ಸಿದ್ದರಾಮಯ್ಯ ತಾಕತ್ತಿದ್ದರೆ ಮಡಿಕೇರಿಯಲ್ಲಿ ಸ್ಪರ್ಧಿಸಲಿ, ಠೇವಣಿ ಇಲ್ಲದಂತೆ ಮಾಡ್ತೀವಿ ; ಟಿಪ್ಪು ಸಂತತಿಯ ಓಲೈಕೆಗೆ ಕಾಂಗ್ರೆಸ್ ದಂಡಯಾತ್ರೆ !

20-08-22 06:53 pm       HK News Desk   ಕರ್ನಾಟಕ

ತಾಕತ್ತಿದ್ದರೆ ಸಿದ್ದರಾಮಯ್ಯ ಮಡಿಕೇರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪಧಿ೯ಸಲಿ. ಠೇವಣಿ ಕಳೆದುಕೊಳ್ಳುವಂತೆ ಮಾಡಿ ಕೊಡಗಿನಲ್ಲಿ ಬಿಜೆಪಿ ತಾಕತ್ತು ತೋರುತ್ತೇವೆ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.

ಮಡಿಕೇರಿ, ಆಗಸ್ಟ್ 2: ತಾಕತ್ತಿದ್ದರೆ ಸಿದ್ದರಾಮಯ್ಯ ಮಡಿಕೇರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪಧಿ೯ಸಲಿ. ಠೇವಣಿ ಕಳೆದುಕೊಳ್ಳುವಂತೆ ಮಾಡಿ ಕೊಡಗಿನಲ್ಲಿ ಬಿಜೆಪಿ ತಾಕತ್ತು ತೋರುತ್ತೇವೆ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.

ಆ.26 ರಂದು ಕಾಂಗ್ರೆಸ್ ಮಡಿಕೇರಿಯಲ್ಲಿ ಸಮಾವೇಶ ಹಮ್ಮಿಕೊಂಡಿರುವುದು ಟಿಪ್ಪು ಕೈಗೊಂಡಿದ್ದ ದಂಡಯಾತ್ರೆಗೆ ಸಮಾನ. ಟಿಪ್ಪು 32 ಬಾರಿ ಕೊಡಗಿನಲ್ಲಿ ಆಕ್ರಮಣ ಮಾಡಿ ಕೊಡಗನ್ನು ನಾಶ ಮಾಡಿದ್ದ. ಈಗ ಟಿಪ್ಪು ಸಂತತಿಯ ಓಲೈಕೆಗಾಗಿ ಕಾಂಗ್ರೆಸ್ ಕೊಡಗಿಗೆ 33 ನೇ ಬಾರಿಗೆ ಬರುತ್ತಿದೆ. ಈ ಬಾರಿ ಕೊಡಗಿನ ಜನ ಟಿಪ್ಪು ಬೆಂಬಲಿಗರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಕೆಜಿ ಬೋಪಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕರಾದ ಕೆಜಿ ಬೋಪಯ್ಯ, ಅಪ್ಪಚ್ಚುರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದಾರೆ. ಮೊಟ್ಟೆ ಎಸೆದವರು ಬಿಜೆಪಿಯವರಾಗಿದ್ದರೆ ಖಂಡಿತಾ ಪಕ್ಷದಿಂದ ಅಮಾನತ್ತು ಮಾಡುತ್ತೇವೆ. ಮೊಟ್ಟೆ ಎಸೆದವರು ಕಾಂಗ್ರೆಸ್ ಬೆಂಬಲಿತ ಎಂಬುದು ಅನೇಕರಿಗೆ ಗೊತ್ತಿದೆ. ಪೊಲೀಸರ ತನಿಖೆಯಲ್ಲಿ ಸತ್ಯ ತಿಳಿಯಲಿದೆ. ದನದ ಮಾಂಸ ಕೊಡವರು ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ, ಟಿಪ್ಪು ಜಯಂತಿ ಆಚರಣೆಗೆ ಕಾರಣರಾಗಿದ್ದ ಸಿದ್ದರಾಮಯ್ಯ ವಿರುದ್ದ ಕೊಡಗಿನಲ್ಲಿ ತೀವ್ರ ಆಕ್ರೋಶವಿದೆ. ಹೀಗಾಗಿಯೇ ಮೊನ್ನೆ ಕಪ್ಪು ಬಾವುಟ ಹಿಡಿದು ಜನರು ಪ್ರತಿಭಟನೆ ನಡೆಸಿದ್ದಾರೆ. ಇದು ಬಿಟ್ಟು ಮೊಟ್ಟೆ ಎಸೆದ ಪ್ರಕರಣದಲ್ಲಿ ಬಿಜೆಪಿ ಕಾಯ೯ಕತ೯ರು ಪಾಲ್ಗೊಂಡಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆ.26 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜನಜಾಗೃತಿ ಸಮಾವೇಶ ನಡೆಸುತ್ತೇವೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಒಂದು ಲಕ್ಷ ಜನರನ್ನು ಸೇರಿಸುವುದು ಸಮಾವೇಶದ ಗುರಿ. ಅಂದು ಲಕ್ಷಾಂತರ ಜನ ಮಡಿಕೇರಿಯಲ್ಲಿ ಸೇರುತ್ತಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಪರಿಸ್ಥಿತಿ ನಿಭಾಯಿಸುವ ಹೊಣೆ ನೀಡಲಾಗುವುದು. ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಆರೋಪ ಮಾಡುತ್ತೆ ಎಂದು ಅವರನ್ನು ಯಾವುದೇ ಕಾರಣಕ್ಕೂ ವಗಾ೯ಯಿಸುವುದಿಲ್ಲ.‌ ಕೊಡಗಿನ ಪೊಲೀಸರ ಮನಸ್ಥೈಯ೯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಹೇಳಿದ್ದಾರೆ.

If Siddaramaiah has guts let me contest from Madikeri slams Appachu Ranjan