ತು. ಸುಂಟಿಕೊಪ್ಪದ ಕಾನ್ ಬೈಲು, ನಾಕೂರು ಗ್ರಾಮಸ್ಥರಿಗೆ ಭೂಕಂಪನ ಆಗಿರುವುದು ಅನುಭವಕ್ಕೆ ಬಂದಿದೆ.
An earthquake measuring 3.4 on the Richter scale shook parts of Hassan district and neighbouring regions in Karnataka in the wee hours of Thursday, a disaster management official said. The earthquake was also felt in many villages near Somwarpet in Kodagu district. People ran out of their houses following the tremor.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm