ಬ್ರೇಕಿಂಗ್ ನ್ಯೂಸ್
27-07-22 08:47 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 27: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಗೆ ಕರಾವಳಿ ಕಾದ ಕೆಂಡದಂತಾಗಿದೆ. ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸದ್ಯ ನೆಟ್ಟಾರು ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಅಂತ್ಯಸಂಸ್ಕಾರ ನೆರವೇರಿದೆ. ಮತ್ತೊಂದು ಕಡೆ ಘಟನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಿ.ಟಿ ರವಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ನಡೆಸಿದ್ದಾರೆ.
ಪ್ರವೀಣ್ ಹತ್ಯೆ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ. ಪ್ರವೀಣ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಏನೆಲ್ಲ ಬೆಳವಣಿಗೆಯಾಗಿದೆ ಅದನ್ನ ಪ್ರವೀಣ್ ಸೂದ್ ವಿವರಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ. ಸದ್ಯ 10 ಜನರನ್ನ ವಶಕ್ಕೆ ಪಡೆದಿದ್ದಾರೆ. ಕೇರಳಕ್ಕೆ ತೆರಳಿ ಸಹ ಸರ್ಚ್ ಮಾಡುತ್ತಿದ್ದಾರೆ. ಇವು ಸಡನ್ನಾಗಿ ನಡೆಯುವಂತಹ ಕೃತ್ಯಗಳು. ಈ ತರಹದ ಘಟನೆ ನಡೆದಾಗ ಯಾವ ಕೇಸ್ ಸಹ ಬಿಟ್ಟಿಲ್ಲ. ಹಿಂದಿನ ಸರ್ಕಾರದಲ್ಲಿ ಕೆಲವು ಕೇಸ್ ತನಿಖೆ ಆಯ್ತು, ಕೆಲವು ತನಿಖೆ ಮಾಡಲಿಲ್ಲ. ನಮ್ಮ ಸರ್ಕಾರದಲ್ಲಿ ನಡೆದ ಎಲ್ಲವೂ ತನಿಖೆ ನಡೆಸುತ್ತಿದ್ದೇವೆ. ಕರಾವಳಿಯಲ್ಲಿ ಕೇರಳದಿಂದ ಬರುವವರು ಹೆಚ್ಚಾಗುತ್ತಿದ್ದಾರೆ. ಕೇರಳ ಸರ್ಕಾರದ ಜೊತೆ ನಮ್ಮ ಡಿಜಿ ಮಾತನಾಡಿದ್ದಾರೆ. ಜಂಟಿಯಾಗಿ ಕಾರ್ಯಚರಣೆ ಮಾಡುತ್ತೇವೆ. ಅಪಾರಧಿಗಳನ್ನ ಹಿಡಿದು ತರುವಲ್ಲಿ ನಮ್ಮ ಫೊಲೀಸರು ಸಫಲರಾಗ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಸಹಜ. ಅಮಾಯಕರ ಮೇಲೆ ಹತ್ಯೆಯಾದಾಗ ನೋವಾಗುತ್ತೆ. ಮನಸ್ಸು ಕಲಕುತ್ತೆ. ಸಿಟ್ಟು ಬರುತ್ತೆ. ಭಾವನೆಗಳು ಕೆದುಕುತ್ತವೆ. ಆರೋಪಿಗಳನ್ನ ಬಂಧಿಸಿದ ಮೇಲೆ ಆಕ್ರೋಶ ಕಡಿಮೆಯಾಗುತ್ತೆ ಎಂದರು.
ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗ್ತಿದೆ ;
ಸಿಎಂ ಜೊತೆ ಚರ್ಚೆ ಬಳಿಕ ಸಿ.ಟಿ. ರವಿ ಮಾತನಾಡಿದ್ದು, ನಿನ್ನೆ ನಡೆದ ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಆಗಿದೆ. ಜೊತೆಗೆ ಈಗಾಗಲೇ ಶಂಕಿತರ ಬೆನ್ನು ಹತ್ತಿದ್ದಾರೆ. ಕೇರಳಕ್ಕೆ ಒಂದು ತಂಡ ಕಳಿಸಲಾಗಿದೆ. ಇಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗ್ತಿದೆ. ಕೆಲವು ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ, ವಿಚಾರಣೆ ನಡೆಯುತ್ತಿದೆ. ಸ್ವತಃ ಸಿಎಂ, ಗೃಹ ಸಚಿವರೇ ಪ್ರವೀಣ್ ಹತ್ಯೆ ಪ್ರಕರಣವನ್ನ ನಿರ್ವಹಣೆ ಮಾಡ್ತಾ ಇದ್ದಾರೆ.
ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುವ ಭರವಸೆ ;
ಸಂಘ ಪರಿವಾರ ಸಂಘಟನೆಗಳಿಂದ ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸಂಘದ ಪ್ರಾಂತ ಉಸ್ತುವಾರಿ ನಾ.ಸೀತಾರಾಂ ಘೋಷಣೆ ಮಾಡಿದ್ದಾರೆ.
Karnataka home minister Araga Jnanendra on Wednesday hinted that the assailants who murdered Bharatiya Janata Party (BJP) Yuva Morcha worker Praveen Nettaru could have come from Kerala. Nettaru was allegedly hacked to death by a group of unidentified persons Bellere in Dakshina Kannada district late on Tuesday night.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am