ಬ್ರೇಕಿಂಗ್ ನ್ಯೂಸ್
25-07-22 10:49 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 25 : ಇತ್ತೀಚೆಗೆ ಯಡಿಯೂರಪ್ಪ ಕಾಲದಲ್ಲಿ ನೇಮಕಗೊಂಡಿದ್ದ ನಿಗಮ ಮಂಡಳಿ ಅಧ್ಯಕ್ಷರನ್ನು ವಜಾ ಮಾಡಲಾಗಿತ್ತು. ಇದೀಗ 22 ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರನ್ನ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 54 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಇದೀಗ ಆ ಪೈಕಿ 22 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿದೆ. ಕರಾವಳಿ ಭಾಗದ ಇಬ್ಬರ ಹೆಸರು ಇದೆ. ಗೇರು ಅಭಿವೃದ್ಧಿ ನಿಗಮದ ಮಣಿರಾಜ ಶೆಟ್ಟಿ ಮೊನ್ನೆ ತೆರವಾದ ಪಟ್ಟಿಯಲ್ಲೂ ಇತ್ತು. ಇದೀಗ ಹೊಸ ಪಟ್ಟಿಯಲ್ಲಿ ಅದೇ ಹೆಸರು ಗೇರು ಅಭಿವೃದ್ಧಿ ನಿಗಮಕ್ಕಿದೆ. ಸುಳ್ಯ ಮೂಲದ ಎವಿ ತೀರ್ಥರಾಮ ಅವರನ್ನು ಮೀನುಗಾರಿಕಾ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಮಾನ್ಯವಾಗಿ ಮೀನುಗಾರಿಕಾ ವೃತ್ತಿ ನಡೆಸುವ ಬೋವಿ, ಖಾರ್ವಿ, ಮೊಗವೀರ ಸಮುದಾಯದವರಿಗೆ ಈ ನಿಗಮದ ಹೊಣೆ ಕೊಡುತ್ತಿದ್ದರು. ಈ ಬಾರಿ ಸುಳ್ಯ ಮೂಲದ ವ್ಯಕ್ತಿಗೆ ನಿಗಮದ ಹೊಣೆ ನೀಡಿರುವುದು ಬಿಜೆಪಿಯಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.
ನಿಗಮ-ಮಂಡಳಿಗೆ ಹೊಸ ಅಧ್ಯಕ್ಷರ ಪಟ್ಟಿ ಇಂತಿದೆ.
1. ಸಫಾಯಿ ಕರ್ಮಚಾರಿ ನಿಗಮ - ಕೆ.ಪಿ.ವೆಂಕಟೇಶ್
2. ಅಲೆಮಾರಿ ಅಭಿವೃದ್ಧಿ ನಿಗಮ-ದೇವೇಂದ್ರನಾಥ್.ಕೆ
3. ಕಾಡುಗೊಲ್ಲ ಅಭಿವೃದ್ಧಿ ನಿಗಮ-ಚಂಗಾವರ ಮಾರಣ್ಣ
4. ವಸ್ತುಪ್ರದರ್ಶನ ಪ್ರಾಧಿಕಾರ-ಮಿರ್ಲೆ ಶ್ರೀನಿವಾಸ
5. ಮಾವು ಅಭಿವೃದ್ಧಿ ನಿಗಮ-ಎಂ.ಕೆ.ವಾಸುದೇವ್
6. ದ್ರಾಕ್ಷಿ, ವೈನ್ ಬೋರ್ಡ್ - N.M.ರವಿ ನಾರಾಯಣ ರೆಡ್ಡಿ
7. ರೇಷ್ಮೆ ಮಾರಾಟ ಮಂಡಳಿ - ಬಿ.ಸಿ.ನಾರಾಯಣ ಸ್ವಾಮಿ
8. ಲಿಂಬೆ ಅಭಿವೃದ್ಧಿ ಮಂಡಳಿ-ಚಂದ್ರಶೇಖರ ಕವಟಗಿ
9. ಗೇರು ಅಭಿವೃದ್ಧಿ ನಿಗಮ-ಮಣಿರಾಜ ಶೆಟ್ಟಿ
10.ಪಶ್ಚಿಮ ಘಟ್ಟಗಳ ಕಾರ್ಯಪಡೆ - ಗೋವಿಂದ ನಾಯ್ಕ್
11. ಮೈಸೂರು ಮೃಗಾಲಯ ಪ್ರಾಧಿಕಾರ-M.ಶಿವಕುಮಾರ್
12. ಅರಣ್ಯ ಅಭಿವೃದ್ಧಿ ನಿಗಮ-ರೇವಣ್ಣಪ್ಪ ಕೋಳಗಿ
13. ಜೀವ ವೈವಿದ್ಯ ಮಂಡಳಿ - ರವಿಕಾಳಪ್ಪ
14. ಕುರಿ, ಉಣ್ಣೆ ಅಭಿವೃದ್ಧಿ ನಿಗಮ-ಧರ್ಮಣ್ಣ ದೊಡ್ಡಮನೆ
15. ಮೀನುಗಾರಿಕೆ ಅಭಿವೃದ್ಧಿ ನಿಗಮ- ಎ.ವಿ ತೀರ್ಥರಾಮ
16. ಪೇಂಟ್ಸ್, ವಾರ್ನಿಷ್ - ರಘು ಕೌಟಿಲ್ಯ
17. ಜವಳಿ ಅಭಿವೃದ್ಧಿ ನಿಗಮ- ವಿರೂಪಾಕ್ಷಗೌಡ
18. ಖಾದಿ, ಗ್ರಾಮೋದ್ಯೋಗ ಮಂಡಳಿ-K.V.ನಾಗರಾಜ್
19. ಕರಕುಶಲ ಅಭಿವೃದ್ಧಿ ನಿಗಮ-ಮಾರುತಿ ಅಷ್ಟಗಿ
20. ತುಂಗಾಭದ್ರ ಯೋಜನೆ (ಕಾಡಾ)-ಕೊಲ್ಲಾ ಶೇಷಗಿರಿ ರಾವ್
21. ಕಾವೇರಿ ಜಲಾನಯನ ಯೋಜನೆ-ನಿಜಗುಣರಾಜು
22. ಮದ್ಯಪಾನ ಸಂಯಮ ಮಂಡಳಿ-ಮಲ್ಲಿಕಾರ್ಜುನ ತುಬಾಕಿ
22 board and corporation presidents list announced by Karnataka state government.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm