ಲೋಕಾಯುಕ್ತಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಬೇಕು, ಹಿಂದೆಲ್ಲಾ ದೊಡ್ಡ ದೊಡ್ಡವರನ್ನು ಬಲೆಗೆ ಹಾಕಿದ್ರಲ್ಲ.. ; ಎಚ್.ಡಿ ರೇವಣ್ಣ 

11-08-22 11:23 pm       HK News Desk   ಕರ್ನಾಟಕ

ಎಸಿಬಿಯನ್ನ ಲೋಕಾಯುಕ್ತ ವ್ಯಾಪ್ತಿಗೆ ತಂದಿರುವ ಹೈಕೋರ್ಟ್ ಆದೇಶ ಉತ್ತಮ ಬೆಳವಣಿಗೆ. ನ್ಯಾಯಾಂಗದ ತೀರ್ಪನ್ನ ಸ್ವಾಗತಿಸುತ್ತೇನೆ. ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ‌‌ ಅಧಿಕಾರ ಕೊಡಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.‌

ಹಾಸನ, ಆಗಸ್ಟ್ 11: ಎಸಿಬಿಯನ್ನ ಲೋಕಾಯುಕ್ತ ವ್ಯಾಪ್ತಿಗೆ ತಂದಿರುವ ಹೈಕೋರ್ಟ್ ಆದೇಶ ಉತ್ತಮ ಬೆಳವಣಿಗೆ. ನ್ಯಾಯಾಂಗದ ತೀರ್ಪನ್ನ ಸ್ವಾಗತಿಸುತ್ತೇನೆ. ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ‌‌ ಅಧಿಕಾರ ಕೊಡಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.‌

ಎಸಿಬಿ ಅಧಿಕಾರಿಗಳದ್ದು ತಪ್ಪು ಅಂತಾ ನಾನು ಹೇಳಲ್ಲ. ಸರ್ಕಾರ ಎಸಿಬಿ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಬಿಡೋದಿಲ್ಲ.‌ ಸರ್ಕಾರ ಎಸಿಬಿ ಅಧಿಕಾರಿಗಳಿಗೆ ಸರಿಯಾದ ಸ್ಪಂದನೆ ಕೊಡದೇ ಹೋದಾಗ ಎಸಿಬಿ ಫೇಲ್ ಆಗುತ್ತೆ.‌ ಇಂತಹ ಸಂಸ್ಥೆಗಳೆಲ್ಲಾ ಸರ್ಕಾರದ ಹಿಡಿತದಲ್ಲಿರಬಾರದು.‌ ಭ್ರಷ್ಟಾಚಾರ ನಿಯಂತ್ರಣ ಮಾಡುವ ಯಾವುದೇ ಅಂಗ ಸರ್ಕಾರದ ಅಧೀನದಲ್ಲಿರಬಾರದು ಎಂದು ಹೇಳಿದರು.‌

ACB raids residences, offices of 18 Places in K'taka - Mangalorean.com

ನ್ಯಾಯಾಲಯ ತೀರ್ಮಾನ ತೆಗೆದುಕೊಂಡಿರುವುದು ಒಳ್ಳೆಯದು.‌ ಎಸಿಬಿಯೊಳಗೆ ನಿತ್ಯವೂ ಸರ್ಕಾರದ ಹಸ್ತಕ್ಷೇಪ ಇದೆ ಅನ್ನೋ ತೀರ್ಮಾನಕ್ಕೆ ಬರಲಾಗಿದೆ. ಲೋಕಾಯುಕ್ತಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಬೇಕು. ಹಿಂದೆಲ್ಲಾ ಲೋಕಾಯಕ್ತದಲ್ಲಿ ತನಿಖೆ ನಡೀತಾ ಇತ್ತಲ್ಲ.. ಹಿಂದೆ ದೊಡ್ಡ ದೊಡ್ಡವರನ್ನ ಕರೆಸಿ ತನಿಖೆ ಮಾಡಿದ ಉದಾಹರಣೆ‌ ಲೋಕಾಯುಕ್ತದಲ್ಲಿ ಇದ್ಯಲ್ಲ. ಅದೇ ರೀತಿ ಸ್ವಾತಂತ್ರ್ಯ ಕೊಡಬೇಕಿದೆ ಎಂದು ಹೇಳಿದರು.

HD Revanna says Lokayukta should be given full power as before.