ಬ್ರೇಕಿಂಗ್ ನ್ಯೂಸ್
11-07-22 04:12 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 11 : ಕುಖ್ಯಾತ ಗಾಂಜಾ ಪೂರೈಕೆದಾರನೊಬ್ಬ ತನ್ನ ಗಾಂಜಾ ಮಾರಾಟ ದಂಧೆಯಲ್ಲಿ ಬಂದಿದ್ದ ಹಣದಿಂದಲೇ ಚಾಮರಾಜನಗರ ಜಿಲ್ಲೆಯಲ್ಲಿ ಖರೀದಿಸಿದ್ದ 50 ಲಕ್ಷ ರೂ. ಮೌಲ್ಯದ 8 ಎಕರೆ ಕೃಷಿ ಜಮೀನನ್ನು ಬೆಂಗಳೂರು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ಬೆಂಗಳೂರಿನ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರಗ್ಸ್ ಸರಬರಾಜುದಾರನ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುಷ್ಪಾಪುರ ಮೂಲದ ಜಿ. ಮಲ್ಲೇಶ್ ಎಂಬಾತ ಮೈಸೂರು, ಬೆಂಗಳೂರು ನಗರಕ್ಕೆ ಗಾಂಜಾ ಪೂರೈಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಗಳಿಸಿದ್ದ. ನಾಲ್ಕು ವರ್ಷಗಳ ಹಿಂದೆ ಮಲ್ಲೇಶ್ ವಿರುದ್ಧ ಬೆಂಗಳೂರಿನಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರ ತನಿಖೆ ವೇಳೆ ಗಾಂಜಾ ದುಡ್ಡಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಇನ್‌ಸ್ಪೆಕ್ಟರ್ ಬಿ.ಎಸ್.ಅಶೋಕ್ ವರದಿ ಆಧರಿಸಿ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮಲ್ಲೇಶ್‌ಗೆ ಸೇರಿದ ಎಂಟು ಎಕರೆ ಭೂಮಿಯನ್ನು ಜಪ್ತಿ ಮಾಡಲಾಗಿದೆ. ಇದೇ ರೀತಿ 2021ರಲ್ಲಿ ಬಿಹಾರ ಮೂಲದ ಡ್ರಗ್ ಪೆಡ್ಲರ್‌ನಿಗೆ ಸೇರಿದ ಬೆಂಗಳೂರಿನ ಜಿಗಣಿ ಬಳಿಯಿದ್ದ 1 ಕೋಟಿ ಮೌಲ್ಯದ ಫ್ಲ್ಯಾಟನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ಮುಟ್ಟುಗೋಲು ಹಾಕಲಾಗಿತ್ತು.
ಊರಲ್ಲಿ ಗೂಡಂಗಡಿ, ನಗರದಲ್ಲಿ ಕಾರುಬಾರು !
ಮಲ್ಲೇಶ್ ಎರಡು ದಶಕಗಳಿಂದ ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಗಾಂಜಾ ಪೂರೈಸುತ್ತಿದ್ದ. ಬೆಂಗಳೂರಿನಲ್ಲಿ ಕೇಸು ದಾಖಲಾಗುತ್ತಲೇ ತಲೆಮರೆಸಿಕೊಂಡಿದ್ದ ಮಲ್ಲೇಶ್ ತನ್ನ ಕುಟುಂಬದೊಂದಿಗೆ ಪುಷ್ಪಾವರ ಗ್ರಾಮದಲ್ಲಿ ನೆಲೆಸಿದ್ದ. ಅಲ್ಲಿಯೇ ಪುಟ್ಟ ಗೂಡಂಗಡಿ ಇಟ್ಟುಕೊಂಡಿದ್ದ. ಆದರೆ ಅದರ ನಡುವೆಯೇ ಗಾಂಜಾ ಪೂರೈಕೆಯಿಂದ ವಾರ್ಷಿಕ ಕೋಟಿಗಟ್ಟಲೇ ವಹಿವಾಟು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ತಮಿಳುನಾಡಿಗೆ ಹೊಂದಿಕೊಂಡಿರುವ ಸತ್ಯಮಂಗಲ ಕಾಡಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಬೆಂಗಳೂರು ಹಾಗೂ ಮೈಸೂರು ನಗರಗಳ ಪೆಡ್ಲರ್‌ಗಳಿಗೆ ಮಾರುತ್ತಿದ್ದ. ದಂಧೆ ನಡೆಸುವುದಕ್ಕೆ ತನ್ನೂರಿನಲ್ಲೇ ನಾಲ್ಕೈದು ಮಂದಿಯನ್ನು ಸೇರಿಸಿ ಮಲ್ಲೇಶ ತಂಡ ಕಟ್ಟಿದ್ದ.
