ಕೊಡಗಿನ ಕಂಪನಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ, ದೊಡ್ಡ ಅನಾಹುತದ ಮುನ್ಸೂಚನೆ ಆಗಿರಬಹುದು ! ಗಂಭೀರ ಕ್ರಮ ಅಗತ್ಯ ಎಂದ ತಜ್ಞರು

03-07-22 03:23 pm       HK News Desk   ಕರ್ನಾಟಕ

ಕೊಡಗಿನಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಂಪನಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಈ ರೀತಿಯ ಪಶ್ಚಾತ್ ಕಂಪನಗಳು ಯಾವುದೋ ಅನಾಹುತದ ಸಂಕೇತವಾಗಿರಲೂ ಬಹುದು ಎಂದು ಭೂಕಂಪ ಶಾಸ್ತ್ರಜ್ಞರು ಸರಕಾರಕ್ಕೆ ಎಚ್ಚರಿಸಿದ್ದಾರೆ.

ಬೆಂಗಳೂರು, ಜುಲೈ 3 : ಕೊಡಗಿನಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಂಪನಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಈ ರೀತಿಯ ಪಶ್ಚಾತ್ ಕಂಪನಗಳು ಯಾವುದೋ ಅನಾಹುತದ ಸಂಕೇತವಾಗಿರಲೂ ಬಹುದು ಎಂದು ಭೂಕಂಪ ಶಾಸ್ತ್ರಜ್ಞರು ಸರಕಾರಕ್ಕೆ ಎಚ್ಚರಿಸಿದ್ದಾರೆ.

ಭೂರಚನೆಯ ದೃಷ್ಟಿಯಲ್ಲಿ ದಖನ್ ಪ್ರಸ್ಥಭೂಮಿ ಸುರಕ್ಷಿತ ಪ್ರದೇಶ ಎಂದು ಭಾವಿಸಿ ನಿರ್ಲಕ್ಷಿಸಬಾರದು. ಕಂಪನಗಳ ಸ್ವರೂಪ ಮತ್ತು ಅವುಗಳ ಹೆಚ್ಚುತ್ತಿರುವ ಆವರ್ತನವನ್ನು ಅಧ್ಯಯನ ಮಾಡಿದ ನಂತರ, ತಜ್ಞರು ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಕನಿಷ್ಠ 100 ಕಂಪನಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಭೂಕಂಪ ಸಂಭವಿಸಿದಲ್ಲಿ ಸಾವು ನೋವುಗಳನ್ನು ತಗ್ಗಿಸಲು ಸರ್ಕಾರವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ ಭೂಕಂಪನಗಳು ರಿಕ್ಟರ್ ಮಾಪಕದಲ್ಲಿ 3.0 ರಷ್ಟಿರುವ ಕಾರಣ ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ಆದರೆ ಭವಿಷ್ಯದ ಕಂಪನಗಳ ಕುರಿತು ಎಚ್ಚರದಲ್ಲಿರಬೇಕು ಎಂದು ಎಚ್ಚರಿಕೆ ನೀಡಿದರು.

ಕೊಡಗಿನ ಪ್ರದೇಶದಲ್ಲಿ ಕಂಡುಬರುತ್ತಿರುವ ಪ್ರವಾಹ, ಭೂಕುಸಿತ, ಭೂಕಂಪಗಳು ಆ ಭಾಗದಲ್ಲಿ ಜಾಗರೂಕರಾಗಿರಲು ಸೂಚಿಸುವ ಎಚ್ಚರಿಕೆಯಾಗಿದೆ. ದುರ್ಬಲವಾದ ಪಶ್ಚಿಮ ಘಟ್ಟಗಳ ಪ್ರದೇಶವು ಸುರಕ್ಷಿತವಲ್ಲ. ಪರಿಸ್ಥಿತಿಯನ್ನು ಅವಲೋಕಿಸಲು ಕಳೆದ ಕೆಲವು ದಿನಗಳಿಂದ ಈ ಪ್ರದೇಶಕ್ಕೆ ಭೇಟಿ ನೀಡಿದ ತಜ್ಞರ ತಂಡವು ಪರಿಶೀಲನೆ ಮಾಡಿದೆ. ಭೂಕಂಪ ಶಾಸ್ತ್ರಜ್ಞರು, ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ತಾವು ಮಾಡಿದ ಮೌಲ್ಯಮಾಪನ ಆಧರಿಸಿ ವರದಿ ರೆಡಿ ಮಾಡಿದ್ದಾರೆ.  

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಯೊಬ್ಬರು, “ಸದ್ಯದ ಕಂಪನಗಳು ಮಳೆಯ ನಂತರ ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಸುಮಾರು 6 ಸೆಂ.ಮೀ ಮಳೆಯಾಗಿದ್ದು, 3-4 ದಿನಗಳ ವರೆಗೆ ಸತತವಾಗಿ 12-15 ಸೆಂ.ಮೀ ಮಳೆ ಸುರಿದರೆ ಮತ್ತು ಅದೇ ಸಮಯದಲ್ಲಿ ಭೂಕಂಪ ಸಂಭವಿಸಿದಲ್ಲಿ ಅದು ಕಳವಳಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿದ್ಯಮಾನ ಇನ್ನಷ್ಟು ಅನಾಹುತಗಳಿಗೆ ಕಾರಣವಾಗುತ್ತವೆ. ಇದನ್ನು ತಪ್ಪಿಸಲು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ಮಾಡುತ್ತಿರುವುದು ಪ್ರಾರ್ಥನೆ ಮಾತ್ರ ಎಂದು ಹೇಳಿದ್ದಾರೆ.

Over the last few days, villages in Kodagu and Dakshina Kannada have been experiencing moderate earthquakes causing worry to the people, especially those living in hilly areas
Parts of Sullia taluk in Dakshina Kannada bordering Kodagu district again recorded a mild earthquake in the afternoon on July 2, sixth time in a series since June 25.