ಬ್ರೇಕಿಂಗ್ ನ್ಯೂಸ್
24-06-22 06:54 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 24: ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾಗ ರಸ್ತೆ ಸರಾಗ ಇರಬೇಕೆಂದು ತುರ್ತಾಗಿ ಡಾಮರೀಕರಣ ಮಾಡಲಾಗಿತ್ತು. 15 ದಿನಗಳಲ್ಲಿ 23 ಕೋಟಿ ವ್ಯಯಿಸಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಮಾಡಿದ್ದು ಭಾರೀ ಟೀಕೆಗೂ ಗುರಿಯಾಗಿತ್ತು. ಆದರೆ ಮೋದಿ ಬಂದು ಹೋದ ಒಂದೇ ದಿನದಲ್ಲಿ ಡಾಮರ್ ರಸ್ತೆ ಕುಸಿದು ಹೋಗಿದ್ದು, ಕಳಪೆ ಕಾಮಗಾರಿಯ ವಿಡಿಯೋ ವೈರಲ್ ಆಗಿತ್ತು. ರಸ್ತೆಯ ನಡುವೆ ಗುಂಡಿ ಬಿದ್ದಿರುವುದು ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಸಿಎಂ ಬೊಮ್ಮಾಯಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದರೆ, ಪ್ರಧಾನ ಮಂತ್ರಿ ಕಚೇರಿಯಿಂದ ಈ ಬಗ್ಗೆ ರಿಪೋರ್ಟ್ ನೀಡುವಂತೆ ಸಿಎಂ ಕಚೇರಿಗೆ ಸೂಚನೆ ಬಂದಿದೆ.
ಮರಿಯಪ್ಪನ ಪಾಳ್ಯ- ಜ್ಞಾನಭಾರತಿ ಮೈನ್ ರೋಡಿನ ನಡುವೆ ಹೊಸ ಡಾಮರು ರಸ್ತೆ ಕುಸಿದು ಹೋಗಿದ್ದು, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ. ಇದೇ ರಸ್ತೆಯಲ್ಲಿ ಜೂನ್ 20ರಂದು ಪ್ರಧಾನಿ ಮೋದಿ ಮತ್ತವರ ಬೆಂಗಾವಲು ವಾಹನಗಳು ಚಲಿಸಿದ್ದವು. ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್ ಮುಂದಿನ 3.6 ಕಿಮೀ ಉದ್ದದ ರಸ್ತೆಯನ್ನು ಆರು ಕೋಟಿ ಖರ್ಚು ಮಾಡಿ ಡಾಮರೀಕರಣ ಮಾಡಲಾಗಿತ್ತು. ಆದರೆ ಮೋದಿ ಹಿಂತಿರುಗಿದ ಮಂಗಳವಾರ ರಾತ್ರಿಯೇ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಒಂದೇ ಮಳೆಯಲ್ಲಿ ರಸ್ತೆಯ ನಡು ನಡುವೆ ಕುಸಿದಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕಾರ್ಯ ನಿರ್ವಹಣೆಗೆ ಕನ್ನಡಿ ಹಿಡಿದಿದೆ.
ಈ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿಗೆ ಸೂಚನೆ ಬಂದಿದೆ. ಇದರ ನಡುವಲ್ಲೇ ಸಿಎಂ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರಿಗೆ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಅಧಿಕಾರಿಗಳು ದೌಡಾಯಿಸಿ, ರಸ್ತೆಯಲ್ಲಿ ತಡಕಾಡಿದ್ದು ಹಳೆ ಪೈಪ್ ಲೈನಲ್ಲಿ ನೀರು ಬಂದು ಒಡೆದು ಹೋಗಿರುವುದು ಕಂಡುಬಂದಿದೆ. ರಸ್ತೆಯ ಅಡಿಭಾಗದಲ್ಲಿ ನೀರಿನ ಪೈಪ್ ಲೈನ್ ಇತ್ತು. ಅದರಲ್ಲಿ ನೀರು ಬರಲ್ಲ ಎಂದು ಹೇಳಿ ಹಾಗೆಯೇ ಮಣ್ಣು ಮುಚ್ಚಿ ಮೇಲ್ಗಡೆ ಡಾಮರು ಮಾಡಿದ್ದರು. ಮಂಗಳವಾರ ರಾತ್ರಿ ಭಾರೀ ಮಳೆಯಾಗಿದ್ದರಿಂದ ಡಾಮರು ಆಗಿದ್ದ ರಸ್ತೆಯೇ ಕೆಲವೆಡೆ ಕುಸಿದಿದ್ದು ಹೊಂಡ ಬಿದ್ದಿದೆ.
ಒಂದೇ ದಿನದಲ್ಲಿ ರಸ್ತೆ ಗುಂಡಿ ಬಿದ್ದಿರುವುದರ ವಿಡಿಯೋ ವೈರಲ್ ಆಗಿದ್ದಲ್ಲದೆ, ರಾಜ್ಯ ಸರಕಾರದ ಕಾರ್ಯ ವೈಖರಿಗೆ ಕನ್ನಡಿ ಹಿಡಿದಿತ್ತು. ಪ್ರಧಾನ ಮಂತ್ರಿ ಕಚೇರಿ ಅಧಿಕಾರಿಗಳು ಈ ರೀತಿಯ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿಯ ಮೂವರು ಇಂಜಿನಿಯರುಗಳಿಗೆ ಆಯುಕ್ತರು ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ.
A video that shows near-instant deterioration of Bengaluru roads that were newly asphalted to smoothen the travel of Prime Minister Narendra Modi’s convoy during his recent visit has gone viral. Embarrassed by this infrastructure failure, the Prime Minister’s Office has sought a report from the Karnataka state government.The civic body recently claimed that ahead of Modi’s visit, it had spent Rs 23 crore to redo 14 km of roads, including stretches of Mysuru Road and Ballari Road, in the city.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm