ಬ್ರೇಕಿಂಗ್ ನ್ಯೂಸ್
09-07-22 08:21 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 9: ಪವಿತ್ರ ಅಮರನಾಥ ಗುಹಾಲಯದ ಬಳಿ ಮೇಘ ಸ್ಫೋಟ ಉಂಟಾಗಿ ದುರಂತ ಸಂಭವಿಸಿದ್ದು, ರಾಜ್ಯದಿಂದ ಯಾತ್ರೆ ತೆರಳಿದ್ದ ನೂರಕ್ಕೂ ಹೆಚ್ಚು ಕನ್ನಡಿಗರು ಅಲ್ಲಲ್ಲಿ ಸಿಕ್ಕಿಬಿದ್ದಿದ್ದಾರೆ. ಜೂನ್ 30ರಂದು ಆರಂಭಗೊಂಡಿದ್ದ ಮರನಾಥ ಯಾತ್ರೆಗೆ ರಾಜ್ಯದಿಂದ 150ಕ್ಕೂ ಹೆಚ್ಚು ಮಂದಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಕಲಬುರಗಿ, ಬಾಗಲಕೋಟ, ಬೆಂಗಳೂರು ಸೇರಿದಂತೆ ವಿವಿಧೆಡೆಯ ಜನರು ತೆರಳಿದ್ದರು. ಈಗ ಯಾತ್ರೆಯ ಸಂದರ್ಭ ದುರಂತ ಎದುರಾಗಿರುವುದರಿಂದ ಬಹುತೇಕ ಮಂದಿ ಅರ್ಧದಿಂದಲೇ ಹಿಂದಕ್ಕೆ ಬರುತ್ತಿದ್ದಾರೆ.
ಪ್ರತ್ಯೇಕ ತಂಡಗಳಲ್ಲಾಗಿ ತೆರಳಿದ್ದು, ಕಲಬುರಗಿ, ಶಿವಮೊಗ್ಗ, ಬಾಗಲಕೋಟ, ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ತಾವು ಸುರಕ್ಷಿತ ಇರುವುದಾಗಿ ತಮ್ಮವರಿಗೆ ಸಂದೇಶ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ 30 ಮಂದಿಯ ತಂಡ ತೆರಳಿದ್ದು, ಅಮರನಾಥದಿಂದ 28 ಕಿಮೀ ದೂರದಲ್ಲಿದ್ದೇವೆ. ಸುರಕ್ಷಿತ ಇದ್ದೇವೆ. ನಾವು ಭಾನುವಾರ ಬೆಳಗ್ಗಿನ ಹೊತ್ತಿಗೆ ಅಮರನಾಥ ತಲುಪಲಿದ್ದು, ಶಿವನ ದರ್ಶನ ಮಾಡಿಯೇ ಬರುತ್ತೇವೆ. ದುರಂತ ನಡೆದ ಸ್ಥಳದಿಂದ ದೂರದಲ್ಲಿ ನಾವಿದ್ದೇವೆ ಎಂದು ತಂಡದ ಸದಸ್ಯ ಸುರೇಶ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ತಾವು ಸುರಕ್ಷಿತ ಇರುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಸಂದೇಶವನ್ನೂ ಕಳುಹಿಸಿದ್ದಾರೆ.
