ಬ್ರೇಕಿಂಗ್ ನ್ಯೂಸ್
11-08-22 08:41 pm HK News ಕರ್ನಾಟಕ
ಕಾರವಾರ, ಆಗಸ್ಟ್ 11: ಕಾಂಗ್ರೆಸ್ ಸರಕಾರ ಇದ್ದಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತ ಪರೇಶ್ ಮೇಸ್ತ ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಗೆ ನೇಮಕ ಮಾಡಲಾಗಿದೆ. ಕೊಲೆ ಆರೋಪಿಯನ್ನು ಬಿಜೆಪಿ ಆಡಳಿತದಲ್ಲಿ ವಕ್ಫ್ ಕಮಿಟಿಗೆ ನೇಮಕ ಮಾಡಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಜಾಲತಾಣದಲ್ಲಿ ನಾಯಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರನ್ನು ನಂಬಿ ಮತ್ತೆ ಹುಟ್ಟಿ ಬರಬೇಡ ಪರೇಶ್ ಮೇಸ್ತ ಎಂದು ಬರೆದಿರುವ ಬರಹ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದೂ, ಸಂಸದ ಅನಂತ ಕುಮಾರ್ ಹೆಗಡೆ ಇದ್ದಾಗಲೂ ಈ ರೀತಿ ಆಗಿರುವುದಕ್ಕೆ ಕಾರ್ಯಕರ್ತರು ಆಕ್ರೋಶ, ಬೇಸರ ಹೊರಹಾಕಿದ್ದಾರೆ.


ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿ ಆಜಾದ್ ಅಣ್ಣಿಗೇರಿ ಎಂಬ ಕಾಂಗ್ರೆಸ್ ಪುಢಾರಿಯನ್ನು ನೇಮಕ ಮಾಡಲಾಗಿದೆ. ಆಜಾದ್ ಅಣ್ಣಿಗೇರಿ, ಪರೇಶ್ ಮೇಸ್ತ ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಇಂಥವನಿಗೆ ಬಿಜೆಪಿ ಸರಕಾರ ಇರುವಾಗಲೇ ಪಟ್ಟ ದೊರಕಿರುವುದು ಹೇಗೆ ? ಆರೋಪಿ ಆಜಾದ್ ಅಣ್ಣಿಗೇರಿ ಜಾಮೀನಿನಲ್ಲಿ ಹೊರಗಿದ್ದು, ಆತನಿಗೆ ಹೇಗೆ ಉಪಾಧ್ಯಕ್ಷ ಪಟ್ಟ ಸಿಗ್ತು ಎನ್ನುವ ಬಗ್ಗೆ ಬಿಜೆಪಿ ನಾಯಕರೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಪರೇಶ್ ಮೇಸ್ತ ಕೊಲೆ ಪ್ರಕರಣದಲ್ಲಿ ಆಜಾದ್ ಅಣ್ಣಿಗೇರಿ ಒಂದನೇ ಆರೋಪಿಯಾಗಿದ್ದರೆ, ಆಶಿಫ್ ರಫೀಕ್, ಮಹಮ್ಮದ್ ಫೈಸಲ್, ಇಮ್ತಿಯಾಜ್ ಗಣಿ, ಸಲೀಂ ಎಂಬವರು ಇನ್ನಿತರ ಆರೋಪಿಗಳಾಗಿದ್ದಾರೆ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಗೆ ನೇಮಕ ಆಗಿರುವ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಆಜಾದ್ ಅಣ್ಣಿಗೇರಿಯನ್ನು ಅಭಿನಂದಿಸಿ ಅಭಿಮಾನಿಗಳು ಜಾಹೀರಾತು ನೀಡಿದ್ದರು. ಜಿಲ್ಲಾ ಕಮಿಟಿಗೆ ನೇಮಕ ಮಾಡಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಶಾಫಿ ಸಾದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಜಿ. ನಾಯ್ಕ, ಮಾಜಿ ಶಾಸಕರಾದ ಸತೀಶ್ ಸೈಲ್, ಶಾರದಾ ಶೆಟ್ಟಿ, ಮಾಂಕಾಳ ಎಸ್. ವೈದ್ಯ ಅವರಿಗೆ ಕೃತಜ್ಞತೆಗಳು ಎಂದು ಬರೆದು ಅಭಿನಂದನಾ ಜಾಹೀರಾತು ನೀಡಿದ್ದಾರೆ. ಜಾಹೀರಾತು ಪ್ರಕಟದ ಬಳಿಕ ಜಿಲ್ಲಾ ವಕ್ಫ್ ಬೋರ್ಡ್ ಕಮಿಟಿಗೆ ಕಾಂಗ್ರೆಸ್ ಪುಢಾರಿ ಮತ್ತು ಪರೇಶ್ ಮೇಸ್ತ ಕೊಲೆ ಪ್ರಕರಣದ ಪ್ರಮುಖ ಆರೋಪಿ ನೇಮಕ ಆಗಿರುವುದು ಬಿಜೆಪಿ ಕಾರ್ಯಕರ್ತರ ಗಮನಕ್ಕೆ ಬಂದಿದೆ.
ರಾಜಕೀಯ ತಿರುವು ಪಡೆದಿದ್ದ ಗಲಭೆ ಪ್ರಕರಣ


2017ರ ಡಿಸೆಂಬರ್ 6ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗಲಭೆ ನಡೆದಿತ್ತು. ಈ ವೇಳೆ, ಪರೇಶ್ ಮೇಸ್ತ ಎಂಬ 21 ವರ್ಷದ ಹುಡುಗ ನಾಪತ್ತೆಯಾಗಿದ್ದ. ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪರೇಶ್ ಮೇಸ್ತ ಎರಡು ದಿನಗಳ ಬಳಿಕ ಹೊನ್ನಾವರದ ಶನಿ ದೇವಸ್ಥಾನದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಶವದ ಮೇಲೆ ಗಾಯದ ಗುರುತುಗಳಿದ್ದುದರಿಂದ ಯಾರೋ ಕೊಲೆಗೈದು ಕೆರೆಗೆ ಎಸೆದಿದ್ದರು ಅನ್ನುವ ಆರೋಪ ಕೇಳಿಬಂದಿತ್ತು. ಇದೇ ವಿಚಾರದಲ್ಲಿ ಗಲಭೆ ನಡೆದು ಕುಮಟಾ, ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಬಿಜೆಪಿ ನಾಯಕರು ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹ ಮಾಡಿದ್ದರು. ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿದ್ದಂತೆ ಆಗಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಪರೇಶ್ ಮೇಸ್ತ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರು. ಸಿಬಿಐ ಅಧಿಕಾರಿಗಳು ಕುಮಟಾ, ಹೊನ್ನಾವರಕ್ಕೆ ಬಂದು ತನಿಖೆ ನಡೆಸಿ ಹೋಗಿದ್ದರೂ, ತಾರ್ಕಿಕ ಅಂತ್ಯ ಆಗಿಲ್ಲ. ಆರೋಪಿಗಳು ಜಾಮೀನಿನಲ್ಲಿ ಹೊರಬಂದು ರಾಜಾರೋಷ ಇದ್ದಾರೆ.
Honnavar Paresh Mesta murder accused offered post in BJP Central Waqf board committee has raised huge controversy among Hindu leaders and members. Paresh Mesta, a resident of Tulasinagar in Honnavar taluk was murdered on December 6, 2017 in Honnavar. His body was found floating in Honnavar's Shettikere lake on December 8, 2017. The CBI FIR names five accused persons – Azad Annigeri, Ashif Rafiq, Mohammed Faisal Annigeri, Imtiyaz Gani and Salim
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm