ಸಿದ್ಧರಾಮಯ್ಯ ವಿರುದ್ಧ ಮುಂದುವರೆದ ಆಕ್ರೋಶ ; ಖಾಕಿ ಕೋಟೆ ಮಧ್ಯೆಯೇ ಸಿದ್ದು ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರೊಟೆಸ್ಟ್

19-08-22 02:43 pm       HK News Desk   ಕರ್ನಾಟಕ

ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಶುಕ್ರವಾರವೂ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು, ಆಗಸ್ಟ್ 19: ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಶುಕ್ರವಾರವೂ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಪ್ಪ ತಾಲೂಕಿನ ಮಕ್ಕಿಕೊಪ್ಪ ಗ್ರಾಮದಲ್ಲಿ ಸಾವರ್ಕರ್ ಬಗ್ಗೆ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಕಿಡಿಕಾರಿದ್ದು, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.ನಿನ್ನೆ ಗೋ ಬ್ಯಾಕ್ ಸಿದ್ದು ಅಭಿಯಾನ ಆರಂಭಿಸಿದ್ದ ಸಂಘಟನೆಗಳು, ”ಹಿಂದೂ ವಿರೋಧಿ ಸಿದ್ದು ಈ ಪುಣ್ಯ ಭೂಮಿಗೆ ಬರುವುದು ಬೇಡ” ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಕಪ್ಪು ಬಟ್ಟೆ, ಬಿಜೆಪಿ ಶಾಲು, ಸಾವರ್ಕರ್ ಫೋಟೋ ಹಿಡಿದು ಘೊಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ.

ರಸ್ತೆ ಮಧ್ಯೆ ತಳ್ಳಾಟ ನೂಕಾಟ; 

ಶೃಂಗೇರಿ ಸಮಿಪದ ಮೆಣಸೆ ಗ್ರಾಮದಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಮಾಡಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದಾರೆ. ರಸ್ತೆ ಮಧ್ಯೆ ಎರಡು ಪಕ್ಷದ ಕಾರ್ಯಕರ್ತರ ಮುಖಾಮುಖಿಯಾಗಿದ್ದು, ಎಎಸ್ಪಿ ಎದುರೇ ಎರಡು ಪಕ್ಷದವರಿಂದ ಪರಸ್ಪರ ರಸ್ತೆ ಮಧ್ಯೆ ತಳ್ಳಾಟ ನೂಕಾಟ ನಡೆದಿದೆ.ಹಗ್ಗದ ಮೂಲಕ ಎರಡೂ ಪಕ್ಷದ ಕಾರ್ಯಕರ್ತರನ್ನು ಕೈಕೈ ಮಿಲಾಯಿಸುವುದನ್ನು ತಡೆಯಲು ಯತ್ನಿಸಿದ ಪೊಲೀಸರು.ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಧ ಕಿ.ಮೀ.ವರೆಗೆ ತಳ್ಳಿಕೊಂಡು ಬಂದಿದ್ದಾರೆ.

Pro-Hindu outfits and the BJP on Friday staged protests against former Chief Minister and Leader of Opposition Siddaramaiah, who is on a tour of the Chikkamagaluru district.