ಲಷ್ಕರ್ ಸಂಘಟನೆ ನಂಟು ; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ 

25-07-22 12:19 pm       Bangalore Correspondent   ಕರ್ನಾಟಕ

ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾ ಜೊತೆ ಗುರುತಿಸಿಕೊಂಡ ಆರೋಪದಲ್ಲಿ ಅಸ್ಸಾಂ ಮೂಲದ ಶಂಕಿತ ಉಗ್ರ‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ಜುಲೈ 25: ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾ ಜೊತೆ ಗುರುತಿಸಿಕೊಂಡ ಆರೋಪದಲ್ಲಿ ಅಸ್ಸಾಂ ಮೂಲದ ಶಂಕಿತ ಉಗ್ರ‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಅಸ್ಸಾಂ ಮೂಲದ ಅಖ್ತರ್ ಹುಸೇನ್ ಬಂಧನಕ್ಕೊಳಗಾದ ಶಂಕಿತ ಉಗ್ರ.‌ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಯುವಕ ವಾಸವಿದ್ದ ತಿಲಕ್ ನಗರದ ಬಿಟಿಪಿ ಏರಿಯಾಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಕಟ್ಟಡವೊಂದರ ಮೂರನೇ ಮಹಡಿಯ ಕೋಣೆಯಲ್ಲಿ ಅಖ್ತರ್ ಹುಸೇನ್ ವಾಸವಿದ್ದ. 

Suspected Lashkar-e-Taiba terrorist arrested in Bengaluru, probe underway |  India News – India TV

ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಇತರ ಯುವಕರೊಂದಿಗೆ ವಾಸ್ತವ್ಯ ಹೂಡಿದ್ದ. ಆದರೆ ಬೆಂಗಳೂರಿನಲ್ಲಿದ್ದುಕೊಂಡು ಸೈಲಂಟ್ ಆಗಿಯೇ ಉಗ್ರವಾದಿ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ತಿಳಿದಿಬಂದಿತ್ತು. ಕೊಠಡಿಯಲ್ಲಿರುವ ಖಚಿತ ಮಾಹಿತಿ ಪಡೆದು 30ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ದಾಳಿ ಕಾರ್ಯಚರಣೆ ನಡೆಸಿದ್ದರು.‌ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ.

Police in Karnataka have arrested a suspected Lashkar-e-Taiba (LeT) terrorist and detained four other persons in a late night operation in Bengaluru, sources said on Monday.