ಬ್ರೇಕಿಂಗ್ ನ್ಯೂಸ್
03-08-22 06:07 pm HK News Desk ಕರ್ನಾಟಕ
ಮಡಿಕೇರಿ, ಆಗಸ್ಟ್ 3 : ಒಂದೆಡೆ ಕೊಡಗಿನಲ್ಲಿ ವಿಪರೀತ ಮಳೆಯಾಗುತ್ತಿದ್ದರೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ.
ಚೆಂಬು ಗ್ರಾಮದ ಸುತ್ತಮುತ್ತಲಿನ ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ. ಕೊಪ್ಪ ಗ್ರಾಮದ ಬಾಲಕೃಷ್ಣ ಎಂಬವರ ಮನೆಯ ಬಳಿ ಗುಡ್ಡ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಬಾಲಕೃಷ್ಣ ಕುಟುಂಬ ಪಾರಾಗಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಆಗಸ್ಟ್ 2 ರಂದು ಮೇಘಸ್ಫೋಟದ ರೀತಿ ಭಾರೀ ಮಳೆಯಾಗಿದ್ದು, ಇದರ ಬೆನ್ನಲ್ಲೇ ಸಣ್ಣಪುಟ್ಟ ತೊರೆಗಳಲ್ಲಿ ಏಕಾಏಕಿ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದಾಗಿ ಸಂಪಾಜೆ ಗ್ರಾಮದಲ್ಲಿ ಹಲವು ಮನೆಗಳು ಮುಳುಗಡೆಯಾಗಿದ್ದು, ದಿಢೀರ್ ಪ್ರವಾಹದಿಂದ ಜನರು ಕಂಗಾಲಾಗಿ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಸಂಪಾಜೆ ಗ್ರಾಮದ ಗಣೇಶ್, ಶ್ರೀಧರ್, ಪುರುಷೋತ್ತಮ್, ಜಯರಾಮ್ ಎಂಬವರ ನಿವಾಸಗಳು ಸಂಪೂರ್ಣ ಮುಳುಗಡೆಯಾಗಿದ್ದು, ದಿಢೀರ್ ಪ್ರವಾಹಕ್ಕೆ ತುತ್ತಾಗಿ ಜನರು ಕಣ್ಣೀರು ಹಾಕುತ್ತಿದ್ದಾರೆ.
ಸಂಪಾಜೆ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಆಸುಪಾಸಿನ ಸಣ್ಣಪುಟ್ಟ ತೊರೆಗಳು ಉಕ್ಕಿ ಹರಿಯುತ್ತಿದೆ. ಇದರಿಂದ ತೀರದಲ್ಲಿರುವ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಇದ್ದ ಹಲವು ಮನೆಗಳು ಮುಳುಗಡೆಯಾಗಿದೆ. ಪ್ರವಾಹದಿಂದ ಕಂಗೆಟ್ಟ ಗ್ರಾಮದ ಜನರು, ತಮ್ಮ ಜೀವ ಉಳಿಸಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಯಾವುದೇ ಪ್ರವಾಹದ ಮುನ್ಸೂಚನೆಯೂ ಇಲ್ಲದೆ, ದಿಢೀರ್ ಪ್ರವಾಹ ಕಾಣಿಸಿಕೊಂಡಿದ್ದು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.
ಪುಷ್ಪಗಿರಿ ಬೆಟ್ಟಗಳ ಸಾಲಿನಲ್ಲಿ ಬಿರುಕು
ಸುಬ್ರಹ್ಮಣ್ಯ ಬಳಿಯ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು ಭಾಗದಲ್ಲಿ ಬೆಟ್ಟಗಳ ಮಧ್ಯೆ ಭಾರೀ ಜಲಸ್ಫೋಟಗಳಾಗಿದ್ದು ಅಲ್ಲಿಂದ ಪ್ರವಾಹದ ರೀತಿ ಕಲ್ಲು ಮಣ್ಣು ಮರಗಳು ಎದ್ದು ಹೋಗಿವೆ. ಇದೇ ರೀತಿಯ ಸ್ಥಿತಿ ಸಂಪಾಜೆ ಭಾಗದ ಕಲ್ಲುಗುಂಡಿ, ಕೊಯನಾಡು ಪ್ರದೇಶದಲ್ಲೂ ಉಂಟಾಗಿದೆ. ಮೇಲ್ಭಾಗದ ಬೆಟ್ಟಗಳಲ್ಲಿ ಜಲಸ್ಫೋಟ ಸಂಭವಿಸಿದ್ದು ತಪ್ಪಲು ಪ್ರದೇಶದ ಮನೆಗಳು ಹೊಳೆಯಲ್ಲಿ ಮುಳುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪುಷ್ಪಗಿರಿ ಬೆಟ್ಟಗಳ ಸಾಲು ಇದಾಗಿದ್ದು ತೀವ್ರ ಒತ್ತಡದಿಂದ ನೀರಿನೊಂದಿಗೆ ಸ್ಫೋಟಗೊಂಡು ಕೆಸರು, ಮಣ್ಣಿನ ಜೊತೆಗೆ ಪ್ರವಾಹ ಉಂಟಾಗಿದೆ. ಅಲ್ಲಿನ ಚಿತ್ರಣಗಳು ಇಲ್ಲಿ ಕೊಟ್ಟಿರುವ ಚಿತ್ರಗಳಲ್ಲಿ ಕಾಣಬಹುದು.
Earthquake felt at Chembu in Madikeri, houses submerged due to heavy rains.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm