ಆನೆ ಕೊಂದು ದಂತ ಮಾರಾಟ ಪ್ರಕರಣ ; ಆರೋಪಿಗಳ ರಕ್ಷಣೆಗೆ ಸಂಸದ ಪ್ರಜ್ವಲ್ ರೇವಣ್ಣ ಯತ್ನ - ಬೊಮ್ಮಾಯಿಗೆ ಪತ್ರ ಬರೆದ ಮನೇಕಾ ಗಾಂಧಿ  

19-07-22 10:00 pm       HK News Desk   ಕರ್ನಾಟಕ

ಆನೆಯನ್ನು ಕೊಂದು ಹೂತು ಹಾಕಿದ್ದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಗಳ ರಕ್ಷಣೆಗೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಆರೋಪಿತ ಅರಣ್ಯಾಧಿಕಾರಿಗಳನ್ನು ಗುರಿಯಾಗಿಸಿ ವಿಜಿಲೆನ್ಸ್ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದೆ ಮನೇಕಾ ಗಾಂಧಿ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹಾಸನ, ಜುಲೈ 19: ಆನೆಯನ್ನು ಕೊಂದು ಹೂತು ಹಾಕಿದ್ದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಗಳ ರಕ್ಷಣೆಗೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಆರೋಪಿತ ಅರಣ್ಯಾಧಿಕಾರಿಗಳನ್ನು ಗುರಿಯಾಗಿಸಿ ವಿಜಿಲೆನ್ಸ್ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದೆ ಮನೇಕಾ ಗಾಂಧಿ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹಾಸನ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿದ್ಯುತ್ ಹರಿಸಿ ಆನೆಯನ್ನು ಕೊಂದು ಹಾಕಿದ್ದಲ್ಲದೆ, ಅದರ ದಂತವನ್ನು ತೆಗೆದು ಮಾರಾಟಕ್ಕೆ ಯತ್ನಿಸಲಾಗಿತ್ತು. ಮಾರ್ಚ್ 19ರಂದು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಠಾಣೆಯ ಪೊಲೀಸರಿಗೆ ದಂತ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆಮೂಲಕ ಆನೆಯನ್ನು ಕೊಂದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

Maneka Gandhi writes to Karnataka CM Bommai, seeks probe into tusker death  | Cities News,The Indian Express

ಆದರೆ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು ಒಟ್ಟು ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಅರಣ್ಯಾಧಿಕಾರಿಗಳು ಕೃತ್ಯದಲ್ಲಿ ಶಾಮೀಲಾಗಿದ್ದು, ಆರೋಪಿಗಳ ರಕ್ಷಣೆಗೆ ಹಾಸನ ಅರಣ್ಯ ಇಲಾಖೆಯ ಆರ್ ಎಫ್ ಓ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಸಿಕೆ ಅಚ್ಚುಕಟ್ಟು ಠಾಣೆಯ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲು ಒತ್ತಡ ಹೇರುತ್ತಿದ್ದಾರೆ.

Delhi High Court issues summons to Maneka Gandhi in defamation case by  veterinarians

Karnataka will have an employment policy: CM Bommai | Deccan Herald

ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರಾಗಿದ್ದು, ಸಂಸದರು ಅವರ ರಕ್ಷಣೆಗೆ ನಿಂತಿದ್ದಾರೆ. ಪ್ರಕರಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮುತುವರ್ಜಿ ವಹಿಸಬೇಕು. ಪ್ರಕರಣವನ್ನು ಹಾಸನ ಅರಣ್ಯ ಇಲಾಖೆಯಿಂದ ಪಡೆದು ವಿಜಿಲೆನ್ಸ್ ತನಿಖೆಗೆ ಒಪ್ಪಿಸಬೇಕು ಎಂದು ಮನೇಕಾ ಗಾಂಧಿ ಜುಲೈ 18ರಂದು ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Animal rights activist Maneka Gandhi, MP, has written to Chief Minister Basavaraj Bommai seeking a probe into the electrocution of a tusker, which came to light early this year in Hassan.Ms. Gandhi has alleged that a Range Forest Officer (RFO) in Hassan was trying to protect the accused in the case, buckling under pressure from Prajwal Revanna, MP.