ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿಯಿವೆ, ತಾಕತ್ತಿದ್ದರೆ ಕೋರ್ಟ್ ಸ್ಟೇ ತೆಗೀರಿ ; ಸಂಸದ ಪ್ರತಾಪಸಿಂಹ ವಿರುದ್ಧ ಸಿಡಿದ ಎನ್.ಲಕ್ಷ್ಮಣ

01-07-22 05:32 pm       HK News Desk   ಕರ್ನಾಟಕ

ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ. ಪ್ರಾಮಾಣಿಕವಾಗಿದ್ರೆ ಕೋರ್ಟಿನಿಂದ ತಂದಿರುವ ತಡೆಯಾಜ್ಞೆ ರದ್ದುಗೊಳಿಸಿ. ಆಮೇಲೆ ನಿಮ್ಮ ಬಂಡವಾಳ ಬಯಲಾಗುತ್ತೆ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎನ್.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರು, ಜುಲೈ 1:  ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ. ಪ್ರಾಮಾಣಿಕವಾಗಿದ್ರೆ ಕೋರ್ಟಿನಿಂದ ತಂದಿರುವ ತಡೆಯಾಜ್ಞೆ ರದ್ದುಗೊಳಿಸಿ. ಆಮೇಲೆ ನಿಮ್ಮ ಬಂಡವಾಳ ಬಯಲಾಗುತ್ತೆ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎನ್.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಿಮ್ಮ ರೀತಿ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡಿಲ್ಲ. ನಿಮ್ಮ ರೀತಿ ಹೆಂಡತಿಯನ್ನ ತಂಗಿ ಎಂದು ಮೂಡಾ ಸೈಟ್ ಪಡೆದಿಲ್ಲ‌. ನಿಮ್ಮ ರೀತಿ ಸೆಕ್ಸ್ ಸ್ಕ್ಯಾಂಡಲ್ ಸಿಡಿಗೆ ಸ್ಟೇ ತಂದಿಲ್ಲ‌. ನೀವು ತಾಕತ್ತಿದ್ದರೆ ಸ್ಟೇ ಅರ್ಡರನ್ನು ತೆರವು ಮಾಡಿ. ಪ್ರಾಮಾಣಿಕ ಇರುತ್ತಿದ್ದರೆ ಸ್ಟೇ ತರಬೇಕಿತ್ತಾ ಎಂದು ಪ್ರಶ್ನೆ ಮಾಡಿದರು.

ನೀವು ಮೆಗಾ ಗ್ಯಾಸ್ ಯೋಜನೆಯಡಿ 50 ಕೋಟಿ ಲಂಚ ಪಡೆದಿದ್ದೀರ‌. ನಿಮ್ಮ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಇದಕ್ಕೆಲ್ಲ ಏನು ಹೇಳುತ್ತೀರಿ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ರೆಡಿ ಎಂದಿದ್ದವರು ಈಗ ಯಾಕೆ ಹಿಂದೆ ಸರಿಯುತ್ತಿದ್ದಾರೆ ಎಂದು ಎನ್.ಲಕ್ಷ್ಮಣ್ ಪ್ರಶ್ನೆ ಮಾಡಿದರು.‌

ಮೈಸೂರು ಅಭಿವೃದ್ಧಿ ಕುರಿತಂತೆ ಆರೋಗ್ಯಕರ ಚರ್ಚೆಗೆ ಕರೆದರೂ ಕುಂಟು ನೆಪ ಹೇಳಿ ಗೈರಾಗುತ್ತಿದ್ದಾರೆ. ಪ್ರತಾಪ್‌ಸಿಂಹ ಕಳುಹಿಸುವ ಮೇಧಾವಿಗಳ ಜೊತೆಗೆ ಚರ್ಚೆ ಮಾಡ್ತೀವಿ. ನೀವು ಯಾರ್ಯಾರನ್ನ‌ ಕಳುಹಿಸ್ತೀನಿ ಅಂತ ಪತ್ರ ಬರೆಯಿರಿ.

ನನ್ನನ್ನ ಹಂದಿ, ಕತ್ತೆ ಎಂದು ಕರೆದಿರುವುದಕ್ಕೆ ನನಗೆ ಹೆಮ್ಮೆ ಆಗುತ್ತೆ. ಹಂದಿ ಕೇವಲ ಪ್ರಾಣಿಯಲ್ಲ, ಕೆಲ ವರ್ಗದ ಆಹಾರ ಪದ್ಧತಿ. ಕೆಲವರು ಹಂದಿಯನ್ನ ಪೂಜೆ ಮಾಡ್ತಾರೆ. ಕತ್ತೆಗೆ ಮಡಿವಾಳ ಸಮುದಾಯದಲ್ಲಿ ಪೂಜನೀಯ ಸ್ಥಾನ ಸಿಕ್ಕಿದೆ. 5ನೇ ತಾರೀಖು ಹಂದಿ ಕತ್ತೆಗಳ ಮೂಲಕ ನಿಮ್ಮ ಕಚೇರಿಗೆ ಬರ್ತೀನಿ. 11 ಗಂಟೆಗೆ ಬರ್ತೀನಿ ಚರ್ಚೆಗೆ ಬನ್ನಿ. ಕೊನೆಯ ಅವಕಾಶ ಕೊಡ್ತೀನಿ, ಪೊಲೀಸರು ಕೂಡ ಚರ್ಚೆಗೆ ಅವಕಾಶ‌ ಕೊಡಬೇಕು ಎಂದು ಹೇಳಿದರು.

Mysuru M Lakshman threatens MP Pratap Simha stating that he has got 18 episodes of CD and he can release them any time. If you have the real guts then try to bring stay order on it he challenged.