ಪ್ರವೀಣ್ ಹತ್ಯೆ ನೆನೆದು ಗದ್ಗದಿತರಾದ ಆರಗ ; ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ ! 

28-07-22 12:01 pm       Bangalore Correspondent   ಕರ್ನಾಟಕ

ಬಿಜೆಪಿ ಯುವನಾಯಕ ಪ್ರವೀಣ್ ಕುಮಾರ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮನೆಯ ಸದಸ್ಯನನ್ನು ಕಳೆದುಕೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗದ್ಗದಿತರಾದರು.

ಬೆಂಗಳೂರು, ಜುಲೈ 28 : ಬಿಜೆಪಿ ಯುವನಾಯಕ ಪ್ರವೀಣ್ ಕುಮಾರ್ ನೆಟ್ಟಾರ್ ಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮನೆಯ ಸದಸ್ಯನನ್ನು ಕಳೆದುಕೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗದ್ಗದಿತರಾದರು.

ಪ್ರಕರಣ ಸಂಬಂಧ ಈಗಾಗಲೇ 15 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ. ಅದು ಬಾರ್ಡರ್ ಜಿಲ್ಲೆ. ಹೀಗಾಗಿ ಕೇರಳಕ್ಕೆ ತಂಡ ಹೋಗಿದೆ. ಕೇರಳ ಪೊಲೀಸ್ ನಮ್ಮ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ಆಗಬೇಕು. ಕರ್ನಾಟಕ ಪೊಲೀಸರು ಕೇರಳದ ಪೊಲೀಸರ ಜೊತೆ ಮಾತಾಡ್ತಿದ್ದಾರೆ. ಸೂತಕದ ಮನೆಯಲ್ಲಿ ಏನು ಮಾಡಬಾರದಿತ್ತು ಎಂದರು.

Karnataka CM Bommai leaves for Davos to participate in World Economic Forum  | Cities News,The Indian Express

ಸಿಎಂ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳೂರು ವಾತಾವರಣ ಶಾಂತವಾಗಿದೆ. ಅಲ್ಲಿನ ಜನ ಬುದ್ಧಿವಂತರು. ಆಕ್ರೋಶನೂ ಹೊರ ಹಾಕಿದ್ದಾರೆ. ಜೊತೆಗೆ ಶಾಂತಿಯೂ ಕಾಪಾಡಿದ್ದಾರೆ. ಪೊಲೀಸರ ಭದ್ರತೆ ಮುಂದುವರಿಯಲಿದೆ. ನಾನು ಮಂಗಳೂರಿಗೆ ಹೋಗ್ತೀನಿ. ಶೀಘ್ರವೇ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಜನರ ಆಕ್ರೋಶ ಇರೋದು ನಿಜ. ಜನರ ಆಕ್ರೋಶ ಅರ್ಥ ಆಗುತ್ತೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತಗೋತೀವಿ. ಮತಾಂಧ ಶಕ್ತಿಗಳ ಮೇಲೆ ಅನುಮಾನ ಇದೆ. ಅಂತಹ ಶಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Karnataka BJP Yuva Morcha worker Praveen Nettaru hacked to death |  Bengaluru - Hindustan Times

ಕಾರ್ಯಕರ್ತರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಕ್ರೋಶ ಇದೆ. ಪ್ರವೀಣ ಅಮೂಲ್ಯವಾದ ಆಸ್ತಿ. ಆಕ್ರೋಶನೂ ಹೊರ ಹಾಕಿದ್ದಾರೆ. ಜೊತೆಗೆ ಶಾಂತಿಯೂ ಕಾಪಾಡಿದ್ದಾರೆ. ಪೊಲೀಸರ ಭದ್ರತೆ ಮುಂದುವರಿಯಲಿದೆ. ನಾನು ಮಂಗಳೂರಿಗೆ ಹೋಗ್ತೀನಿ. ಶೀಘ್ರವೇ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಜನರ ಆಕ್ರೋಶ ಇರೋದು ನಿಜ. ಜನರ ಆಕ್ರೋಶ ಅರ್ಥ ಆಗುತ್ತೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತಗೋತೀವಿ ಎಂದು ತಿಳಿಸಿದರು.

Nalin Kumar Kateel Archives - World11 News

ಮತಾಂಧ ಶಕ್ತಿಗಳ ಮೇಲೆ ಅನುಮಾನ ಇದೆ. ಅಂತಹ ಶಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬಡತನ ಇದ್ದರೂ ದೇಶ ಮತ್ತು ಧರ್ಮಕ್ಕಾಗಿ ಕೆಲಸ ಮಾಡ್ತಿದ್ದ. ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಪೇಡ್ ಕಾರ್ಯಕರ್ತರು ಅಲ್ಲ. ಸಹಜವಾಗಿ ಆಕ್ರೋಶ ಭುಗಿಲೆದ್ದಿದೆ. ಹಾಗಂತ ಸಿದ್ದಾಂತದಿಂದ ಅವರು ಹೊರಗೆ ಹೋಗಿಲ್ಲ. ಗೃಹ ಇಲಾಖೆ ಇದನ್ನ ಅರ್ಥ ಮಾಡಿಕೊಂಡಿದೆ. ನಾವು ಅಸಹಾಯಕಲ್ಲ. ಸರ್ಕಾರ ಅಸಹಾಯಕವಾಗಿ ಕೆಲಸ ಮಾಡಿಲ್ಲ ಎಂದರು.

Home minister Araga Jnanendra becomes emotional remembering Praveen Kumar Murder in Bellare.