ಬ್ರೇಕಿಂಗ್ ನ್ಯೂಸ್
05-08-22 07:47 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 5: ಕೇಂದ್ರ ಸರಕಾರ ಕಳೆದ ಎಪ್ರಿಲ್ ತಿಂಗಳಲ್ಲಿ ಜಾರಿಗೊಳಿಸಿದ್ದ ಹಳೆ ವಾಹನಗಳ ಗುಜರಿಗೆ ಹಾಕುವ ಸ್ಕ್ರಾಪಿಂಗ್ ನಿಯಮವನ್ನು ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು ತಕ್ಷಣದಿಂದಲೇ ಜಾರಿಗೆ ತರುವಂತೆ ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆ - 2021 (ರಿಜಿಸ್ಟ್ರೇಷನ್ ಮತ್ತು ವಾಹನ ಚಾಲನಾ ಪರವಾನಗಿ ಸ್ಕ್ರಾಫ್ ಫೆಸಿಲಿಟಿ) ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಕಳೆದ ಎಪ್ರಿಲ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನಿಯಮವನ್ನು ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಾಲಿನ್ಯ ಮತ್ತು ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಹಳೆಯ ವಾಹನಗಳನ್ನು ತೆರವುಗೊಳಿಸಲು ಹಳೆ ವಾಹನಗಳ ಗುಜರಿಗೆ ಹಾಕುವ ನೀತಿಯನ್ನು ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈ ನಿಯಮದಡಿ ವಾಹನ ಮಾಲೀಕರು 15 ವರ್ಷಗಳ ನಂತರ ನೋಂದಣಿ ಮುಗಿದ ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸಾಧ್ಯವಾಗುತ್ತದೆ. ದೆಹಲಿಯಲ್ಲಿ ಡೀಸೆಲ್ ವಾಹನಗಳಿಗೆ 10 ವರ್ಷಗಳ ನಂತರ ಮತ್ತು ಪೆಟ್ರೋಲ್ ವಾಹನಗಳಿಗೆ 15 ವರ್ಷಗಳಿಗೆ ನೋಂದಣಿ ಕೊನೆಗೊಳ್ಳುವಂತೆ ನೀತಿ ಮಾಡಲಾಗಿದೆ. ಆಬಳಿಕ ವಾಹನ ಸಾಮರ್ಥ್ಯ ಅನುಸರಿಸಿ ಪರವಾನಗಿ ನವೀಕರಿಸುವುದಿದ್ದರೆ ಹಲವು ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ.
ಇದೇ ವೇಳೆ, ಸ್ಕ್ರ್ಯಾಪೇಜ್ ನೀತಿಯು ಹಳೆಯ ವಾಹನಗಳನ್ನು ತೆಗೆದುಹಾಕುವುದರ ಜೊತೆಗೆ ಹೊಸ ಆಟೋಮೊಬೈಲ್ ಉದ್ಯಮಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. 2023ರ ಬಳಿಕ ಎಲ್ಲ ರೀತಿಯ ಭಾರೀ ವಾಣಿಜ್ಯ ವಾಹನಗಳು ಕಡ್ಡಾಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದೇ ನೀತಿಯು ಜೂನ್ 2024 ರಿಂದ ಖಾಸಗಿ ಮತ್ತು ಇತರ ವಾಹನಗಳಿಗೂ ಅನ್ವಯಿಸಲಿದೆ. ಆದರೆ ರಾಜ್ಯದಲ್ಲಿ ದೆಹಲಿಯ ನೀತಿಗಳೇ ಇರಲಿವೆಯಾ, ವಾಹನಗಳ ಪರವಾನಗಿ ಅವಧಿಯನ್ನು ಹೆಚ್ಚಿಸುತ್ತಾರಾ ಅನ್ನುವ ಬಗ್ಗೆ ರಾಜ್ಯ ಸರಕಾರ ಸ್ಪಷ್ಟ ಪಡಿಸಿಲ್ಲ.
Govt vehicle scrappage policy implements in Karnataka state
18-08-22 01:02 pm
HK News Desk
'ಸಿದ್ದರಾಮಯ್ಯ ಸಿಎಂ' ಹೇಳಿಕೆಯಿಂದ ಬಿಜೆಪಿಗೆ ಮುಜುಗರ...
18-08-22 12:40 pm
ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ...
17-08-22 10:58 pm
ಮಠ, ದೇಗುಲಗಳಿಗೆ ಕೋಟ್ಯಂತರ ಅನುದಾನ ಬಿಡುಗಡೆ ; ಚುನಾ...
17-08-22 10:31 pm
ಆಂಧ್ರ - ಬೆಂಗಳೂರು ಖಾಸಗಿ ಬಸ್ ಪಲ್ಟಿ ; ಸ್ಥಳದಲ್ಲೇ...
17-08-22 11:41 am
18-08-22 11:01 am
HK News Desk
ಚುನಾವಣೆ ವೇಳೆ ಉಚಿತ ಯೋಜನೆ ಯಾವುದಿರಬೇಕು ; ರಾಜಕೀಯ...
17-08-22 10:43 pm
ಸುಕೇಶ್ ಚಂದ್ರಶೇಖರ್ ಬಹುಕೋಟಿ ಹಗರಣ ; ಪ್ರಕರಣದಲ್ಲಿ...
17-08-22 05:59 pm
ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್ ಯಡಿಯೂರಪ್ಪ ; ನಿತಿ...
17-08-22 05:30 pm
ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯ ವಿರುದ್ಧವೇ...
17-08-22 02:21 pm
17-08-22 03:44 pm
Mangalore Correspondent
ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ; ಫಾಜಿಲ್ ಕೊಲೆ...
17-08-22 01:00 pm
ಹಟ್ಟಿಯಿಂದ ದನ ಕಳವು ; ಐವರನ್ನು ಬಂಧಿಸಿದ ಕಂಕನಾಡಿ ಪ...
16-08-22 11:01 pm
ದಕ್ಷ ಅಧಿಕಾರಿ ಉಡುಪಿ ಎಸ್ಪಿ ವಿಷ್ಣುವರ್ಧನ್ ವರ್ಗ ;...
16-08-22 10:29 pm
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ದೆಹಲಿಯಲ್ಲಿ ಎನ...
16-08-22 09:20 pm
18-08-22 12:54 pm
HK News Desk
ದುಬೈನಿಂದ ಅಕ್ರಮ ಚಿನ್ನ ತರುತ್ತಿದ್ದ ಭಟ್ಕಳದ ವ್ಯಕ್ತ...
17-08-22 10:52 pm
ಫಾಜಿಲ್ ಕೊಲೆ ಪ್ರಕರಣ ; ಆರೋಪಿಗಳಿಗೆ ಪರಾರಿಯಾಗಲು ಸ...
17-08-22 10:25 pm
ಬಾನಲ್ಲಿ ಮಧುಚಂದ್ರಕೆ ಸಿನಿಮಾ ಸ್ಟೋರಿ ; ಹೆಂಡ್ತಿ ಗಯ...
17-08-22 12:04 pm
ಶಿವಮೊಗ್ಗದಲ್ಲಿ ಚಾಕು ತೋರಿಸಿ ಪೊಲೀಸರಿಗೆ ಹಲ್ಲೆ ಯತ್...
16-08-22 12:10 pm