ಶಿವಮೊಗ್ಗದಿಂದ ತೆರಳಿದ್ದ 16 ಜನರ ತಂಡ ಸುರಕ್ಷಿತ ಇರುವುದಾಗಿ ತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ. ಕಾರ್ಪೊರೇಟರ್ ಸುರೇಖಾ ಮುರಲೀಧರ್ ನೇತೃತ್ವದಲ್ಲಿ ತಂಡ ಅಮರನಾಥಕ್ಕೆ ಹೊರಟಿತ್ತು. ಸದ್ಯ ಪೆಹಲ್ ಗಾಮ್ ನಲ್ಲಿದ್ದು ಎಲ್ಲರೂ ಸುರಕ್ಷಿತ ಇದ್ದೇವೆ. ಇಂದು ಮುಂಜಾನೆ ವೇಳೆಗೆ ಅಮರನಾಥ ದರ್ಶನ ಮಾಡಬೇಕಿತ್ತು. ಮೇಘ ಸ್ಫೋಟದಿಂದಾಗಿ ದರ್ಶನ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಸುರೇಖಾ ಮುರಲೀಧರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ನಮ್ಮ ತಂಡದಲ್ಲಿ 16 ಜನರಿದ್ದೇವೆ. ನಾವು ಅರ್ಧದಿಂದಲೇ ಹಿಂದೆ ಬರುತ್ತಿದ್ದೇವೆ. ಕರ್ನಾಟಕದಿಂದ ಒಟ್ಟು 150 ಮಂದಿ ತೆರಳಿರುವ ಮಾಹಿತಿ ಇದೆ. ಸರಕಾರದಿಂದ ಎಲ್ಲರನ್ನೂ ಮರಳಿ ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ. ನಾವು ಶ್ರೀನಗರಕ್ಕೆ ಬರುತ್ತಿದ್ದು, ಸೋಮವಾರ ಶಿವಮೊಗ್ಗಕ್ಕೆ ವಾಪಸ್ ಬರಲಿದ್ದೇವೆ. ನಿನ್ನೆಯೇ ಅಮರನಾಥನ ದರ್ಶನಕ್ಕೆ ಹೋಗಬೇಕಿತ್ತು. ಅದೃಷ್ಟದಿಂದ ಹೋಗಲು ಆಗಿರಲಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಿಂದ ಹತ್ತು ಜನ ವಕೀಲರ ತಂಡ ಅಮರನಾಥನ ದರ್ಶನಕ್ಕೆ ತೆರಳಿತ್ತು. ಪ್ರವಾಹ ಎದುರಾದ ಸಂದರ್ಭದಲ್ಲಿ ಸ್ಥಳದಲ್ಲೇ ನಾವು ಅಲ್ಲಿಯೇ ಇದ್ದೆವು. ಕಣ್ಣೆದುರಲ್ಲೇ ಹಲವಾರು ಮಂದಿ ಕೊಚ್ಚಿ ಹೋಗಿದ್ದಾರೆ. ಕೂದಲೆಲೆ ಅಂತರದಲ್ಲಿ ನಾವು ಪಾರಾಗಿದ್ದೇವೆ ಎಂದು ತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ. ಮೈಸೂರಿನ ತಂಡವೂ ಅರ್ಧದಿಂದಲೇ ವಾಪಸಾಗಲು ಸಜ್ಜಾಗಿದ್ದಾರೆ. ಬಾಗಲಕೋಟ ಜಿಲ್ಲೆಯಿಂದ ಇಬ್ಬರು ತೆರಳಿದ್ದು, ತಾವು ಸುರಕ್ಷಿತ ಇರುವುದಾಗಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ರಾಜ್ಯ ಸರಕಾರದಿಂದ ಸಹಾಯವಾಣಿ ಆರಂಭಿಸಿದ್ದು, ಯಾರಾದರೂ ನಡುವೆ ಸಿಕ್ಕಿಬಿದ್ದಿದ್ದಲ್ಲಿ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಿದಲ್ಲಿ ರಕ್ಷಣಾ ಕಾರ್ಯ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಒಮ್ಮೆಗೆ ಭಾರೀ ಪ್ರವಾಹದ ನೀರು ಘಟ್ಟಗಳಿಂದ ಹರಿದು ಬಂದಿದ್ದು, ಈ ವೇಳೆ ಯಾತ್ರೆ ತೆರಳುತ್ತಿದ್ದವರು ಕೊಚ್ಚಿ ಹೋಗಿದ್ದಾರೆ. ಆದರೆ ಎರಡು ದಿನಗಳ ಮೊದಲೇ ಪ್ರತಿಕೂಲ ಹವಾಮಾನ ಇದ್ದುದರಿಂದ ಸೇನಾ ಯೋಧರು ಯಾತ್ರಾರ್ಥಿಗಳ ಸುರಕ್ಷೆ ಬಗ್ಗೆ ಮುನ್ನಚ್ಚರಿಕೆ ವಹಿಸಿದ್ದರು. ಹಾಗಾಗಿ ಹೆಚ್ಚಿನ ದುರಂತ ಸಂಭವಿಸಿಲ್ಲ ಎನ್ನಲಾಗುತ್ತಿದೆ. ದಿಢೀರ್ ಆಗಿ ಪ್ರವಾಹ ಬಂದಿದ್ದರಿಂದ 40ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದು 15 ಮಂದಿ ಸಾವಿಗೀಡಾಗಿರುವ ಮಾಹಿತಿಗಳಿವೆ.
After cloudburst and flash floods on Friday evening claimed at least 16 lives, the Amarnath Yatra remains suspended in Jammu and Kashmir. More than 40 people are still missing and rescue operations - that continued overnight - are still on. On Saturday morning, 11 injured yatris (pilgrims) were airlifted from the shrine - the Holy Cave - to the Baltal base camp hospital as the IMD (India Meteorological Department) office in Srinagar predicted fresh flash floods. J&K's Lt Governor Manoj Sinha is constantly monitoring the situation.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm