ಆಡಳಿತ ಯಂತ್ರಕ್ಕೆ ಸರ್ಜರಿ ಫಿಕ್ಸ್ ; ಸಿಎಂ ಸೇರಿದಂತೆ ಪ್ರಮುಖರದ್ದೇ ತಲೆದಂಡ, ಯಾರಾಗ್ತಾರೆ ಮುಖ್ಯಮಂತ್ರಿ ?  

07-08-22 10:21 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಅನಪೇಕ್ಷಿತ ಬೆಳವಣಿಗೆ ಆಗಿರುವ ಸಂದರ್ಭದಲ್ಲೇ ಗೃಹ ಸಚಿವ ಅಮಿತ್ ಷಾ ದಿಢೀರ್ ಆಗಿ ರಾಜ್ಯಕ್ಕೆ ಆಗಮಿಸಿದ್ದಾಗಲೇ ಏನೋ ಸರ್ಜರಿ ಪ್ಲಾನ್ ಇಟ್ಟುಕೊಂಡೇ ಬಂದಿದ್ದಾರೆಂದೇ ಹೇಳಲಾಗಿತ್ತು.

ಬೆಂಗಳೂರು, ಆಗಸ್ಟ್ 7: ರಾಜ್ಯದಲ್ಲಿ ಅನಪೇಕ್ಷಿತ ಬೆಳವಣಿಗೆ ಆಗಿರುವ ಸಂದರ್ಭದಲ್ಲೇ ಗೃಹ ಸಚಿವ ಅಮಿತ್ ಷಾ ದಿಢೀರ್ ಆಗಿ ರಾಜ್ಯಕ್ಕೆ ಆಗಮಿಸಿದ್ದಾಗಲೇ ಏನೋ ಸರ್ಜರಿ ಪ್ಲಾನ್ ಇಟ್ಟುಕೊಂಡೇ ಬಂದಿದ್ದಾರೆಂದೇ ಹೇಳಲಾಗಿತ್ತು. ಬೆಂಗಳೂರಿಗೆ ಬಂದವರೇ ಮುಖ್ಯಮಂತ್ರಿ ಆದಿಯಾಗಿ ಎಲ್ಲರನ್ನೂ ರೈಟ್- ಲೆಫ್ಟ್ ಮಾಡಿದ್ದರು ಎನ್ನಲಾಗಿತ್ತು. ಅದೇ ವೇಳೆಗೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕರೆಸಿ ಮಾತುಕತೆಯನ್ನೂ ನಡೆಸಿದ್ದರು. ಇದೀಗ ಬರ್ತಿರೋ ಮಾಹಿತಿ ಪ್ರಕಾರ, ಸಂಪುಟ ಸರ್ಜರಿ ಜೊತೆಗೆ ಮುಖ್ಯಮಂತ್ರಿಯನ್ನೂ ಬದಲಾಯಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೀಡಾಗಿದೆ.

ಮೊನ್ನೆ ಜುಲೈ 28ರಂದು ಸಿಎಂ ಬಸವರಾಜ ಬೊಮ್ಮಾಯಿ ಒಂದು ವರ್ಷದ ಆಡಳಿತವನ್ನು ಪೂರೈಸಿದ್ದರು. ಅದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ಅದರ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ತಿರುಗಿತ್ತು. ಕೈಲಾಗದವರು ಆಡಳಿತ ಮಾಡುತ್ತಿದ್ದಾರೆಂದು ಹಲವು ಜಿಲ್ಲೆಗಳಲ್ಲಿ ಯುವಮೋರ್ಚಾ ಕಾರ್ಯಕರ್ತರು ಪಕ್ಷದ ಜವಾಬ್ದಾರಿಗೆ ರಾಜಿನಾಮೆ ನೀಡಿದ್ದರು. ಬಿಜೆಪಿ ಆಡಳಿತದಲ್ಲಿದ್ದರೂ, ಕಾರ್ಯಕರ್ತರ ಕೊಲೆ ಸರಣಿಗೆ ಅಂತ್ಯ ಹಾಡಲು ಸಾಧ್ಯವಾಗಿಲ್ಲ ಎಂಬ ನೋವು, ಹತಾಶೆ ಇಡೀ ರಾಜ್ಯದಲ್ಲಿ ಹರಡಿತ್ತು.

Siddaramaiah birthday bash: Congress worried over possible increase  infighting | Deccan Herald

ಬಿಜೆಪಿ ಸರಕಾರದ ವಿರುದ್ಧ ಪಕ್ಷದ ಕಾರ್ಯಕರ್ತರೇ ಸಿಡಿದು ನಿಂತಿದ್ದಾಗ ಸಿದ್ದರಾಮಯ್ಯ ಹುಟ್ಟುಹಬ್ಬದ ನೆಪದಲ್ಲಿ ಕಾಂಗ್ರೆಸ್ ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿತ್ತು. ಬಿಜೆಪಿ ಪ್ರಾಬಲ್ಯದ ಉತ್ತರ ಕರ್ನಾಟಕದ ಪ್ರತೀ ಕ್ಷೇತ್ರದಿಂದ 10ರಿಂದ 15 ಸಾವಿರ ಜನರು ಬರುವಂತೆ ನೋಡಿಕೊಳ್ಳಲಾಗಿತ್ತು. ಆಮೂಲಕ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಶ್ ಶಕ್ತಿಪ್ರದರ್ಶನ ಮಾಡಿದ್ದು ಪರೋಕ್ಷವಾಗಿ ಆಡಳಿತಾರೂಢರಿಗೆ ಟಾಂಗ್ ನೀಡಿದಂತಿತ್ತು. ಬಿಜೆಪಿ ಆಡಳಿತದಲ್ಲಿ ಇರುವಾಗಲೇ ರಾಜ್ಯದ ಪ್ರಬಲ ಸಮುದಾಯಗಳೆಂದು ಗುರುತಿಸಲ್ಪಟ್ಟ ಕುರುಬ ಮತ್ತು ಲಿಂಗಾಯತರು ಕಾಂಗ್ರೆಸ್ ಪರ ವಾಲುತ್ತಿದ್ದಾರೋ ಅನ್ನಿಸುವಷ್ಟು ಕಾಂಗ್ರೆಸ್ ಉತ್ಸವದಲ್ಲಿ ಜನ ಸೇರಿದ್ದರು. ಇವೆಲ್ಲ ಬೆಳವಣಿಗೆಯಿಂದ ರಾಜ್ಯ ಸರಕಾರದ ಬಗ್ಗೆ ತೀವ್ರ ನಿರಾಸೆಗೊಂಡಿದ್ದು ಬಿಜೆಪಿ ಹೈಕಮಾಂಡ್.

Coronavirus | Amit Shah tests positive, admitted to hospital - The Hindu

ಇದಕ್ಕಾಗಿಯೇ ಅಮಿತ್ ಷಾ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ಮೊದಲೇ ರಾಜ್ಯದ ಜನರ ನಾಡಿ ಮಿಡಿತ ತಿಳಿದುಕೊಂಡಂತಿರುವ ಅಮಿತ್ ಷಾ, ನೇರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಚರ್ಚೆಯನ್ನೂ ನಡೆಸಿದ್ದಾರೆ. ಅಲ್ಲದೆ, ಸಿದ್ದರಾಮೋತ್ಸವದ ಬಗ್ಗೆಯೂ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ಮತಬ್ಯಾಂಕ್ ಆಗಿದ್ದ ಲಿಂಗಾಯತರು ಪಕ್ಷದ ಒಲವು ಕಳಕೊಳ್ಳುತ್ತಿದ್ದಾರೆಯೇ ಎನ್ನುವ ಬಗ್ಗೆಯೂ ಯಡಿಯೂರಪ್ಪ ಅವರಲ್ಲಿ ಚರ್ಚೆ ನಡೆಸಿದ್ದಾರೆ.

