ದೆಹಲಿ ಹೈಕಮಾಂಡ್ ಸಿಟ್ಟಿಂಗ್ ಬೆನ್ನಲ್ಲೇ ಯಡಿಯೂರಪ್ಪ ನಿವಾಸಕ್ಕೆ ಜಗದೀಶ ಶೆಟ್ಟರ್ ; ರಾಜ್ಯ ರಾಜಕೀಯದಲ್ಲಿ ಕುತೂಹಲ !

10-08-22 07:45 pm       Bangalore Correspondent   ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಗಳು ಆಗ್ತಾ ಇರೋದು ಪಕ್ಕಾ ಆಗಿದೆ. ದೆಹಲಿಗೆ ಬುಲಾವ್ ಆಗಿದ್ದ ಜಗದೀಶ ಶೆಟ್ಟರ್ ತುರ್ತಾಗಿ ಹೈಕಮಾಂಡ್ ಭೇಟಿಯಾಗಿ ಬೆಂಗಳೂರಿಗೆ ಹಿಂತಿರುಗಿದ್ದು, ನಗರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಬೆಂಗಳೂರು, ಆಗಸ್ಟ್ 10: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಗಳು ಆಗ್ತಾ ಇರೋದು ಪಕ್ಕಾ ಆಗಿದೆ. ದೆಹಲಿಗೆ ಬುಲಾವ್ ಆಗಿದ್ದ ಜಗದೀಶ ಶೆಟ್ಟರ್ ತುರ್ತಾಗಿ ಹೈಕಮಾಂಡ್ ಭೇಟಿಯಾಗಿ ಬೆಂಗಳೂರಿಗೆ ಹಿಂತಿರುಗಿದ್ದು, ನಗರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ವಿಮಾನ ನಿಲ್ದಾಣದಿಂದ ನೇರವಾಗಿ ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಆಗಮಿಸಿದ ಶೆಟ್ಟರ್, ಕೆಲಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಜಗದೀಶ ಶೆಟ್ಟರ್ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಯೊಬ್ಬರು ಫೋನಲ್ಲಿ ಸಂಪರ್ಕಿಸಿದಾಗ, ಏನೋ ರಾಜಕೀಯ ಬೆಳವಣಿಗೆ ಆಗ್ತಾ ಇದೆ. ಏನೆಂದು ತನಗೂ ಗೊತ್ತಿಲ್ಲ ಎಂದು ಶೆಟ್ಟರ್ ಕಾಗೆ ಹಾರಿಸಿದ್ದಾರೆ. ಆದರೆ ಶೆಟ್ಟರ್ ದಿಢೀರ್ ಆಗಿ ದೆಹಲಿಗೆ ತೆರಳಿದ್ದು ಮತ್ತು ಹಿಂತಿರುಗಿ ಬಂದ ಕೂಡಲೇ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

Yediyurappa - the old war horse BJP still needs in Karnataka

ಶೆಟ್ಟರ್ ಬಂದು ಹೋದ ಬಳಿಕ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದಾಗ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ, ಸಹಜವಾಗಿ ಅವಧಿ ಮುಗಿದಾಗ ಬೇರೊಬ್ಬರ ನೇಮಕ ಆಗುತ್ತದೆ. ಯಾರನ್ನು ಮಾಡುತ್ತಾರೆಂದು ಹೈಕಮಾಂಡಿಗೆ ಬಿಟ್ಟದ್ದು. ಅವರೇ ಆಯ್ಕೆ ಮಾಡುತ್ತಾರೆ. ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ, ನನ್ನ ಇರಾದೆಯನ್ನು ಹೇಳಿದ್ದೇನೆ. ನನ್ನ ಸ್ಥಾನವನ್ನು ವಿಜಯೇಂದ್ರನಿಗೆ ಬಿಟ್ಟು ಕೊಡುತ್ತೇನೆಂದು. ಆದರೆ ಪಕ್ಷದ ಪ್ರಮುಖರು ವಿಜಯೇಂದ್ರ ಎಲ್ಲಿ ನಿಲ್ಲಬೇಕು ಅನ್ನೋದನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

Coronavirus | Amit Shah tests positive, admitted to hospital - The Hindu

Karnataka CM Bommai leaves for Davos to participate in World Economic Forum  | Cities News,The Indian Express

ಮೊನ್ನೆ ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಬಳಿಕ ಸಿಎಂ ಬೊಮ್ಮಾಯಿ ಬದಲಾಗುತ್ತಾರೆ ಎನ್ನುವ ವದಂತಿ ಹಬ್ಬಿತ್ತು. ಅದಕ್ಕೆ ರೆಕ್ಕೆಪುಕ್ಕ ಎನ್ನುವಂತೆ ಕಾಂಗ್ರೆಸ್ ಟ್ವೀಟ್ ಮಾಡಿ ಕಾಲೆಳೆಯುವ ಕೆಲಸ ಮಾಡಿದೆ. ಬಿಜೆಪಿ ಸರಕಾರದಲ್ಲಿ ಶೀಘ್ರದಲ್ಲೇ ಮೂರನೇ ಸಿಎಂ ಬರಲಿದ್ದಾರೆ. ಕೇಶವ ಕೃಪಾದವರಿಗೆ ಜನತಾ ಪರಿವಾರದ ವ್ಯಕ್ತಿ ಹಿಡಿಸುವುದಿಲ್ಲ ಎಂದು ಟೀಕಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾಗುತ್ತಾರೆ ಅನ್ನುವ ಸುದ್ದಿಯೇ ಹೆಚ್ಚು ಪ್ರಚಲಿತಕ್ಕೆ ಬಂದಿತ್ತು. ಆದರೆ ಬಿಜೆಪಿ ನಾಯಕರು ಮಾತ್ರ ಸಿಎಂ ಬದಲಾಗಲ್ಲ. ಬೊಮ್ಮಾಯಿ ಅವರೇ ಪೂರ್ಣಾವಧಿ ಇರುತ್ತಾರೆಂದು ಹೇಳುತ್ತಾ ಬಂದಿದ್ದಾರೆ. ಇವೆಲ್ಲದರ ನಡುವೆ, ಜಗದೀಶ ಶೆಟ್ಟರ್ ದೆಹಲಿಗೆ ಹೋಗಿದ್ದು ಮತ್ತು ಅದರ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

Jagadish Shettar goes to Delhi comes back and suddenly meets Yediyurappa in Bengaluru.