ಬ್ರೇಕಿಂಗ್ ನ್ಯೂಸ್
06-07-22 08:50 pm HK News Desk ಕರ್ನಾಟಕ
ನವದೆಹಲಿ, ಜುಲೈ 6: ಕೇಂದ್ರ ಮೋದಿ ಸರಕಾರ ನಾಲ್ಕು ರಾಜ್ಯಗಳ, ನಾಲ್ಕು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಕರ್ನಾಟಕದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ಕು ರಾಜ್ಯಗಳ ನಾಲ್ವರು ವಿಶೇಷ ಸಾಧಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದೆ.
ಅಥ್ಲೀಟ್ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿರುವ ಪಯ್ಯೋಳಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಪಿ.ಟಿ.ಉಷಾ ಅವರನ್ನು ಕೇರಳದಿಂದ, ದೇಶ ಕಂಡ ಅತ್ಯಂತ ಅಪರೂಪದ ಸಂಗೀತ ಸಾಧಕೆ ಎಂದೇ ಖ್ಯಾತಿ ಗಳಿಸಿರುವ ಇಳಯರಾಜ ಅವರನ್ನು ತಮಿಳುನಾಡಿನಿಂದ ಮತ್ತು ಖ್ಯಾತ ಚಿತ್ರ ನಿರ್ದೇಶಕ ರಾಜಾಮೌಳಿ ಅವರ ತಂದೆ ತೆಲುಗು ಚಿತ್ರಕಥೆಗಾರ, ಕೆವಿ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
2015ರಲ್ಲಿ ಪದ್ಮವಿಭೂಷಣ ಪಡೆದಿದ್ದ ವೀರೇಂದ್ರ ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. 1984ರಲ್ಲಿ ಒಲಿಂಪಿಕ್ ನಲ್ಲಿ ಭಾರತ ಪ್ರತಿನಿಧಿಸಿದ್ದ ಪದಕ ಗೆಲ್ಲುವಲ್ಲಿ ಸ್ವಲ್ಪದರಲ್ಲಿ ಮಿಸ್ ಆಗಿದ್ದರು. ಓಟದ ಸ್ಪರ್ಧೆಯಲ್ಲಿ ಆಫ್ರಿಕನ್ನರು ಮಾತ್ರ ಅಧಿಪತ್ಯ ಸಾಧಿಸಿರುವ ನಡುವೆ ಪಿಟಿ ಉಷಾ ತಾನು ಕೂಡ ಗೆಲ್ಲಬಲ್ಲೆ ಎಂದು ತೋರಿಸಿದ್ದಲ್ಲದೆ, ಲಕ್ಷಾಂತರ ಅತ್ಲೀಟ್ ಗಳಿಗೆ ಸ್ಫೂರ್ತಿ ತುಂಬಿದ್ದರು. ಜಾಗತಿಕ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ತಮಿಳುನಾಡಿನ ಮದುರೈನಲ್ಲಿ ದಲಿತ ವರ್ಗದಲ್ಲಿ ಹುಟ್ಟಿ ಬೆಳೆದಿದ್ದ ಇಳಯರಾಜ ಐದು ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧಿಸಿದ್ದಕ್ಕೆ ಅಂಕೆಯಿಲ್ಲ. ದೇಶ ಕಂಡ ಅತ್ಯಂತ ಅಪರೂಪದ ಸಂಗೀತ ಸಾಧಕ ಎಂದೇ ಪರಿಚಿತರು. ಅತ್ಯಂತ ಕಷ್ಟದ ದಿನಗಳನ್ನು ಕಂಡು ಬೆಳೆದು ಬಂದಿದ್ದ ಇಳಯರಾಜ ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 700ಕ್ಕೂ ಹೆಚ್ಚು ಹಾಡಿಗೆ ಸಂಗೀತ ನೀಡುವ ಮೂಲಕ ದಾಖಲೆ ಬರೆದಿದ್ದಾರೆ. ಜಗತ್ತಿನಾದ್ಯಂತ 20 ಸಾವಿರಕ್ಕೂ ಹೆಚ್ಚು ಕಛೇರಿಗಳನ್ನು ಕೊಟ್ಟಿದ್ದಾರೆ. 2018ರಲ್ಲಿ ಅವರಿಗೆ ಪದ್ಮ ವಿಭೂಷಣ ಪುರಸ್ಕಾರ ನೀಡಲಾಗಿತ್ತು.
ಆಂಧ್ರಪ್ರದೇಶದ ಕೊವ್ವೂರು ಮೂಲದ ಕೆವಿ ವಿಜಯೇಂದ್ರ ಪ್ರಸಾದ್, ದೇಶ ಕಂಡ ಅತ್ಯಂತ ಖ್ಯಾತಿವೆತ್ತ ಚಿತ್ರ ಕಥೆಗಾರ ಮತ್ತು ಚಿತ್ರ ನಿರ್ದೇಶಕರಲ್ಲಿ ಒಬ್ಬರು. ಆರ್ ಆರ್ ಆರ್, ಬಾಹುಬಲೀ ಸಿರೀಸ್, ಬಜರಂಗಿ ಬಾಯಿಜಾನ್ ಅವರಿಗೆ ಜಗತ್ತಿನೆತ್ತರಕ್ಕೆ ಖ್ಯಾತಿ ತಂದುಕೊಟ್ಟಿದೆ. ಅವರು ಬರೆದಿರುವ ಕೆಲವು ಚಿತ್ರಕಥೆಗಳು ದೇಶದ ಬೌಂಡರಿಯನ್ನು ದಾಟಿ ವಿದೇಶದಲ್ಲೂ ಸದ್ದು ಮಾಡಿರುವುದು ವಿಶೇಷ. ಚಾರಿತ್ರಿಕ ಮತ್ತು ಪೌರಾಣಿಕ ವಿಚಾರಗಳನ್ನು ತೆಗೆದು ಚಿತ್ರ ಮಾಡುವುದರಲ್ಲಿ ಅವರು ಸಿದ್ಧಹಸ್ತರು. 2016ರಲ್ಲಿ ಬಜರಂಗಿ ಬಾಯಿಜಾನ್ ಚಿತ್ರಕ್ಕಾಗಿ ರಾಷ್ಟ್ರೀಯ ಫಿಲಂ ಫೇರ್ ಅವಾರ್ಡ್ ಪಡೆದಿದ್ದರು. ಅವರ ಪುತ್ರ ಎಸ್ಎಸ್ ರಾಜಾಮೌಲಿ ದೇಶದ ಖ್ಯಾತ ಚಿತ್ರ ನಿರ್ದೇಶಕರಲ್ಲಿ ಒಬ್ಬರು.
Iconic composer Ilaiyaraaja, celebrated athlete P T Usha, philanthropist Veerendra Heggade and screenwriter-director V Vijayendra Prasad were Wednesday nominated as Rajya Sabha members by the government.The four nominated representatives represent four South Indian states.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm