ಕುಕ್ಕೆಗೆ ಬಂದಿದ್ದ ಬೆಂಗಳೂರಿನ ಯುವಕ ನದಿಯಲ್ಲಿ ಕಣ್ಮರೆ ; ಹುಡುಕಾಟ 

21-08-22 05:54 pm       HK News Desk   ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನಕ್ಕೆ ಬಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಬೆಂಗಳೂರಿನ ಯುವಕ ನೀರಿನಲ್ಲಿ ಕೊಚ್ಚಿಹೋದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಸುಬ್ರಹ್ಮಣ್ಯ, ಆಗಸ್ಟ್  21 : ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನಕ್ಕೆ ಬಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಬೆಂಗಳೂರಿನ ಯುವಕ ನೀರಿನಲ್ಲಿ ಕೊಚ್ಚಿಹೋದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಮಂಡ್ಯ ಜಿಲ್ಲೆಯ ನಿವಾಸಿ, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಶಿವು(25) ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಣ್ಮರೆಯಾದ ಯುವಕ ಎಂದು ಆತನ ಜೊತೆಗಿದ್ದವರು ತಿಳಿಸಿದ್ದಾರೆ.

ಶಿವು ಬೆಂಗಳೂರಿನ ಇತರ ಸ್ನೇಹಿತರೊಂದಿಗೆ ಕುಕ್ಕೆಗೆ ಆಗಮಿಸಿದ್ದರು. ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ್ದು ಕೆಲ ಹೊತ್ತಿನಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಯುವಕನಿಗೆ ಈಜು ಬರುತ್ತಿತ್ತು. ನೀರಿಗೆ ಹಾರಿದವನು ಮೇಲಕ್ಕೆ ಬಂದಿಲ್ಲ ಯಾಕೆಂದು ಗೊತ್ತಾಗುತ್ತಿಲ್ಲ. ನೀರಿಗೆ ಧುಮುಕಿದ ಸಂದರ್ಭದಲ್ಲಿ ಏನಾದ್ರೂ ಅವಘಡ ಆಗಿದೆಯೇ ಎಂಬ ಬಗ್ಗೆ ಜೊತೆಗಾರರು ಸಂಶಯ ಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿ ಹುಡುಕಾಟ ನಡೆಸಿದ್ದಾರೆ.

Man from Bangalore goes missing at Kukke Subrahmanya river in Mangalore.