ಎಸಿಬಿ ರದ್ದು ; ಮೂರೂ ಪಕ್ಷಗಳ ನಾಯಕರು ಬೆತ್ತಲು, ಸಿಎಂ ಆದವರಿಗೇ ಗೊತ್ತಿಲ್ಲ ಅಂದ್ರೆ ಏನರ್ಥ ? 

12-08-22 02:40 pm       HK News Desk   ಕರ್ನಾಟಕ

2016 ರಲ್ಲಿ ಲೋಕಾಯುಕ್ತವನ್ನ ತಿರುಚಿ ಎಸಿಬಿ ತರಲಾಗಿತ್ತು. ಒಂದು ಕಾನೂನು ಇರುವಾಗಲೇ ಮತ್ತೊಂದು ಮಾಡುವುದು ಕಾನೂನು ವಿರೋಧ ಎಂದು ಜಸ್ಟಿಸ್ ಗೋಪಾಲರಾವ್ ಹೇಳಿದ್ದರು.

ಮೈಸೂರು, ಆಗಸ್ಟ್ 12 : 2016 ರಲ್ಲಿ ಲೋಕಾಯುಕ್ತವನ್ನ ತಿರುಚಿ ಎಸಿಬಿ ತರಲಾಗಿತ್ತು. ಒಂದು ಕಾನೂನು ಇರುವಾಗಲೇ ಮತ್ತೊಂದು ಮಾಡುವುದು ಕಾನೂನು ವಿರೋಧ ಎಂದು ಜಸ್ಟಿಸ್ ಗೋಪಾಲರಾವ್ ಹೇಳಿದ್ದರು. ಈಗ ಎಸಿಬಿ ಹೋಗಿದೆ, ಲೋಕಾಯುಕ್ತ ಬಂದಿದೆ. ಇದನ್ನ ಅತ್ಯಂತ ಗೌರವದಿಂದ ನಾನು ಸ್ವಾಗತಿಸುತ್ತೇನೆ ಎಂದು ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿದ್ದಾರೆ. 

ಮತ್ತೆ ಲೋಕಾಯುಕ್ತ ತರುವಂತೆ ಹೈಕೋರ್ಟ್ ಹೇಳಿದ್ದರಿಂದ ಮೂರು ರಾಜಕೀಯ ಪಕ್ಷಗಳು ಕೂಡ ಬೆತ್ತಲಾಗಿವೆ. ಸಿಎಂ ಪ್ರತಿಕ್ರಿಯೆ ನೀಡಿ, ಎಸಿಬಿ ರದ್ದು ಮಾಡಿರುವುದನ್ನ ಕೇಳಿದ್ದೇನೆ. ಆದೇಶ ಪ್ರತಿ ಗಮನಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ರಾಜ್ಯದ ಸಿಎಂ ಆದವರು ಏನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಎಸಿಬಿ ರದ್ದು ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ, ಎಸಿಬಿ ರದ್ದಿನಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದಿದ್ದಾರೆ. ಎಸಿಬಿ ಹಲವು ರಾಜ್ಯಗಳಲ್ಲಿದೆ, ಆದರೆ ಇಲ್ಲಿ ಮೂರೂ ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ ಎಂದು ಎಂಎಲ್ಸಿ ಎಚ್‌. ವಿಶ್ವನಾಥ್ ಹೇಳಿದ್ದಾರೆ. 

File:High Court of Karnataka, Bangalore MMK.jpg - Wikipedia

Siddaramaiah birthday bash: Congress worried over possible increase  infighting | Deccan Herald

H.D. Kumaraswamy: From underdog to top dog | Mint

ACB raids residences, offices of 18 Places in K'taka - Mangalorean.com

I was confident of coming out clean: KS Eshwarappa | Deccan Herald

ಯಾವುದೋ ರಾಜಕೀಯ ಪಾರ್ಟಿಗಾಗಿ ಕಾನೂನುಗಳು ಇರುವುದಲ್ಲ. ಆಡಳಿತ ಮಾಡುವವರು ರಾಜ್ಯದ ಹಿತದೃಷ್ಟಿಯಿಂದ ಲೋಕಾಯುಕ್ತವನ್ನ ಸೂಕ್ತ ರೀತಿಯಲ್ಲಿ ಬಳಸಬೇಕು. ಕೋರ್ಟ್ ತೀರ್ಪನ್ನ ಸರ್ಕಾರ ಸರಿಯಾಗಿ ಪಾಲಿಸಬೇಕು. ಇದೇ ಲೋಕಾಯುಕ್ತದಿಂದಾಗಿ ಹಿಂದೊಮ್ಮೆ ಸಿಎಂ ಆಗಿದ್ದವರೇ ಜೈಲಿಗೆ ಹೋಗಿದ್ದರು. ಈಶ್ವರಪ್ಪ ಮನೆಯಲ್ಲಿ ಹಣ ಎಣಿಸುವ ಮೆಷಿನ್ ಸಿಕ್ಕಿತ್ತು. ಆಗಲೇ ಲೋಕಾಯುಕ್ತ ಮುಚ್ಚುವ ನಿರ್ಧಾರ ಆಗಿತ್ತು. ಸಿದ್ದರಾಮಯ್ಯ ಬಂದು ಮುಚ್ಚಿಬಿಟ್ಟು ಇವರಿಗೆಲ್ಲ ಒಳಿತು ಮಾಡಿದ್ದರು ಎಂದು ಎಚ್. ವಿಶ್ವನಾಥ್ ವ್ಯಂಗ್ಯವಾಡಿದರು.

HC abolishes ACB in State MLC Vishwanath slams bjp says three ministers went naked.