ಫ್ರಿಜ್ ಮುಟ್ಟಲು ಹೋಗಿ ವಿದ್ಯುತ್ ಶಾಕ್ ; ಐದು ವರ್ಷದ ಮಗು ದುರಂತ ಸಾವು !

02-07-22 10:15 pm       HK News Desk   ಕರ್ನಾಟಕ

ಐದು ವರ್ಷದ ಮಗುವೊಂದು ಫ್ರಿಡ್ಜ್ ಮುಟ್ಟಿದಾಗ ವಿದ್ಯುತ್ ಆಘಾತಗೊಂಡು ಮೃತಪಟ್ಟ ಘಟನೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಐವರ್ನಾಡು ಗ್ರಾಮದ ಕೈಯೋಲ್ತಡ್ಕ ಎಂಬಲ್ಲಿ ನಡೆದಿದೆ.

ಸುಳ್ಯ, ಜುಲೈ 2: ಐದು ವರ್ಷದ ಮಗುವೊಂದು ಫ್ರಿಡ್ಜ್ ಮುಟ್ಟಿದಾಗ ವಿದ್ಯುತ್ ಆಘಾತಗೊಂಡು ಮೃತಪಟ್ಟ ಘಟನೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಐವರ್ನಾಡು ಗ್ರಾಮದ ಕೈಯೋಲ್ತಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಹೈದರಾಲಿ ಎಂಬವರ ಪುತ್ರ ಮಹಮ್ಮದ್ ಆದಿಲ್ (5) ಮೃತ ಮಗು. ತಾಯಿ, ಮಗುವಿನ ಜೊತೆಗೆ ಐದು ದಿನಗಳ ಹಿಂದೆ ಐವರ್ನಾಡಿನ ತವರು ಮನೆಗೆ ಹೋಗಿದ್ದರು. ಇಂದು ಮಧ್ಯಾಹ್ನ ತಂದೆ ಹೈದರಾಲಿ ಕೂಡ ಪತ್ನಿ ಮನೆಗೆ ಬಂದಿದ್ದು ಮಧ್ಯಾಹ್ನ ಊಟ ಮಾಡಿದ್ದರು. ಈ ವೇಳೆ, ಮಗು ಆದಿಲ್ ಊಟ ಮಾಡಿ ಆಟವಾಡುತ್ತಾ ಫ್ರಿಡ್ಜ್ ಬಳಿ ಹೋಗಿದ್ದು ಅದನ್ನು ಮುಟ್ಟಿದಾಗ ಶಾಕ್ ಆಗಿದೆ. ವಿದ್ಯುತ್ ಶಾಕ್ ನಿಂದ ನೆಲಕ್ಕೆ ಬಿದ್ದು ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಹೆತ್ತವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ.

ಆಕಸ್ಮಿಕವಾಗಿ ವಿದ್ಯುತ್ ಶಾಕ್ ಆಗಿ ಮಗು ಮೃತಪಟ್ಟಿದ್ದು ಇದರಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ಮಗುವಿನ ತಂದೆ ಹೈದರಾಲಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.

Mangalore Five-year-old boy dies after current shock from fridge in Sullia