ಮನೆಯಲ್ಲೇ ಗೋಮಾಂಸ, ವಿದ್ಯುತ್ - ನೀರು ಕಡಿತ, ಕಟ್ಟಡ ಮುಟ್ಟುಗೋಲು ; ಯುಪಿ ಮಾದರಿಯಲ್ಲಿ ತುರ್ತು ಕ್ರಮಕ್ಕೆ ಮುಂದಾದ ನಗರಸಭೆ ! 

08-08-22 12:07 pm       HK News Desk   ಕರ್ನಾಟಕ

ಗೋಹತ್ಯೆ ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಚಿಕ್ಕಮಗಳೂರು, ಆಗಸ್ಟ್ 8: ಗೋಹತ್ಯೆ ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಅಕ್ರಮವಾಗಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಗೋಮಾಂಸ ಮಾಡಲು ಬಳಸುತ್ತಿದ್ದ ಮನೆಯ ವಿದ್ಯುತ್, ನೀರಿನ ಸಂಪರ್ಕವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಅಲ್ಲದೆ, ಪದೇ ಪದೇ ವಾರ್ನಿಂಗ್ ಮಾಡಿದರೂ ಕೇಳದ ಕಾರಣಕ್ಕಾಗಿ ಮನೆಯ ದಾಖಲೆಗಳನ್ನ ರದ್ದು ಮಾಡಿ, ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಅಧಿಕಾರಿಗಳು ಸಿದ್ಧತೆ ‌ನಡೆಸಿದ್ದಾರೆ. 

ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ಅಕ್ರಮದ ವಿರುದ್ಧ ತುರ್ತಾಗಿ ಕ್ರಮ ಜರುಗಿಸಲು ಚಿಕ್ಕಮಗಳೂರು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.‌ ಚಿಕ್ಕಮಗಳೂರು ಪೊಲೀಸರ ಭದ್ರತೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದು ರೆಡಿ ಮಾಡುತ್ತಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. 

ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಯಶಪಾಲ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಕಟ್ಟಡದ ಮೇಲೆಯೇ ಕ್ರಮ ಜರುಗಿಸಿದ್ದಾರೆ. ಚಿಕ್ಕಮಗಳೂರು ನಗರಸಭೆಯ ಅಧಿಕಾರಿಗಳು ನಿರಂತರವಾಗಿ ಗೋಮಾಂಸ ಅಡ್ಡೆಗಳ ಮೇಲೆ‌‌ ದಾಳಿ ನಡೆಸುತ್ತಿದ್ದು ಎಚ್ಚರಿಕೆ ಕೊಟ್ಟರೂ ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ‌

Chikmagalur Illegally selling beef meat inside the home, Town Municapity disconnects electricity and water of the house just like the Uttarpradesh model.