ಸಮಯಕ್ಕೆ ಕಾಮಗಾರಿ ಮುಗಿಸಿದ್ರೆ ಓಕೆ, ಇಲ್ಲಾಂದ್ರೆ ಬೂಟಿನಲ್ಲಿ ಹೊಡೀತೀನಿ ; ಪಿಡಬ್ಲ್ಯುಡಿ ಇಂಜಿನಿಯರ್ ಗೆ ದಬಾಯಿಸಿದ ಸಚಿವ ಕತ್ತಿ ! 

10-08-22 10:57 pm       HK News Desk   ಕರ್ನಾಟಕ

ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಗಾರಿ ಮಾಡಿದ್ರೆ ಹೂಮಾಲೆ ಹಾಕ್ತೀನಿ, ಇಲ್ಲಾಂದ್ರೆ ನಿನಗೆ ಬೂಟಿನಿಂದ ಹೊಡಿತಿನಿ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೆ ಸಚಿವ ಉಮೇಶ್ ಕತ್ತಿ ದಬಾಯಿಸಿದ್ದಾರೆ.‌

ವಿಜಯಪುರ, ಆಗಸ್ಟ್  10: ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಗಾರಿ ಮಾಡಿದ್ರೆ ಹೂಮಾಲೆ ಹಾಕ್ತೀನಿ, ಇಲ್ಲಾಂದ್ರೆ ನಿನಗೆ ಬೂಟಿನಿಂದ ಹೊಡಿತಿನಿ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೆ ಸಚಿವ ಉಮೇಶ್ ಕತ್ತಿ ದಬಾಯಿಸಿದ್ದಾರೆ.‌

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ್ ಕತ್ತಿ, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಕಾರ್ಯನಿರ್ವಾಹಕ ಅಭಿಯಂತರ ಸಿಬಿ ಚಿಕ್ಕಲಗಿ ಅವರನ್ನು ದಬಾಯಿಸಿದ್ದಾರೆ. 

ನವೆಂಬರ್, ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡ್ತೀವಿ ಎಂದ ಕಾರ್ಯನಿರ್ವಾಹಕನಿಗೆ, ಸಮಯಕ್ಕೆ ಮಾಡಿದ್ರೆ ಮಾಲೆ ಹಾಕ್ತೀನಿ, ಇಲ್ಲಂದ್ರೆ ಬೂಟಿನಿಂದ ಹೊಡಿತಿನಿ ಎಂದು ಕತ್ತಿ ಹೇಳಿದ್ದಾರೆ.‌ ಕಾರ್ಯನಿರ್ವಾಹಕ ಅಭಿಯಂತರ ಡಿಸೆಂಬರ್ ಗೆ ಮುಗಿಸ್ತೀವಿ ಅಂತಿದ್ದಾರೆ. ನಾನು ಮಾರ್ಚ್ ತಿಂಗಳೊಳಗೆ ಮುಗಿಸಿ ಅಂತಿದ್ದೀನಿ. ಡಿಸೆಂಬರ್ ಗೆ ಮಾಡಿದ್ರೆ ನಾನೇ ಬಂದು ಮಾಲೆ ಹಾಕ್ತೀನಿ. ಇಲ್ಲಾಂದ್ರೆ ಬೂಟಿಲೇ ಹೊಡಿಯುವವನು ನಾನೇ. ಈ ರೀತಿ ಕಾಂಪ್ರಮೈಸ್ ಇದೆ ಎಂದಿದ್ದಾರೆ ಕತ್ತಿ.

Vijayapura Minister Umesh Katti threatens PWD of hitting in chappals if work doesn't complete on time.