ಶಿವಮೊಗ್ಗ ಮತ್ತೆ ಉದ್ವಿಗ್ನ ; ಸಾವರ್ಕರ್ ಫ್ಲೆಕ್ಸ್ ತೆರವಿಗೆತ್ನಿಸಿದ ಕಿಡಿಗೇಡಿಗಳು, ಬಿಜೆಪಿ ಪ್ರತಿಭಟನೆ, ಲಾಠಿಚಾರ್ಜ್, ಚೂರಿ ಇರಿತ ! 

15-08-22 07:27 pm       HK News Desk   ಕರ್ನಾಟಕ

ಸ್ವಾತಂತ್ರ್ಯದ ಅಮೃತ ಮಹೋತ್ಸವ  ಸಲುವಾಗಿ ಸಾವರ್ಕರ್ ಫ್ಲೆಕ್ಸ್ ಕಿತ್ತೆಸೆದ ಕಿಡಿಗೇಡಿಗಳು ತೆರವುಗೊಳಿಸಿದ ವಿಚಾರದಲ್ಲಿ ಎರಡು ಗುಂಪುಗಳು ಸೇರಿ ಗಲಾಟೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ, ಆಗಸ್ಟ್ 15 : ಸ್ವಾತಂತ್ರ್ಯದ ಅಮೃತ ಮಹೋತ್ಸವ  ಸಲುವಾಗಿ ಸಾವರ್ಕರ್ ಫ್ಲೆಕ್ಸ್ ಕಿತ್ತೆಸೆದ ಕಿಡಿಗೇಡಿಗಳು ತೆರವುಗೊಳಿಸಿದ ವಿಚಾರದಲ್ಲಿ ಎರಡು ಗುಂಪುಗಳು ಸೇರಿ ಗಲಾಟೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ. 

ಶಿವಮೊಗ್ಗ ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳ ಫೋಟೊಗಳಿದ್ದ ಫ್ಲೆಕ್ಸ್ ಅಳವಡಿಸಲಾಗಿತ್ತು. ಸ್ವಾತಂತ್ರ್ಯ ಆಚರಣೆ ಮುಗಿದ ಬಳಿಕ ಮಧ್ಯಾಹ್ನ ಹೊತ್ತಿಗೆ ಫ್ಲೆಕ್ಸ್ ಅನ್ನು ಕೆಲವು ಕಿಡಿಗೇಡಿಗಳು ತೆರವುಗೊಳಿಸಲು ಯತ್ನಿಸಿದ್ದಾರೆ. ಅದರ ಬದಲಿಗೆ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕಲು ಮುಂದಾಗಿದ್ದರು. ಈ ವೇಳೆ, ಜನರು ಗುಂಪು ಸೇರತೊಡಗಿದ್ದರು. ಪೊಲೀಸರು ಬಂದು ಉದ್ರಿಕ್ತರನ್ನು ಲಾಠಿ ಬೀಸಿ ಚದುರಿಸಿದ್ದಾರೆ.‌

ಕಿಡಿಗೇಡಿ ಕೃತ್ಯ ಖಂಡಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಸ್ಥಿತಿ ತಲೆದೋರುತ್ತಿದ್ದಂತೆ ಶಿವಮೊಗ್ಗ ನಗರ ಮತ್ತು ಭದ್ರಾವತಿ ನಗರದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಇದರ ಬೆನ್ನಲ್ಲೇ ಶಿವಮೊಗ್ಗ ನಗರದ ಉಪ್ಪಾರಕೇರಿಯಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದೆ. ಕಿಡಿಗೇಡಿಗಳು ಚೂರಿ ಇರಿದು ಪರಾರಿಯಾಗಿದ್ದು ಮತ್ತೆ ಕೋಮು ದ್ವೇಷದ ಕಿಡಿ ಹಚ್ಚಿದಂತಾಗಿದೆ.

Shivamogga and Mangaluru, the two cities in Karnataka that have turned into communally sensitive areas, have once again hit the headlines. This time, over a poster of Hindutva ideologue Veer Savarkar. Right-wing groups put up a poster of Veer Savarkar at the Ameer Ahmed Circle in Shivamogga on Monday. Another group objected as they wanted to install Tipu Sultan’s flex there.