Yediyurappa - the old war horse BJP still needs in Karnataka

ಪಿಎಸ್ಐ ಹಗರಣ, ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪದಿಂದ ರಾಜ್ಯ ಬಿಜೆಪಿ ಸರಕಾರದ ಇಮೇಜ್ ಹಾಳಾಗಿತ್ತು. ಬೊಮ್ಮಾಯಿ ಸರಕಾರ ಬಂದ ಒಂದು ವರ್ಷದಿಂದಲೂ ಸರಕಾರ ಟೇಕಾಫ್ ಆಗಿಲ್ಲವೆಂದೇ ಟೀಕೆ ಇತ್ತು. ಆನಂತರ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗಿರುವುದು ಬಿಜೆಪಿ ವಲಯದಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸೇರಿದಂತೆ ಇಡೀ ಸಂಪುಟಕ್ಕೆ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ವಲಸಿಗರೇ ಹೆಚ್ಚು ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಆರೋಪಗಳಿದ್ದು, ಚುನಾವಣೆ ಕಾಲದಲ್ಲಿ ಈ ಆರೋಪಗಳಿಂದ ಮುಕ್ತರಾಗುವ ನಿಟ್ಟಿನಲ್ಲಿ ಇಡೀ ಆಡಳಿತ ಯಂತ್ರಕ್ಕೆ ಸರ್ಜರಿ ನಡೆಸುವ ಅನಿವಾರ್ಯತೆಯಲ್ಲಿ ಹೈಕಮಾಂಡ್ ಇದೆ. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೂ ಹೊಸಬರನ್ನು ಕೂರಿಸಿ, ಚುನಾವಣೆ ಎದುರಿಸಲು ಹೈಕಮಾಂಡ್ ಮುಂದಾಗಿದೆ.

Shobha Karandlaje targets Siddu with 'wear bangles' jibe, triggers new row

ಮೇಲ್ನೋಟಕ್ಕೆ ಯಡಿಯೂರಪ್ಪ ಮತ್ತು ಆರೆಸ್ಸೆಸ್ ಒಲವು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರ ಇದೆ ಎನ್ನಲಾಗುತ್ತಿದೆ. ಬಂಪರ್ ಹೊಡೆದರೆ, ಒಕ್ಕಲಿಗ ಸಮುದಾಯದ ಶೋಭಾ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡರೆ ಆಶ್ಚರ್ಯ ಇಲ್ಲ ಎನ್ನುತ್ತವೆ ಮೂಲಗಳು. ಆಮೂಲಕ ಮೊದಲ ಬಾರಿಗೆ ಕರ್ನಾಟಕದ ಮಹಿಳಾ ಸಿಎಂ ಎಂಬ ಹೆಗ್ಗಳಿಕೆಯೂ ಶೋಭಾ ಪಾಲಾಗಲಿದೆ. ಇದೇ ವೇಳೆ, ಜಗದೀಶ್ ಶೆಟ್ಟರ್ ಹೆಸರು ಕೂಡ ಸಿಎಂ ರೇಸಿನಲ್ಲಿ ಕೇಳಿಬರುತ್ತಿದೆ. ಯಡಿಯೂರಪ್ಪ ಅವರು ಅಮಿತ್ ಷಾ ಅವರಲ್ಲಿ ಶೆಟ್ಟರ್ ಮತ್ತು ಶೋಭಾ ಅವರ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ, ಶೆಟ್ಟರ್ ಈ ಹಿಂದೆ ಸಿಎಂ ಆಗಿದ್ದು ಜನರಿಂದ ಒಲವು ಗಳಿಸುವಲ್ಲಿ ವಿಫಲರಾಗಿದ್ದಾರೆ. ಆದರೆ, ಲಿಂಗಾಯತ ಅನ್ನುವ ಕಾರಣಕ್ಕೆ ಶೆಟ್ಟರ್ ಮತ್ತು ಬಸನಗೌಡ ಯತ್ನಾಳ್ ಹೆಸರು ಕೂಡ ಕೇಳಿಬರುತ್ತಿದೆ.

Will there be a new CM for Karnataka, is High command disappointed with Basavaraj Bommai after praveen murder.