ಪತ್ನಿ, ಮಗನ ಹೆಸರಲ್ಲಿ ಎಂಟೆಕರೆ ಜಮೀನು
ಬೆಂಗಳೂರಿನ ಕೋಣನಕುಂಟೆ ಸಮೀಪ ಫ್ಲ್ಯಾಟ್ ಒಂದನ್ನು ಬಾಡಿಗೆ ಪಡೆದಿದ್ದ ಮಲ್ಲೇಶ್ ಅಲ್ಲಿ ಗಾಂಜಾ ಸಂಗ್ರಹಿಸಲು ಪ್ರತ್ಯೇಕ ಗೋದಾಮು ಮಾಡಿದ್ದ. 2018ರಲ್ಲಿ ಮಲ್ಲೇಶ್ ತಂಡದ ಮೇಲೆ ಕೋರಮಂಗಲ ಹಾಗೂ ಕೋಣನಕುಂಟೆ ಠಾಣೆಗಳಲ್ಲಿ ಪ್ರಕರಣ ದಾಖಲಾದ ಬಳಿಕ ಬೆಂಗಳೂರು ತೊರೆದು ಊರಿನಲ್ಲೇ ನೆಲೆ ನಿಂತಿದ್ದ. ಇತ್ತೀಚೆಗೆ ಗಾಂಜಾ ಪೂರೈಕೆ ವಿಚಾರವನ್ನ ಗಂಭೀರ ಪರಿಗಣಿಸಿದ ಸಿಸಿಬಿ ಮುಖ್ಯಸ್ಥ ರಮಣ ಗುಪ್ತಾ ಅವರು, ಮಲ್ಲೇಶ್ ಮೇಲಿನ ಪ್ರಕರಣಗಳ ತನಿಖೆಗಾಗಿ ಎಸಿಪಿ ರಾಮಚಂದ್ರ ಹಾಗೂ ಇನ್‌ಸ್ಪೆಕ್ಟರ್ ಬಿ.ಎಸ್.ಅಶೋಕ್ ನೇತೃತ್ವದ ತಂಡ ರಚಿಸಲಾಗಿತ್ತು.
ತನಿಖೆ ನಡೆಸಿದ ಸಿಸಿಬಿ ಪೊಲೀಸರಿಗೆ ಮಲ್ಲೇಶ್ ತನ್ನೂರಿನ ಪಕ್ಕದ ಶಾಗ್ಯ ಗ್ರಾಮದಲ್ಲಿ 2013ರಲ್ಲಿ ತನ್ನ ಪತ್ನಿ ಮತ್ತು ಮಗನ ಹೆಸರಿನಲ್ಲಿ ಕೃಷಿ ಜಮೀನು ಖರೀದಿಸಿರುವುದು ತಿಳಿದುಬಂದಿತ್ತು. ಜಮೀನಿನ ಕುರಿತು ಸಿಸಿಬಿ ಬರೆದ ಪತ್ರದ ಮೇರೆಗೆ ಹನೂರು ತಾಲೂಕು ತಹಸೀಲ್ದಾರ್, ಶಾಗ್ಯ ಗ್ರಾಮದಲ್ಲಿ 8 ಎಕರೆ ಭೂಮಿಯನ್ನು ಮಲ್ಲೇಶ್ ಖರೀದಿಸಿದ್ದಾರೆ. ಕೃಷಿಗೆ ಯೋಗ್ಯ ಭೂಮಿಯಾಗಿದೆ. ಆದರೆ ಬೇಸಾಯ ಮಾಡದೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ ಎಂದು ವರದಿ ನೀಡಿದ್ದರು. ವರದಿಯನ್ನು ಕೋರ್ಟಿಗೆ ಸಲ್ಲಿಸಿ, ಮಲ್ಲೇಶ್ ಆಸ್ತಿ ಮುಟ್ಟುಗೋಲಿಗೆ ಪೊಲೀಸರು ಅನುಮತಿ ಪಡೆದುಕೊಂಡಿದ್ದರು.
ಬ್ಯಾಂಕ್‌ನಲ್ಲಿ 2 ಕೋಟಿ ವಹಿವಾಟು
ಮೇಲ್ನೋಟಕ್ಕೆ ಪುಟ್ಟ ಗೂಡಂಗಡಿ ಹೊಂದಿದ್ದರೂ, ಮಲ್ಲೇಶನ ಬ್ಯಾಂಕ್ ಖಾತೆಯಲ್ಲಿ ವಾರ್ಷಿಕ 2 ಕೋಟಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆತನ 5 ಬ್ಯಾಂಕ್ ಖಾತೆಗಳಲ್ಲಿದ್ದ 3 ಲಕ್ಷವನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
In a first, Bengaluru city police have seized the properties of a drug peddler in connection with narcotics cases, joint commissioner of Central Crime Branch (CCB) Raman Gupta said on Saturday, adding the value of the movable and immovable assets seized is around ₹50 lakh.In a statement, the police said the seizure of property was carried out under the provisions of the Narcotic Drugs and Psychotropic Substances Act, 1985. According to the CCB, the properties seized belonged to Mallesh G, a resident of Hanur in Chamarajanagar district.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm