ಕಾಂಗ್ರೆಸ್ ನಿಂದ ಟಿಪ್ಪು ಸುಲ್ತಾನ್ ಬ್ಯಾನರ್ ; ರಸ್ತೆಯಲ್ಲಿ ಹಾಕಿದ್ದ ಪೋಸ್ಟರ್ ಹರಿದು ಹಾಕಿದ ಬಜರಂಗದಳ ಕಾರ್ಯಕರ್ತರು 

14-08-22 02:09 pm       Bangalore Correspondent   ಕರ್ನಾಟಕ

75ನೇ ಸ್ವಾತಂತ್ರ್ಯದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಫೋಸ್ಟರ್ ಗಳನ್ನು ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ್ದಾರೆ. 

ಬೆಂಗಳೂರು, ಆಗಸ್ಟ್ 14 : 75ನೇ ಸ್ವಾತಂತ್ರ್ಯದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಫೋಸ್ಟರ್ ಗಳನ್ನು ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ್ದಾರೆ. 

ಶಿವಮೊಗ್ಗದ ಮಾಲ್‌ನಲ್ಲಿ ಹಾಕಿದ್ದ ವೀರ್ ಸಾವರ್ಕರ್, ಸರ್ದಾರ್ ವಲ್ಲಭಬಾಯ್ ಫೋಟೋಗಳನ್ನು ಎಸ್ಡಿಪಿಐ ಕಾರ್ಯಕರ್ತರು ತೆಗೆಸಿ ಉದ್ಧಟತನ ತೋರಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾತ್ರೋರಾತ್ರಿ ಪುನೀತ್ ಕೆರೆಹಳ್ಳಿ ಮತ್ತು ಇತರರು ದುಂಡಾವರ್ತನೆ ತೋರಿದ್ದಾರೆ.

ಕೆ. ಆರ್. ಸರ್ಕಲ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕಾಂಗ್ರೆಸ್‌ ಜಾಥಾ ಹಮ್ಮಿಕೊಂಡಿದ್ದ ಹಿನ್ನೆಲೆ ರಸ್ತೆ‌ಯ ಇಕ್ಕೆಲಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಫೋಟೋಗಳನ್ನು ಹಾಕಿದ್ದರು. ಅಂಬೇಡ್ಕರ್ , ಇಂದಿರಾ ಗಾಂಧಿ, ನೆಹರು, ಟಿಪ್ಪು ಸುಲ್ತಾನ್ ಸೇರಿದಂತೆ ಹಲವಾರು ಮಂದಿಯ ಭಾವಚಿತ್ರಗಳನ್ನು ಹಾಕಲಾಗಿತ್ತು. ಟಿಪ್ಪು ಭಾವಚಿತ್ರಗಳಿದ್ದ ಬ್ಯಾನರ್ ಗಳನ್ನು ಹರಿದು ತುಳಿದು ಹಾಕಿರುವುದನ್ನು ನೋಡಿದ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಮಾಲ್ ನಲ್ಲಿ ಹಾಕಲಾಗಿದ್ದ ಸಾವರ್ಕರ್ ಫೋಟೊ ತೆಗೆಸಿದ್ದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು.

Tipu Sultan banner ripped and torn by VHP sparks controversy in Bangalore by Puneeth Kerehalli and team.