ಚೀನಾದ ವ್ಯಕ್ತಿಗಳಿಂದ ಬೆಂಗಳೂರಿನಲ್ಲಿ ನಕಲಿ ಕಂಪನಿ ; ಅಕ್ರಮ ಹಣಕಾಸು ವಹಿವಾಟು, ಇಡಿಯಿಂದ 370 ಕೋಟಿ ಮೌಲ್ಯದ ಆಸ್ತಿ ಜಪ್ತಿ 

12-08-22 10:02 pm       Bangalore Correspondent   ಕರ್ನಾಟಕ

ಯೆಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿ. ಎಂಬ ಹೆಸರಿನ ಬೆಂಗಳೂರಿನ ಕಂಪನಿಯ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 370 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. 

ಬೆಂಗಳೂರು, ಆಗಸ್ಟ್ 12 : ಯೆಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿ. ಎಂಬ ಹೆಸರಿನ ಬೆಂಗಳೂರಿನ ಕಂಪನಿಯ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 370 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. 

ಇಡಿ ಅಧಿಕಾರಿಗಳು ಕಂಪನಿ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್‌ನಲ್ಲಿದ್ದ ನಗದು ಸೇರಿದಂತೆ 370 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಕಂಪನಿಯ ಬ್ಯಾಂಕ್ ಬ್ಯಾಲೆನ್ಸ್, ಪಾವತಿ, ಗೇಟ್‌ವೇ ಬ್ಯಾಲೆನ್ಸ್ ಮತ್ತು ಫ್ಲಿಪ್‌ವೋಲ್ಟ್ ಕ್ರಿಪ್ಟೋ-ಕರೆನ್ಸಿ ಎಕ್ಸ್‌ಚೇಂಜ್‌ನ ಕ್ರಿಪ್ಟೋ ಬ್ಯಾಲೆನ್ಸ್‌ ಸಹಿತ ಒಟ್ಟು 370 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಫ್ರೀಜ್ ಮಾಡಲು ಇಡಿ ಆದೇಶ ಹೊರಡಿಸಿದೆ.

Cryptocurrency scam: ED freezes ₹370 crore worth bank & crypto balances of  Bengaluru firm | India News

ಯೆಲ್ಲೋ ಟ್ಯೂನ್ ಟೆಕ್ನಾಲಜೀಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಚೈನಾ ಮೂಲದ ವ್ಯಕ್ತಿಗಳು ಸ್ಥಳೀಯವಾಗಿ ಸ್ಥಾಪಿಸಿದ್ದಾರೆ. ಕಂಪನಿಯು ಆರ್.ಬಿ.ಐ ನಿಯಮ ಉಲ್ಲಂಘಿಸಿ ಮೈಕ್ರೋ ಫೈನಾನ್ಸಿಂಗ್ ಮಾಡಿದ್ದಾಗಿ ಇಡಿ ಆರೋಪಿಸಿದೆ. ಕಂಪನಿಯು ಕ್ರಿಫ್ಟೋ ಕರೆನ್ಸಿ, ಸ್ಥಿರ ಹಾಗೂ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇ.ಡಿ ನೋಟಿಸ್ ನೀಡಿದೆ. ಪ್ಲಿಪ್ ವೋಲ್ಟ್ ಕ್ರಿಪ್ಟೋ ಎಕ್ಸ್ ಚೇಂಜ್ ಮೂಲಕ ಅಕ್ರಮವಾಗಿ ಕ್ರಿಫ್ಟೋ ರೂಪದಲ್ಲಿ ಹಣ ಪಡೆದ ಆರೋಪ ಕೇಳಿಬಂದಿದೆ.

ನಕಲಿ ಸಹಿ, ಡಿಜಿಟಲ್ ದಾಖಲಾತಿಗಳ ಮೂಲಕ ಯೆಲ್ಲೋ ಟ್ಯೂನ್ ಕಂಪನಿ ತೆರೆಯಲಾಗಿತ್ತು. ಆದರೆ 2020ರಲ್ಲೇ ಕಂಪನಿ ಮಾಲೀಕರು ಭಾರತವನ್ನು ತೊರೆದಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಯೆಲ್ಲೋ ಟ್ಯೂನ್, ಪ್ಲಿಪ್ ವೋಲ್ಟ್ ಕಂಪನಿ ಆಸ್ತಿ, ಖಾತೆಗಳನ್ನು ಜಪ್ತಿಯಲ್ಲಿ ಇಡಲಿದ್ದಾರೆ.

Amid Republic Media Network's biggest financial expose of 2022, the crypto scam has got bigger. The Enforcement Directorate (ED) conducted searches at various premises of Yellow Tune Technologies Private Limited at Bangalore and has issued an order to freeze the company's bank balances, payment gateway balances and crypto balances of Flipvolt crypto-currency exchange totalling Rs 370 crores worth of assets.