ಬ್ರೇಕಿಂಗ್ ನ್ಯೂಸ್
21-07-22 04:07 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 21: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಮುಖ ಆರೋಪಿಯಾಗಿದ್ದರು.
ಸಾಕ್ಷ್ಯಾಧಾರಗಳ ಕೊರತೆಯಿಂದ ಈಶ್ವರಪ್ಪ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಉಡುಪಿ ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಬೆಳಗಾವಿಯ ಹಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ರು. 4 ಕೋಟಿ ವೆಚ್ಚದ ಕಾಮಗಾರಿ ಬಿಲ್ ಮಾಡಲು ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳಿದ್ದರು ಎಂದು ಆರೋಪಿಸಿ ಎ.12ರಂದು ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಾಟ್ಸಪ್ ನಲ್ಲಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶದಲ್ಲಿ ಈಶ್ವರಪ್ಪ ಅವರೇ ತನ್ನ ಸಾವಿಗೆ ಕಾರಣ ಎಂದು ಸಂತೋಷ್ ಪಾಟೀಲ್ ಬರೆದಿದ್ದರು.
ಮೃತ ಸಂತೋಷ್ ಪಾಟೀಲ್ ಸಂಬಂಧಿಕರು ನೀಡಿದ ದೂರಿನಂತೆ ಸೆಕ್ಷನ್ 306 ಮತ್ತು 334 ಅಡಿ ಈಶ್ವರಪ್ಪ, ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತೋಷ್ ಸಾವಿಗೆ ಕಾರಣವಾಗಿರುವ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗದೆ ಶವ ಸಾಗಿಸುವುದಿಲ್ಲ ಎಂದು ಸಂಬಂಧಿಕರು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಉಡುಪಿ ಠಾಣೆಯಲ್ಲಿಯೇ ಎಫ್ಐಆರ್ ದಾಖಲಾಗಿತ್ತು. ಕಾಂಗ್ರೆಸ್ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದ ಬಳಿಕ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಪ್ರಭಾವ ಬೀರಿ ಬಿ ರಿಪೋರ್ಟ್ ಹಾಕಿಸಿದ್ದಾರೆ
ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದ ಬಗ್ಗೆ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಅನುಮಾನ ಕಡೆಗೂ ನಿಜವಾಯ್ತು. ಈಶ್ವರಪ್ಪ ಪೊಲೀಸರ ಮೇಲೆ ಪ್ರಭಾವ ಬೀರಿ ಬಿ ರಿಪೋರ್ಟ್ ಹಾಕಿಸಿದ್ದಾರೆ. ನನಗೆ ನ್ಯಾಯ ಸಿಗುವ ವರೆಗೂ ಹೋರಾಟ ಕೈಬಿಡುವುದಿಲ್ಲ. ಪೊಲೀಸರು ಪ್ರಭಾವಕ್ಕೆ ಒಳಗಾಗಿದ್ದಾರೆಂದು ಇತ್ತೀಚೆಗೆ ರಾಜ್ಯಪಾಲರಿಗೂ ಪತ್ರ ಬರೆದು ಎಲ್ಲವನ್ನೂ ವಿವರಿಸಿದ್ದೇನೆ. ನನ್ನ ಪತಿಯ ಮೊಬೈಲಿನಲ್ಲಿ ಈಶ್ವರಪ್ಪ ವಿರುದ್ಧದ ಎಲ್ಲ ಸಾಕ್ಷ್ಯಗಳಿದ್ದವು. ಆದರೆ ಪೊಲೀಸರು ಆ ಮೊಬೈಲನ್ನು ನಮಗೆ ಕೊಟ್ಟಿಲ್ಲ. ಉಡುಪಿ ಎಸ್ಪಿ ಸೇರಿದಂತೆ ತನಿಖಾಧಿಕಾರಿ ಫೋನ್ ಮಾಡಿದರೆ ರಿಸೀವ್ ಮಾಡುವುದಿಲ್ಲ. ಉಡುಪಿ ಪೊಲೀಸರು ರಾಜಕೀಯ ಪ್ರಭಾವಕ್ಕೊಳಗಾಗಿ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.
Former Karnataka minister KS Eshwarappa was on Wednesday cleared of all charges by the police in an abetment to suicide case. Eshwarappa was booked in April after Santosh Patil– a Belagavi-based contractor who had accused him of corruption – was found dead in a lodge in Udupi. The contractor allegedly died by suicide.In a WhatsApp message purportedly sent by him to his friends, Patil had named Eshwarappa as the “sole cause” of his death. Eshwarappa, he alleged, had demanded 40% commission to clear his Rs 4 crore bill for the work that he had done for the Rural Development and Panchayati Raj departments of the Karnataka government.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm