ಬ್ರೇಕಿಂಗ್ ನ್ಯೂಸ್
28-07-22 03:16 pm HK News Desk ಕರ್ನಾಟಕ
ಚಿಕ್ಕಮಗಳೂರು, ಜುಲೈ 28 : ನಮ್ಮದೇ ಸರ್ಕಾರವಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ರೆ ಕಲ್ಲು ಹೊಡೆಯಬಹುದಿತ್ತು.. ಹೀಗಂತ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಾರ್ಯಕರ್ತನಿಗೆ ಹೇಳುತ್ತಿರುವ ಆಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಯುವಮೋರ್ಚಾ ಪದಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾರ್ಯಕರ್ತನಿಗೆ ತೇಜಸ್ವಿ ಸೂರ್ಯ ಫೋನ್ ಮಾಡಿದ್ದು ರಾಜಿನಾಮೆ ಹಿಂಪಡೆಯುವಂತೆ ಸಮಾಧಾನ ಹೇಳಿದ್ದಾರೆ. ಸಂಜೆ ಮೀಟಿಂಗ್ ಕರೆದಿದ್ದೇನೆ, ಗೊತ್ತಿದ್ಯಲ್ಲ ಎಂದು ತೇಜಸ್ವಿ ಕೇಳುತ್ತಾರೆ. ಇಲ್ಲ, ನೋಡಿಲ್ಲ. ನಾವು ಸಾಮೂಹಿಕವಾಗಿ ನಿರ್ಧರಿಸಿ ರಾಜಿನಾಮೆ ನೀಡಿದ್ದೇವೆ. ಏನ್ ಮಾಡೋದು, ಕಾರ್ಯಕರ್ತರ ಸಾವು ಜಾಸ್ತಿ ಆಗ್ತಿವೆ. ನಮ್ದೇ ಸರಕಾರ ಇದ್ದರೂ ಮತ್ತೆ ಮತ್ತೆ ನಮ್ಮವರನ್ನು ಕಳಕೊಳ್ಳುತ್ತಿದ್ದೇವೆ ಎಂದು ನೋವು ಹೇಳಿಕೊಂಡಿದ್ದಾರೆ.
ಹೌದು, ನಿಮ್ಗೆ ಎಷ್ಟು ಆಕ್ರೋಶ ಇದ್ದೀಯೋ ನಮ್ಗೂ ಅಷ್ಟೇ ಆಕ್ರೋಶ ಇದೆ. ನಿಮ್ಮ ನೋವನ್ನು ಮುಖ್ಯಮಂತ್ರಿ ಬಳಿ ಒಯ್ಯುತ್ತೇವೆ ಎಂದು ತೇಜಸ್ವಿ ಹೇಳಿದ್ದಾರೆ. ಬಟ್ ಕಾರ್ಯಕರ್ತರ ಬಗ್ಗೆ ನಾಯಕರು ಗಮನ ಹರಿಸುತ್ತಿಲ್ಲ, ನಾವು ಯಾಕೆ ಪಕ್ಷಕ್ಕಾಗಿ ದುಡಿಯಬೇಕು ಎಂದು ಕಾರ್ಯಕರ್ತ ಪ್ರಶ್ನೆ ಮಾಡಿದ್ದಾನೆ.
ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರ್ಕಾರ ಇರೋದಲ್ವಾ, ಏನು ಮಾಡೋದು. ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸೇರಿ ನಾವು ಸಿಎಂ ಭೇಟಿ ಮಾಡೋಣ. ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಿ, ನಾನು ನಾಲ್ಕು ಲೈನ್ ಟೈಪ್ ಮಾಡಿ ಕಳುಹಿಸುತ್ತೇನೆ, ಅದನ್ನ ಗ್ರೂಪ್ ಗೆ ಹಾಕಿ ಎಂದು ತೇಜಸ್ವಿ ಸೂರ್ಯ, ಕಾರ್ಯಕರ್ತನಿಗೆ ಹೇಳುತ್ತಾರೆ. ಆದರೆ ಕಾರ್ಯಕರ್ತ ಸಂದೀಪ್, ಇಲ್ಲ ಜೀ, ನಾವು ಸಾಮೂಹಿಕವಾಗಿ ತೀರ್ಮಾನ ಕೈಗೊಂಡಿರೋದು. ಹಾಗೇ ರಾಜಿನಾಮೆ ಹಿಂಪಡೆಯೋದು ಸರಿ ಆಗೋಲ್ಲ ಎಂದಿದ್ದಾನೆ.
ನಿಮ್ಮ ನೋವು ಏನೇ ಇರಲಿ. ಸಿಎಂ ಬಳಿ ಹೋಗೋಣ, ಓಕೆ ನಾ.. ನಾನು ಎಲ್ಲ ಜವಾಬ್ದಾರಿ ತಗೋತೇನೆ. ನಮ್ಮದೇ ಸರ್ಕಾರವಿದೆ, ಮಾತಾಡೋಣ. ನಾನು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷನಿದ್ದೇನೆ. ನಿಮ್ಮ ಹಿಂದಿರುತ್ತೇನೆ ಎಂದಿದ್ದಾರೆ. ಅದಕ್ಕೆ ಕೌಂಟರ್ ಪ್ರತಿಕ್ರಿಯೆ ನೀಡಿದ ಕಾರ್ಯಕರ್ತ, ನಮ್ದೇ ಸರಕಾರ ಇದೆ, ಆದರೆ ಸಾಯೋದು ನಿಂತಿಲ್ಲ ಅಲ್ಲವೇ.. ಇಂಟೆಲಿಜೆನ್ಸ್ ಇಲ್ವಾ.. ಅಟ್ಯಾಕ್ ಆಗುತ್ತೆ ಅಂತ ಗೊತ್ತಿರಲಿಲ್ಲವೇ.. ನಾವು ಸಾಯಬೇಕಾ.. ಎಲ್ಲ ಜಿಲ್ಲೆಗಳಲ್ಲಿ ಕೆಲವರನ್ನು ಹಿಟ್ ಲಿಸ್ಟ್ ಮಾಡಿದ್ದಾರೆ. ತೆಗೆಯಲು ರೆಡಿ ಮಾಡ್ಕೊಂಡಿದ್ದಾರೆ. ನಾವು ಸಾವಿನ ಭಯದಲ್ಲಿ ಕೆಲಸ ಮಾಡಬೇಕೇ ಎಂದು ಕಾರ್ಯಕರ್ತ ಪ್ರಶ್ನೆ ಮಾಡಿದ್ದಾರೆ.
Tejasvi Surya audio goes viral on Praveen Kumar Murder at Bellare. BJP Yuva Morcha State President from Chikmagaluru slams Surya for his statement.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm