ವೈಯಕ್ತಿಕ ಅಭಿಪ್ರಾಯ ಹೇಳ್ದೆ, ಅಧ್ಯಕ್ಷರು ಸಿಟ್ಟು ಮಾಡ್ಕೊಂಡ್ರೆ ನಾನೇನು ಮಾಡಕ್ಕಾಗತ್ತೆ ; ಡಿಕೆಶಿಗೆ ಟಾಂಗ್ ಇಟ್ಟ ಜಮೀರ್ 

23-07-22 10:16 pm       Bangalore Correspondent   ಕರ್ನಾಟಕ

ರಾಜ್ಯ ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ಜೋರಾಗಿದೆ. ಮಾಜಿ ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಎಂದು  ಹೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಬಾಯಿ ಮುಚ್ಕೊಂಡು ಕೆಲಸ ಮಾಡಿ ಅಂತ ವಾರ್ನಿಂಗ್​ ಕೊಟ್ಟಿದ್ದರು.

ಬೆಂಗಳೂರು, ಜುಲೈ 23 : ರಾಜ್ಯ ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ಜೋರಾಗಿದೆ. ಮಾಜಿ ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಎಂದು  ಹೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಬಾಯಿ ಮುಚ್ಕೊಂಡು ಕೆಲಸ ಮಾಡಿ ಅಂತ ವಾರ್ನಿಂಗ್​ ಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಮೀರ್​ ಅಹಮದ್​, ಕೆಪಿಸಿಸಿ ಅಧ್ಯಕ್ಷರು ಸಿಟ್ಟು ಮಾಡಿಕೊಂಡರೆ ನಾನೇನು ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ. 

ದಾವಣಗೆರೆಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾಸಕ ಜಮೀರ್​ ಅಹಮದ್​, ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಸಿಟ್ಟು ಬಂದರೆ ನಾನೇನು ಮಾಡೋಕೆ ಸಾಧ್ಯ..? ಸಿಎಂ ಅಭ್ಯರ್ಥಿ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್​ ತೀರ್ಮಾನ ಮಾಡುತ್ತೆ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅಂತಿಮ ತೀರ್ಮಾನ ತೆಗೆದುಕೊಳ್ತಾರೆ. ಸಿದ್ದರಾಮಯ್ಯರೇ ನಮ್ಮ ಮುಂದಿನ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನಗೆ ನನ್ನ ಅಭಿಪ್ರಾಯವನ್ನು ಹೇಳುವ ಸ್ವಾತಂತ್ರ್ಯವಿದೆ. ಪಕ್ಷದ ಅಧ್ಯಕ್ಷರ ಮೇಲೂ ನನಗೆ ಗೌರವ ಇದೆ ಎಂದು ಹೇಳಿ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ. 

ED summons Sonia Gandhi, Rahul Gandhi in National Herald case -  BusinessToday

ಸಿಎಂ ಹುದ್ದೆ ವಿಚಾರದಲ್ಲಿ ಮೊದಲು ಹೇಳಿಕೆ ನೀಡಿದ್ದೇ ಡಿ.ಕೆ ಶಿವಕುಮಾರ್​. ಕೆಪಿಸಿಸಿ ಅಧ್ಯಕ್ಷರೇ ಮುಂದಿನ ಸಿಎಂ ಬಗ್ಗೆ ಮಾತನಾಡಿದ ಬಳಿಕವೇ ನಾವೆಲ್ಲ ಸಿಎಂ ಬಗ್ಗೆ ಮಾತನಾಡಿದ್ದೇವೆ. ಅದಕ್ಕೂ ಮುನ್ನ ನಮ್ಮಲ್ಲಿ ಯಾರೂ ಮುಂದಿನ ಸಿಎಂ ಬಗ್ಗೆ ಮಾತೇ ಆಡಿರಲಿಲ್ಲ. ಎಲ್ಲಾ ಸಮುದಾಯದವರಿಗೂ ಅವಕಾಶ ಸಿಗಬೇಕು ಎಂಬುದಷ್ಟೇ ನಮ್ಮ ಆಶಯ ಎಂದು ಜಮೀರ್​ ಹೇಳಿದರು. 

ED raids at Congress MLA Zameer Ahmed Khan's properties | Deccan Herald

ದಾವಣಗೆರೆಯಲ್ಲಿ ಆಗಸ್ಟ್​ 3 ರಂದು ಸಿದ್ದರಾಮಯ್ಯ ಹುಟ್ಟಿದ ಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರು, ಶಾಸಕರು ಸೇರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪ್ಲಾನ್​ಮಾಡಿದ್ದಾರೆ. ಆಮೂಲಕ ವಿಪಕ್ಷ ಮತ್ತು ಸ್ವಪಕ್ಷೀಯರಿಗೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದೇ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಾವಣೆಗೆರೆಗೆ ಬಂದ ಶಾಸಕ ಜಮೀರ್​ ಅಹಮದ್​ ಡಿ.ಕೆಶಿಗೆ ಟಾಂಗ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.

Squabbling in the Congress' Karnataka unit continued between leaders loyal to state president D K Shivakumar and former chief minister Siddaramaiah over who should be the chief minister if the party wins power in next year's Assembly elections, with the former urging party members to 'first work to bring the party to power.'In response to party MLA B Z Zameer Ahmed Khan's statement that the state's people wanted Siddaramaiah to be the next chief minister, Shivakumar urged everyone to 'keep their mouths shut and work to bring the party to power.'