ಭಟ್ಕಳ, ತುಮಕೂರಿಗೆ ಎನ್ಐಎ ದಾಳಿ ; ಇಬ್ಬರು ಐಸಿಸ್ ನೆಂಟರು ಅಧಿಕಾರಿಗಳ ವಶಕ್ಕೆ 

31-07-22 10:08 pm       Bangalore Correspondent   ಕರ್ನಾಟಕ

ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕದ ಆರೋಪದಲ್ಲಿ ಭಟ್ಕಳ ಮತ್ತು ತುಮಕೂರಿನಲ್ಲಿ ಇಬ್ಬರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು, ಜುಲೈ 31 : ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕದ ಆರೋಪದಲ್ಲಿ ಭಟ್ಕಳ ಮತ್ತು ತುಮಕೂರಿನಲ್ಲಿ ಇಬ್ಬರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಭಟ್ಕಳದಲ್ಲಿ ಅಬ್ದುಲ್ ಮುಕದರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಭಟ್ಕಳದಲ್ಲಿದ್ದುಕೊಂಡೇ ಐಸಿಸ್ ಪರವಾಗಿರುವ ಬರಹ, ಲೇಖನಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡಿ ಕೊಡುತ್ತಿದ್ದ. ಆತನ ವಿರುದ್ಧ ಸೆಕ್ಷನ್ 153 A, 153 B, IPC ಸೆಕ್ಷನ್ 18, 18B, 38, 39 ಮತ್ತು 40 UA(P) act ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಇಂದು ಬೆಳಗ್ಗೆ ಖಚಿತ ಮಾಹಿತಿಯೊಂದಿಗೆ ಭಟ್ಕಳದ ಚಿನ್ನದಪಳ್ಳಿ ಎಂಬಲ್ಲಿಗೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ‌

ತುಮಕೂರಿನಲ್ಲೂ ಐಸಿಸ್ ನಂಟು ಆರೋಪದಲ್ಲಿ ಎನ್.ಐ.ಎ ದಾಳಿ ನಡೆದಿದೆ. ತುಮಕೂರಿನ‌ ಮರಳೂರು ದಿಣ್ಣೆ ಮೂಲದ ನಿವಾಸಿ, ವಿದ್ಯಾರ್ಥಿಯಾಗಿರುವ ಯುವಕನನ್ನು ವಶಕ್ಕೆ ಪಡೆದಿದ್ದಾರೆ.‌ ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.‌ ದೆಹಲಿ ಮತ್ತು ಬೆಂಗಳೂರು ಘಟಕದ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.‌

National Investigation Agency (NIA) on Sunday conducted searches at 13 premises of suspects in six States in connection with activities pertaining to ISIS.The raids are underway in six states including Madhya Pradesh, Gujarat, Bihar, Karnataka, Maharashtra and Uttar Pradesh.The agency conducted searches at Bhopal and Raisen districts in Madhya Pradesh; Bharuch, Surat, Navsari and Ahmedabad districts in Gujarat, Arariya district in Bihar, Bhatkal and Tumkur City districts in Karnataka, Kolhapur and Nanded districts in Maharashtra and Deoband districts in Uttar Pradesh.