ಹೈಕಮಾಂಡ್ ಚಾಟಿ ಬೆನ್ನಲ್ಲೇ ಜನೋತ್ಸವ ಕಾರ್ಯಕ್ರಮ ರದ್ದು ; ಮಧ್ಯರಾತ್ರಿ ಸುದ್ದಿಗೋಷ್ಟಿ ಕರೆದು ಹೇಳಿದ ಮುಖ್ಯಮಂತ್ರಿ ! 

28-07-22 11:04 am       Bangalore Correspondent   ಕರ್ನಾಟಕ

ಬಿಜೆಪಿ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಒಳಗಡೆಯೇ ಆಕ್ರೋಶದ ಕಿಡಿ ಎದ್ದಿದ್ದು ರಾಜ್ಯ ಸರಕಾರದ ಮೇಲೆ ತೀವ್ರ ಒತ್ತಡ ಬಿದ್ದಿದೆ.‌

ಬೆಂಗಳೂರು, ಜುಲೈ 28 : ಬಿಜೆಪಿ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಒಳಗಡೆಯೇ ಆಕ್ರೋಶದ ಕಿಡಿ ಎದ್ದಿದ್ದು ರಾಜ್ಯ ಸರಕಾರದ ಮೇಲೆ ತೀವ್ರ ಒತ್ತಡ ಬಿದ್ದಿದೆ.‌ ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಖ್ಯಮಂತ್ರಿ ಬೊಮ್ಮಾಯಿಗೆ ಫೋನ್ ಮಾಡಿ ತೀವ್ರ ಚಾಟಿ ಬೀಸಿದ್ದಾರೆ. ಹೈಕಮಾಂಡ್ ಚಾಟಿಯಿಂದ ಎಚ್ಚೆತ್ತ ಸಿಎಂ ಬೊಮ್ಮಾಯಿ ತನ್ನ ಸರಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಏರ್ಪಡಿಸಿದ ಜನೋತ್ಸವ ಸಮಾರಂಭವನ್ನು ರಾತ್ರೋರಾತ್ರಿ ಬಂದ್ ಮಾಡಿದ್ದಾರೆ.‌

ನನ್ನ ಸರ್ಕಾರಕ್ಕೆ ಒಂದು ವರ್ಷ, ಯಡಿಯೂರಪ್ಪ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಜನಪರವಾಗಿ ಮಾಡಿರುವ ಕೆಲಸಕ್ಕೆ ಜನೋತ್ಸವ ಮಾಡಲು ನಿಶ್ಚಯಿಸಿದ್ದೆವು. ಆದರೆ ಕಾರ್ಯಕರ್ತರ ನೋವಿನ ಮಧ್ಯೆ ಜನೋತ್ಸವ ಮಾಡುವುದು ಬೇಡವೆಂದು ಕಾರ್ಯಕ್ರಮ ರದ್ದು ಮಾಡುತ್ತಿದ್ದೇನೆ ಎಂದು ಹೇಳಿದರು.

CBI won't appeal against BSY's acquittal in Rs 40-cr bribery case | Deccan  Herald

ಹತ್ಯೆ ಘಟನೆ ಮತ್ತು ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾಹಿತಿ ಪಡೆದಿರುವ ಹೈಕಮಾಂಡ್, ಇಂಥ ಸಂದರ್ಭದಲ್ಲಿ ಜನೋತ್ಸವ ಮಾಡಿ ಏನು ಸಂದೇಶ ಕೊಡುತ್ತಿದ್ದೀರಿ ಎಂದು ತರಾಟೆಗೆತ್ತಿಕೊಂಡಿತ್ತು. ಸ್ವತಃ ರಾಷ್ಟ್ರೀಯ ಅಧ್ಯಕ್ಷರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೆಂದು ಹೇಳಲಾಗಿತ್ತು. ಆದರೆ ನಡ್ಡಾ ಫೋನ್ ಮಾಡಿ, ತನಗೆ ರಕ್ತದೋಕುಳಿಯ ಸ್ವಾಗತ ಬೇಡ ಎಂದು ಹೇಳಿದ್ದು ರಾಜ್ಯ ಬಿಜೆಪಿಗೆ ಶಾಕ್ ಆಗಿದೆ. 

BJP president JP Nadda tests positive for Covid-19 - India News

Karnataka BJP Yuva Morcha worker Praveen Nettaru hacked to death |  Bengaluru - Hindustan Times

Nalin Kumar Kateel alleges 'foreign hand' in Udaipur tailor's murder |  Deccan Herald

ಪ್ರವೀಣ್ ಹತ್ಯೆಯನ್ನು ಖಂಡಿಸಿ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಲವು ಜಿಲ್ಲಾ ಘಟಕದಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗೆ ರಾಜಿನಾಮೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಾಂತ್ವನ ಹೇಳಲು ಹೋಗಿದ್ದ ವೇಳೆ ಅವರ ಕಾರನ್ನೇ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಹಲ್ಲೆಗೂ ಯತ್ನಿಸಲಾಗಿತ್ತು. ಇಂಥ ಬೆಳವಣಿಗೆ ಆಗಿದ್ದರೂ, ಕಾರ್ಯಕ್ರಮ ರದ್ದು ಪಡಿಸುವ ಇರಾದೆ ರಾಜ್ಯ ಬಿಜೆಪಿಗೆ ಇರಲಿಲ್ಲ.‌ ಸಚಿವ ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಾಡು ಆಗಿತ್ತು.‌ ಆದರೆ ಹೈಕಮಾಂಡ್ ಚಾಟಿ ಬೀಸುತ್ತಲೇ ರಾತ್ರೋರಾತ್ರಿ ಸುದ್ದಿಗೋಷ್ಟಿ ಕರೆದು ಮುಖ್ಯಮಂತ್ರಿಯೇ ಕಾರ್ಯಕ್ರಮ ರದ್ದುಪಡಿಸಿದ್ದಾರೆ.

Chief Minister Basavaraj Bommai, in the early hours of Thursday, 28 July 2022, called an emergency press meeting and announced that he would be cancelling all events celebrating his one-year anniversary as chief minister and three years of the BJP's rule in Karnataka.