ಬ್ರೇಕಿಂಗ್ ನ್ಯೂಸ್
05-07-22 10:27 pm HK News Desk ಕರ್ನಾಟಕ
ಹುಬ್ಬಳ್ಳಿ, ಜುಲೈ 5: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರನ್ನು ಪತ್ತೆ ಮಾಡಲು ಕೊನೆಗೆ ಜೆಸಿಬಿ ಕೂಡ ನೆರವಿಗೆ ಬಂದಿತ್ತು ಅನ್ನೋ ವಿಚಾರ ಬಯಲಾಗಿದೆ. ಬೆಳಗಾವಿ ಪೊಲೀಸರು ಜೆಸಿಬಿ ಅಡ್ಡ ಇಟ್ಟು ಹಂತಕರನ್ನು ಕಾಲರ್ ಹಿಡಿದು ನಡುಬೀದಿಯಲ್ಲಿ ದರ ದರನೆ ಎಳೆ ತರುವ ವಿಡಿಯೋ ವೈರಲ್ ಆಗಿದೆ.
ಕೊಲೆ ವಿಷಯ ತಿಳಿಯುತ್ತಲೇ ಹಂತಕರ ಪತ್ತೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಪೊಲೀಸರು ಅಲರ್ಟ್ ಆಗಿದ್ದರು. ಹಂತಕರು ನಗರ ದಾಟಿ ಹೋಗಬಾರದು ಎಂದು ಎಲ್ಲ ಕಡೆ ನಾಕಾಬಂದಿ ಹಾಕಿದ್ದರು. ಆದರೆ, ಆರೋಪಿಗಳು ಯಾರೆಂದು ತಿಳಿಯುತ್ತಲೇ ಲೊಕೇಶನ್ ನೋಡಿದಾಗ, ನಗರ ಬಿಟ್ಟು ಹೋಗಿದ್ದು ಕನ್ಫರ್ಮ್ ಆಗಿತ್ತು. ಕಾರಿನಲ್ಲಿ ಹುಬ್ಬಳ್ಳಿ ನಗರ ದಾಟಿ ಬೆಳಗಾವಿ ರಸ್ತೆಯಲ್ಲಿ ಎಸ್ಕೇಪ್ ಆಗುತ್ತಿರುವುದು ಕಂಡುಬಂದಿತ್ತು.


ಆರೋಪಿಗಳು ಬೆಳಗಾವಿ ರಸ್ತೆಯಲ್ಲಿ ಗೋವಾ ಅಥವಾ ಮಹಾರಾಷ್ಟ್ರಕ್ಕೆ ತೆರಳುವುದು ಖಾತ್ರಿಯಾಗಿತ್ತು. ಕೂಡಲೇ ಹುಬ್ಬಳ್ಳಿ ಪೊಲೀಸರ ತಂಡ ರಾಮದುರ್ಗ ಪೊಲೀಸರಿಗೆ ಸುದ್ದಿ ಮುಟ್ಟಿಸಿತ್ತು. ಕಾರಿನಲ್ಲಿ ಆರೋಪಿಗಳು ತೆರಳುತ್ತಿರುವ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಹೆದ್ದಾರಿಯ ಅಡ್ಡಲಾಗಿ ಜೆಸಿಬಿಯನ್ನೇ ಅಡ್ಡಕ್ಕಿಟ್ಟು ವಾಹನ ಸಂಚಾರವನ್ನು ತಡೆದು ಬಿಟ್ಟಿದ್ದರು. ಪೊಲೀಸರು ಅಡ್ಡಹಾಕಿದ್ದು ತಿಳಿಯುತ್ತಲೇ ಕಾರನ್ನು ರಿವರ್ಸ್ ತೆಗೆದು ಪರಾರಿಯಾಗಲು ಯತ್ನ ನಡೆದಿತ್ತು. ಆದರೆ ಪಿಸ್ತೂಲ್ ಹಿಡಿದೇ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಕಾರನ್ನು ಕೂಡಲೇ ಸುತ್ತುವರಿದರು. ಅದರಲ್ಲಿದ್ದ ಇಬ್ಬರನ್ನೂ ಕಾಲರ್ ಪಟ್ಟಿ ಹಿಡಿದು ಹೊರಕ್ಕೆಳೆದು ರಸ್ತೆಯಲ್ಲೇ ಎಳ್ಕೊಂಡು ಹೋಗಿ ಜೀಪಿಗೆ ಹತ್ತಿಸಿದ್ದಾರೆ.

ರಾಮದುರ್ಗ ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ 22ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಲ್ಲದೆ, ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಜೆಸಿಬಿಯನ್ನಿಟ್ಟು ಅಡ್ಡಹಾಕಿದ್ದು ಕಾರ್ಯವೈಖರಿಗೆ ಸಾಕ್ಷಿಯಾಗಿತ್ತು. ಅಲ್ಲದೆ, ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ, ಗ್ರಾಹಕರ ಸೋಗಿನಲ್ಲಿ ಬಂದು ಹೊಟೇಲಿನಲ್ಲೇ ಕೃತ್ಯ
Police use JCB to block Chandrashekhar Guruji murder accused near Belgaum highway as they were trying to flee towards Maharashtra. A Vastu exponent from Karnataka who goes by the name Chandrashekhar Guruji has been stabbed to death in full public view by two men at a private hotel in the Hubballi district. Special teams were formed to catch the killers and both have now been arrested.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm