ಬ್ರೇಕಿಂಗ್ ನ್ಯೂಸ್
19-07-22 12:29 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 19: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅತ್ಯಾಪ್ತೆಯೆಂದು ಗುರುತಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ಬೆಳಗಾವಿ ಮೂಲದ ತೋಟಗಾರಿಕೆ ಇಲಾಖೆಯ ಅಧಿಕಾರಿಯನ್ನು ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಮತ್ತು ಆಕೆಯ ಸಹಚರ ತಿಲಕ್ ರಾಜ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಳಗಾವಿ ಮೂಲದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜ್ ಕುಮಾರ್ ತನ್ನನ್ನು 50 ಲಕ್ಷ ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು ದೂರು ನೀಡಿದ್ದಾರೆ. ನವ್ಯಶ್ರೀ ತನಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದು ಸುಳ್ಳು ಕೇಸ್ ಹಾಕಿ ಜೈಲಿಗಟ್ಟೋದಾಗಿ ಬೆದರಿಕೆ ಹಾಕಿದ್ದಾಳೆ ಎಂದಿದ್ದಾರೆ.
ಎಫ್ಐಆರ್ ನಲ್ಲಿ ಇರೋದೇನು?
ಡಿಸೆಂಬರ್ 2020ರಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನನ್ನು ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿ ನವ್ಯಾ ಪರಿಚಯ ಮಾಡಿಕೊಂಡಿದ್ದಳು. ಚನ್ನಪಟ್ಟಣದಲ್ಲಿ ನವ್ಯಾ ಫೌಂಡೇಶನ್ ಹೆಸರಿನ ಎನ್‌ಜಿಒ ನಡೆಸುತ್ತಿರುವುದಾಗಿ ಹೇಳಿದ್ದಳು. ಆನಂತರ, ನನಗೆ ಮದುವೆಯಾಗಿದೆ, ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ಗೆಳೆತನ ಬೆಳೆಸಿ ಸಲುಗೆ ಹೊಂದಿದ್ದಳು. ಒಂದೂವರೆ ವರ್ಷ ಪರಿಚಯದ ನೆಪದಲ್ಲಿ ಬೇರೆ ಬೇರೆ ಸ್ಥಳದಲ್ಲಿ ಭೇಟಿಯಾಗಿದ್ದೆವು. ಬೆಳಗಾವಿಗೂ ಆಕೆ ಬಂದು ಭೇಟಿಯಾಗಿದ್ದಳು. ಈ ನಡುವೆ, 2021ರ ಡಿಸೆಂಬರ್ 24ರಂದು ನನಗೆ ಕರೆ ಮಾಡಿ ವಿಡಿಯೋ ಇದೆಯೆಂದು ಹೇಳಿ ಬೆದರಿಕೆ ಒಡ್ಡಿದ್ದಾಳೆ. ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೋ ಇದೆ ಎಂದು ಬೆದರಿಕೆ ಒಡ್ಡಿದ್ದು ಒಂದೋ 50 ಲಕ್ಷ ಹಣ ನೀಡಬೇಕು. ಇಲ್ಲದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟು ಮಾನ ಕಳೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ನವ್ಯಶ್ರೀ ಮತ್ತು ಆಕೆಯ ಗೆಳೆಯ ತಿಲಕರಾಜ್ ಸೇರಿ ಫೋನ್ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ರಾಜಕುಮಾರ್ ತಿಳಿಸಿದ್ದು ಎಫ್ಐಆರ್ ದಾಖಲಾಗಿದೆ.
Bangalore Plan to honey trap Horticulture officer by close aide of DK Suresh, FIR filed Against Navyashree rao For demanding Rs 50 lakhs. Navyashree rao is said to be a congress leader from channapatna. The complaint was filed by Horticulture officer assistant director raj kumar.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm