2024ರ ಬಳಿಕ ದೇಶದಲ್ಲಿ 50 ರಾಜ್ಯ ಆಗಲಿದೆ, ಕರ್ನಾಟಕ ಒಡೆಯಲೇಬೇಕಾಗುತ್ತದೆ ; ಮತ್ತೆ ಪುನರುಚ್ಚರಿಸಿದ ಸಚಿವ ಕತ್ತಿ 

26-06-22 09:33 pm       HK News Desk   ಕರ್ನಾಟಕ

2024ರ ಬಳಿಕ ಕರ್ನಾಟಕದಲ್ಲಿ ಎರಡು ರಾಜ್ಯ ಹಾಗೂ ದೇಶದಲ್ಲಿ 50 ರಾಜ್ಯ ನಿರ್ಮಾಣ ಆಗಲಿದೆ ಎಂದು ಸಚಿವ ಉಮೇಶ್ ಕತ್ತಿ ತಮ್ಮ ಹೇಳಿಕೆ ವಿವಾದ ಆಗಿದ್ದರೂ ಅದನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. 

ಬೆಳಗಾವಿ, ಜೂನ್ 26 : 2024ರ ಬಳಿಕ ಕರ್ನಾಟಕದಲ್ಲಿ ಎರಡು ರಾಜ್ಯ ಹಾಗೂ ದೇಶದಲ್ಲಿ 50 ರಾಜ್ಯ ನಿರ್ಮಾಣ ಆಗಲಿದೆ ಎಂದು ಸಚಿವ ಉಮೇಶ್ ಕತ್ತಿ ತಮ್ಮ ಹೇಳಿಕೆ ವಿವಾದ ಆಗಿದ್ದರೂ ಅದನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಯಡೂರು ಗ್ರಾಮದಲ್ಲಿ ಮಾಧ್ಯಮಗಳಿಗೆ ಸಚಿವ ಉಮೇಶ್ ಕತ್ತಿ ಈ ಹೇಳಿಕೆ ನೀಡಿದ್ದಾರೆ. ನನ್ನ ಹೇಳಿಕೆಗೆ ಯಾರು ಕೂಡ ಅವರವರ ಅನಿಸಿಕೆಗಳನ್ನು ಹೇಳಬಹುದು. ಅಧಿಕಾರದಲ್ಲಿದ್ದವರು ಬೇರೆ ಯಾರು ಸಹ ನನ್ನ ಹೇಳಿಕೆಗೆ ವಿರೋಧ ಮಾಡುತ್ತಿಲ್ಲ. ಕೆಲಸವಿಲ್ಲದ ಸಿದ್ದರಾಮಯ್ಯ, ಡಿಕೆಶಿ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಇವರೇ ವಿರೋಧ ಮಾಡ್ತಿದ್ದಾರೆ.‌ ಈ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತೆ.  ಆವಾಗ ಕರ್ನಾಟಕವೂ ಎರಡು ರಾಜ್ಯ ಆಗುತ್ತೆ. ಮಹಾರಾಷ್ಟ್ರ ಮೂರು ರಾಜ್ಯವಾಗುತ್ತೆ, ಉತ್ತರ ಪ್ರದೇಶ ನಾಲ್ಕು ರಾಜ್ಯವಾಗಿ ಮಾರ್ಪಡು ಆಗಲಿದೆ ಎಂದು ಹೇಳಿದರು. 

Siddaramaiah vs D K Shivakumar: Factionalism within Karnataka Congress over  CM face comes to the fore | Deccan Herald

ರಾಜ್ಯ ವಿಭಜನೆ ಆಗುವುದಲ್ಲ, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯಗಳನ್ನು ಮರು ನಿರ್ಮಾಣ ಮಾಡಲಾಗುತ್ತದೆ ಎಂದ ಕತ್ತಿ, ಕರ್ನಾಟಕ ರಾಜ್ಯವಾದಾಗ ಎರಡೂವರೆ ಕೋಟಿ ಜನಸಂಖ್ಯೆ ಇತ್ತು. ಈಗ ಆರೂವರೆ ಕೋಟಿ ಜನಸಂಖ್ಯೆ ಆಗಿದೆ, ಹಾಗಾಗಿ ಆಡಳಿತ ದೃಷ್ಟಿಯಿಂದ ರಾಜ್ಯ‌ ಉದಯವಾಗುತ್ತದೆ ಎಂದರು.‌

ಆದರೆ ಈಗ ನಾನು ಹೇಳುತ್ತಿರುವುದು ನನ್ನ ವಯಕ್ತಿಕ ಹೇಳಿಕೆ. ಕರ್ನಾಟಕ ಆರೂವರೆ ಕೋಟಿ ಜನರಿಂದ ಬಳಲುತ್ತಿದೆ. ಇದು ಇವತ್ತಿನ ಸಮಾಜಕ್ಕೆ ಒಳ್ಳೆಯದಲ್ಲ. ಹೀಗಾಗಿ ಎಲ್ಲವನ್ನು ಒಡೆಯಬೇಕಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಅಭಿಪ್ರಾಯ ಪಟ್ಟರು.

According to a Karnataka minister, India would have 50 states following the Lok Sabha election in 2024. Karnataka minister Umesh Katti, who holds the food, civil supplies, and consumer affairs stated, "Prime Minister Narendra Modi has decided to form 50 States in the country after the 2024 elections. I came to know that he is mulling over it". Katti also stated that Karnataka will be divided into two states, with north Karnataka being one of the new states. "Two States should be carved out of Karnataka, four in Uttar Pradesh, three in Maharashtra, and so on," the minister continued.