ಬಿಜೆಪಿಯ ನಾಲ್ಕು ಜನ ಪಾಪಿಗಳು ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದ್ದಾರೆ, ಶಾಪ ತಟ್ಟದೆ ಇರಲ್ಲ ; ಬೇಳೂರು ಗೋಪಾಲಕೃಷ್ಣ 

25-07-22 03:18 pm       HK News Desk   ಕರ್ನಾಟಕ

ಬಿಜೆಪಿಯ ನಾಲ್ಕು ಜನ ಪಾಪಿಗಳು ಸೇರಿ ಬಿ.ಎಸ್​​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಸಾಗರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. 

ಶಿವಮೊಗ್ಗ, ಜುಲೈ 25 : ಬಿಜೆಪಿಯ ನಾಲ್ಕು ಜನ ಪಾಪಿಗಳು ಸೇರಿ ಬಿ.ಎಸ್​​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಸಾಗರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್​​ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಈ ನಾಲ್ಕು ಜನರು ಸೇರಿ ಯಡಿಯೂರಪ್ಪ ಕುಟುಂಬವನ್ನು ತೆಗೀಬೇಕು ಅಂತಾ ಕಣ್ಣೀರು ಹಾಕಿಸಿ ರಾಜೀನಾಮೆ ನೀಡುವಂತೆ ಮಾಡಿಸಿದ್ದರು. ಇವರಿಗೆ ಯಡಿಯೂರಪ್ಪರ ನೋವು, ಶಾಪ ತಟ್ಟದೆ ಬಿಡುವುದಿಲ್ಲ ಎಂದರು.

K S Eshwarappa sparks row with expletive against Congress leaders,  apologises later | Deccan Herald

ಬಿಜೆಪಿಯವರೇ ಈಶ್ವರಪ್ಪ ಅವರಿಗೆ ಹೊಂಡ ತೆಗೆಯುತ್ತಾರೆ. ಈಶ್ವರಪ್ಪ ತಮ್ಮ ರಾಜಕೀಯ ನಾಯಕತ್ವ ಉಳಿಸಿಕೊಳ್ಳಲು ಮಾಡಿರುವ ಕುತಂತ್ರ ಇದು. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್​ ಕುಟುಂಬದ ಶಾಪ ಈಶ್ವರಪ್ಪನವರಿಗೆ ತಟ್ಟದೆ ಇರಲ್ಲ. ರಾಜ್ಯದಲ್ಲಿ ಅವರ ಸರ್ಕಾರ ಇದೆ. ಹಾಗಾಗಿ ಅವರಿಗೆ ಬೇಕಾದ ಹಾಗೇ ರಿಪೋರ್ಟ್ ಮಾಡಿಸಿಕೊಂಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

After accusing Minister Eshwarappa of corruption, Belagavi BJP worker ends  life | Deccan Herald

ಸಂತೋಷ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿ. ಹರ್ಷ ಒಬ್ಬನೇ ಹಿಂದೂ ನಾ? ಸಂತೋಷ್ ಪಾಟೀಲ್ ಕೂಡ ಹಿಂದೂ ತಾನೇ. ಅಲ್ಲದೇ ಅವರ ಪಕ್ಷದ ಕಾರ್ಯಕರ್ತ. ಅವರಿಗೇಕೆ ಬಿಜೆಪಿ ನಾಯಕರು ಆರ್ಥಿಕ ಸಹಾಯ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಧರ್ಮ ವಿರೋಧಿ ಹೇಳಿಕೆ ನೀಡುವವರನ್ನು ಬಂಧಿಸಲು ಕಠಿಣ ಕಾನೂನು ಜಾರಿಗೆ ತನ್ನಿ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಅಷ್ಟು ಹಾನಿಯಾದರೂ ಒಮ್ಮೆ ಮಾತ್ರ ಭೇಟಿ ನೀಡಿ ಹೋಗಿದ್ದಾರೆ. ಇವರಿಗೆ ಜನರ ಹಿತ ಮುಖ್ಯ ಅಲ್ಲ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

BSY Retirement, 4 people are the main reason and responsible for his Retirement from karnataka ​Poll Politics slams Belur Gopalkrishna in Shivamogga.