ಜೈಪುರದಲ್ಲಿ ಕ್ಯಾಸಿನೋ ಜೂಜಾಟ ; ಕೋಲಾರದ ಇನ್ಸ್ ಪೆಕ್ಟರ್, ತಹಸೀಲ್ದಾರ್, ಪ್ರೊಫೆಸರ್, ನಗರಸಭೆ ಸದಸ್ಯ ಸೇರಿ ಹಲವರ ಬಂಧನ

22-08-22 10:08 pm       Bangalore Correspondent   ಕರ್ನಾಟಕ

ಕೋಲಾರದ ಸೈಬರ್ ಕ್ರೈಮ್ ಪೊಲೀಸ್ ಇನ್ಸ್ ಪೆಕ್ಟರ್ ಆಂಜಿನಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಶ್ರೀನಾಥ್, ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿರುವ ರಮೇಶ್ ಜೈಪುರದಲ್ಲಿ ವೀಕೆಂಡ್ ಪಾರ್ಟಿಯಲ್ಲಿ ಪಾಲ್ಗೊಂಡು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು, ಆಗಸ್ಟ್ 22: ಕೋಲಾರದ ಸೈಬರ್ ಕ್ರೈಮ್ ಪೊಲೀಸ್ ಇನ್ಸ್ ಪೆಕ್ಟರ್ ಆಂಜಿನಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಶ್ರೀನಾಥ್, ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿರುವ ರಮೇಶ್ ಜೈಪುರದಲ್ಲಿ ವೀಕೆಂಡ್ ಪಾರ್ಟಿಯಲ್ಲಿ ಪಾಲ್ಗೊಂಡು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇವರಲ್ಲದೆ, ಕೋಲಾರ ಜಿಲ್ಲೆಯ ಒಟ್ಟು ಏಳು ಮಂದಿ ಬಂಧನಕ್ಕೀಡಾಗಿದ್ದಾರೆ.

ಕೋಲಾರದ ಟೊಮೆಟೋ ವ್ಯಾಪಾರಿ ಛತ್ರಕೋಡಿಹಳ್ಳಿಯ ಸುಧಾಕರ್, ಕೋಲಾರ ನಗರಸಭೆ ನಾಮನಿರ್ದೇಶಿತ ಸದಸ್ಯ ಸತೀಶ್, ಆರ್ ಟಿಓದಲ್ಲಿ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಶಬರೀಶ ಎಂಬವರು ಕೂಡ ಬಂಧನಕ್ಕೀಡಾದವರಲ್ಲಿದ್ದಾರೆ. ಜೈಪುರದ ಸಾಯಿಪುರ ಫಾರ್ಮ್ ನಲ್ಲಿ ಹೈಪ್ರೊಫೈಲ್ ವ್ಯಕ್ತಿಗಳು ಪಾಲ್ಗೊಂಡಿದ್ದ ಜೂಜಾಟ, ಪಾರ್ಟಿ ನಡೆಯುತ್ತಿತ್ತು. ದೆಹಲಿ ಮೂಲದವರು ಜೈಪುರದಲ್ಲಿ ವೀಕೆಂಡ್ ಪಾರ್ಟಿ ಆಯೋಜಿಸಿದ್ದು ಪ್ರತಿ ವ್ಯಕ್ತಿ ಎರಡು ಲಕ್ಷ ರೂ. ಪಾವತಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಗೆ ದಾಳಿ ನಡೆಸಿದ ಪೊಲೀಸರು ಒಟ್ಟು 84 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಏಳು ಮಂದಿ ಕೋಲಾರದವರು ಅನ್ನುವ ಮಾಹಿತಿ ಸಿಕ್ಕಿದೆ.

Jaipur police raids resort, arrests 84 people including 13 women; recovers  44 liquor bottles, 14 luxury cars | India News | Zee News

जयपुर: कसीनो में शराब-शबाब, हुस्न के बीच जीत की खुशी-हार का गम; अब 84  गिरफ्तार | Crime branch team along with Jaisinghpura PS arrested 84 people,  incl 13 women from a farmhouse -

13 ಮಹಿಳೆಯರು, 14 ಲಕ್ಸುರಿ ಕಾರುಗಳು, ಕ್ಯಾಸಿನೋ ಟೇಬಲ್ ಗಳು, 23 ಲಕ್ಷ ರೂಪಾಯಿ ಹಣವನ್ನು ಜೂಜಾಟ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ದೆಹಲಿ ಮೂಲದ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್ ಮತ್ತು ಆತನ ಮಗ ಮನ್ವೇಶ್ ಸೇರಿ ಪಾರ್ಟಿ ಆಯೋಜಿಸಿದ್ದರು. ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ದೆಹಲಿ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳ ಹೈಪ್ರೊಫೈಲ್ ವ್ಯಕ್ತಿಗಳು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ರಾತ್ರಿ ಪಾರ್ಟಿ ಆಯೋಜಿಸಿದ್ದು ಭಾನುವಾರ ಬೆಳಗ್ಗೆ ಜೈಪುರ್ ಎಸಿಪಿ ಅಜಯ್ ಲಾಂಬಾ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನ ಮಂದಿ ಅಧಿಕಾರಿ ವರ್ಗದವರೇ ಆಗಿದ್ದು, ಜೂಜಾಟದಲ್ಲಿ ಪಾಲ್ಗೊಂಡು ಮುಜುಗರಕ್ಕೀಡಾಗಿದ್ದಾರೆ. 

As many as 84 people, including Karnataka Kolar Police inspector and 13 women, have been arrested from a farmhouse in Sahipura under Jaisinghpura police station where a rave party was underway. The arrests were made after a crime branch team of Jaipur police along with Jaisinghpura police raided the farmhouse.